ಅಂಟಾರ್ಟಿಕಾ : Antarctica winter ends: ಅಂಟಾರ್ಟಿಕಾದಲ್ಲಿ ಚಳಿಗಾಲವು ಮುಗಿದಿದ್ದು ಬರೋಬ್ಬರಿ ನಾಲ್ಕು ತಿಂಗಳುಗಳ ಬಳಿಕ ಸೂರ್ಯನ ಕಿರಣಗಳು ಅಂಟಾರ್ಟಿಕಾ ಪ್ರದೇಶದ ಮೇಲೆ ಬಿದ್ದಿದೆ. ಈ ಭಾಗದಲ್ಲಿ ಸೂರ್ಯನ ಕಿರಣಗಳು ಬಿತ್ತು ಅಂದರೆ ಅಲ್ಲಿಗೆ ಚಳಿಗಾಲದ ಅವಧಿ ಮುಗಿದಿದೆ ಎಂದರ್ಥವಾಗಿದೆ. ಅಂಟಾರ್ಟಿಕಾದಲ್ಲಿ ಚಳಿಗಾಲದ ತಿಂಗಳು ಬಹಳ ಕಠಿಣವಾಗಿರುತ್ತದೆ. ಸಂಪೂರ್ಣ ಕತ್ತಲು ಆವರಿಸಿದ ಪ್ರದೇಶದಲ್ಲಿ ತಾಪಮಾನವು ಅತ್ಯಂತ ಕಡಿಮೆ ಇರುತ್ತದೆ. ಯುರೋಪಿಯನ್ ಸ್ಪೇಸ್ ಏಜೆನ್ಸಿಯು ಅಂಟಾರ್ಟಿಕಾದ ಫೋಟೋಗಳನ್ನು ಟ್ವಿಟರ್ನಲ್ಲಿ ಶೇರ್ ಮಾಡಿದೆ.

‘ಇದು ಅಂಟಾರ್ಟಿಕಾದಲ್ಲಿ ಚಳಿಗಾಲದ ಅಂತ್ಯವಾಗಿದೆ. @DrHagson & Concordia ನಿಲ್ದಾಣದ ಸಿಬ್ಬಂದಿ ನಾಲ್ಕು ತಿಂಗಳುಗಳ ಕಾಯುವಿಕೆ ಬಳಿಕ ಸೂರ್ಯನನ್ನು ಸ್ವಾಗತಿಸಿದ್ದಾರೆ ಎಂದು ಯುರೋಪಿಯನ್ ಸ್ಪೇಸ್ ಏಜೆನ್ಸಿ ಟ್ವಿಟರ್ನಲ್ಲಿ ತಿಳಿಸಿದೆ.

ಬರೋಬ್ಬರಿ ನಾಲ್ಕು ತಿಂಗಳುಗಳ ಬಳಿಕ ಅಂಟಾರ್ಟಿಕಾದಲ್ಲಿ ಸೂರ್ಯನ ಮೊದಲ ಕಿರಣಗಳು ಭೂಮಿಯನ್ನು ಸ್ಪರ್ಶಿಸಿದ ದೃಶ್ಯಗಳು ಮನ ಮೋಹಕವಾಗಿದ್ದು ಈ ಅದ್ಭುತ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು ಸಖತ್ ವೈರಲ್ ಆಗಿದೆ.

ಈ ಪ್ರದೇಶದಲ್ಲಿ ಸಮಯಕ್ಕೆ ವಿಚಿತ್ರವಾದ ಗುಣವಾಗಿದೆ. ಇಲ್ಲಿ ಒಂದೇ ಕಾಲಕ್ಕೆ ನಿಮಗೆ ಸಮಯ ಬೇಗ ಹಾಗೂ ಅತ್ಯಂತ ತಡವಾಗಿ ಸಾಗುತ್ತಿರುವಂತೆ ಭಾಸವಾಗುತ್ತದೆ. ಹಗಲು ಹಿಂತಿರುಗಿರುವುದು ಖಂಡಿತವಾಗಿಯೂ ನಮ್ಮೆಲ್ಲರನ್ನು ಹುರಿದುಂಬಿಸಿದೆ ಎಂದು ಹ್ಯಾಗ್ಸನ್ ಹೇಳಿದ್ದಾರೆ.
ಇದನ್ನು ಓದಿ : Manish sisodia attack On Bjp : ಬಿಜೆಪಿ ಸೇರಿದ್ರೆ ಎಲ್ಲಾ ಕೇಸ್ ಕ್ಲೋಸ್-ಮನೀಶ್ ಸಿಸೋಡಿಯಾ
ಇದನ್ನೂ ಓದಿ : Zomato ಪಿಜ್ಜಾ ಆರ್ಡರ್ ರದ್ದು: ಗ್ರಾಹಕರಿಗೆ 10,000 ರೂ. ಪಾವತಿಸಲು ಆದೇಶ
Antarctica winter ends: Take a look at first sunrise after 4 months of darkness