Sania Mirza pulls out of US Open : ಯುಎಸ್ ಓಪನ್ ಟೆನಿಸ್ ನಿಂದ ಹಿಂದೆ ಸರಿದ ಸಾನಿಯಾ ಮಿರ್ಜಾ

ನವದೆಹಲಿ :  ಭಾರತದ ಖ್ಯಾತ ಟೆನಿಸ್ ತಾರೆ, ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಈ ಬಾರಿಯ ಯುಎಸ್ ಓಪನ್ ಟೆನಿಸ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. (Sania Mirza pulls out of US Open)ಈ ಬಗ್ಗೆ ತಮ್ಮ ಇನ್ಸ್ ಸ್ಟಾ ಗ್ರಾಂ ಸ್ಟೋರಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಸಾನಿಯಾ ಮಿರ್ಜಾ ಈ ಮಾಹಿತಿ ಹಂಚಿಕೊಳ್ತಿದ್ದಂತೆ ಅವರ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಸಾನಿಯಾ ಮಿರ್ಜಾ ಕೆನಡಾ ದಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಮೊಣಕೈಗೆ ತೀವ್ರ ತರದ ಪೆಟ್ಟು ಬಿದ್ದಿತ್ತು. ವೈದ್ಯರು  ಕೆಲ ದಿನಗಳ ಕಾಲ ತಾವು ವಿಶ್ರಾಂತಿ ಪಡೆಯಬೇಕೆಂದು ಸಲಹೆ ನೀಡಿದ್ದಾರೆ. ಹೀಗಾಗಿ ಸಾನಿಯಾ ಮಿರ್ಜಾ ಯುಎಸ್ ಓಪನ್ ಟೂರ್ನಿಯಲ್ಲಿ ಆಡದಿರಲು ನಿರ್ಧರಿಸಿದ್ದಾರೆ.

‘ಹಾಯ್ ಸ್ನೇಹಿತರೇ, ನಿಮಗೆ ಒಂದು ತ್ವರಿತವಾದ ಸಂದೇಶವಿದೆ. ಒಂದು ಕೆಟ್ಟ ಸುದ್ದಿ ಇದೆ. ಕಳೆದ ಎರಡು ವಾರದ ಹಿಂದೆ ಕೆನಡಾದಲ್ಲಿ ಆಡುತ್ತಿದ್ದ ವೇಳೆ ನನ್ನ ಮುಂಗೈ, ಹಾಗೂ ಮೊಣಕೈಗೆ ಪೆಟ್ಟು ಬಿದ್ದಿತ್ತು. ಆಗ ಅದು ನನಗೆ, ಅಷ್ಟೊಂದು ಗಂಭೀರವೆಂದು ಅನ್ನಿಸಿರಲಿಲ್ಲ. ಆದ್ರೆ, ನಿನ್ನೆ ಆಸ್ಪತ್ರೆಯಲ್ಲಿ ಸ್ಕ್ಯಾನ್ ಮಾಡಿಸಿದಾಗ ಕೈ ಸ್ನಾಯುಗೆ ತೀವ್ರವಾದ ಪೆಟ್ಟು ಬಿದ್ದಿದೆ ಅನ್ನೋದು ಗೊತ್ತಾಗಿದೆ. ಆದ್ರೆ ಇನ್ನು ಒಂದು ವಾರದಲ್ಲೇ ಯುಎಸ್ ಒಫನ್ ಟೂರ್ನಿ ಆರಂಭವಾಗುತ್ತಿದೆ. ಆದ್ರೆ ನನ್ನ ಕೈ ಗಾಯದ ಸಮಸ್ಯೆಯಿಂದ ಯುಎಸ್ ಓಪನ್ ಆಡದಿರಲು ಸಾಧ್ಯವಾಗುತ್ತಿಲ್ಲ. ಇದು ನನ್ನ ಜೀವನದ ಅತ್ಯಂತ ಕೆಟ್ಟ ಸಮಯವಾಗಿದೆ ಹಾಗೂ ನನ್ನ ಟೆನಿಸ್ ವೃತ್ತಿ ಬದುಕಿನ ವಿದಾಯದ ನಿರ್ಧಾರವನ್ನ ಬದಲಾವಣೆ ಮಾಡಿಕೊಂಡಿದ್ದೇನೆ. ಲವ್ ಸಾನಿಯಾ..’ ಹೀಗಂತಾ ಇನ್ ಸ್ಟಾಗ್ರಾಂನಲ್ಲಿ ಸಾನಿಯಾ ಮಿರ್ಜಾ ತಮ್ಮ ನೋವು ಹಂಚಿಕೊಂಡಿದ್ದಾರೆ.

ಕಳೆದ ತಿಂಗಳು ನಡೆದ ವಿಂಬಲ್ಡನ್ ಗ್ರ್ಯಾಂಡ್ ಸ್ಲ್ಯಾಮ್ ಮಿಕ್ಸೆಡ್ ಡಬಲ್ ಸೆಮಿಫೈನಲ್ ಪಂದ್ಯದಲ್ಲಿ ಸಾನಿಯಾ ಸೊಲುಕಂಡಿದ್ರು. 2009ರಲ್ಲಿ ಆಸ್ಟ್ರೇಲಿಯನ್ ಓಪನ್, ಹಾಗೂ 2012ರಲ್ಲಿ ಫ್ರೆಂಚ್ ಓಪನ್ ಮಿಕ್ಸೆಡ್ ಡಬಲ್ಸ್ ನಲ್ಲಿ ಸಾನಿಯಾ ಮಿರ್ಜಾ ಟ್ರೋಫಿ ಮುಡಿಗೇರಿಸಿಕೊಂಡಿದ್ರು. ಈಗಾಗಲೇ ಸಾನಿಯಾ ಮಿರ್ಜಾ ಆರು ಗ್ರ್ಯಾಂಡ್ ಸ್ಲ್ಯಾಮ್ ಗಳನ್ನ ಪಡೆದುಕೊಂಡಿದ್ದಾರೆ ಅಲ್ಲದೇ, 2014ರಲ್ಲಿ ಯುಎಸ್ ಓಪನ್ ಮಿಕ್ಸೆಡ್ ಡಬಲ್ಸ್ ನಲ್ಲಿ ಪ್ರಶಸ್ತಿ ಗೆದ್ದಿದ್ರು. ಮುಂದಿನ ಸೋಮವಾರದಿಂದ ಆಗಸ್ಟ್ 29ರಿಂದ ಅಮೆರಿಕದಲ್ಲಿ ಯುಎಸ್ ಓಪನ್ ಗ್ರ್ಯಾಂಡ್ ಸ್ಲ್ಯಾಮ್ ಟೆನಿಸ್ ಟೂರ್ನಿ ಆರಂಭವಾಗಲಿದೆ.

ಇದನ್ನೂ ಓದಿ : Rahul Dravid : ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್‌ಗೆ ಕೋವಿಡ್, ಏಷ್ಯಾ ಕಪ್‌ಗೆ ಡೌಟ್ ?

ಇದನ್ನೂ ಓದಿ : Shubman Gill Next captain : ಜಿಂಬಾಬ್ವೆಯಲ್ಲಿ ಚೊಚ್ಚಲ ಶತಕ ಬಾರಿಸಿದವರು ಟೀಮ್ ಇಂಡಿಯಾ ಕ್ಯಾಪ್ಟನ್ ; ಶುಭಮನ್ ಗಿಲ್ ಮುಂದಿನ ನಾಯಕ ?

Sania Mirza pulls out of US Open-tennis-grand slam-bad news

Comments are closed.