Attack on hindhu temple: ಆಸ್ಟ್ರೇಲಿಯಾದ ಹಿಂದೂ ದೇವಾಲಯದ ಮೇಲೆ ದಾಳಿ ನಡೆಸಿದ ಖಲಿಸ್ತಾನ್‌ ಬೆಂಬಲಿಗರು

ಮೆಲ್ಬೋರ್ನ್:‌ (Attack on hindhu temple) ಆಸ್ಟ್ರೇಲಿಯಾದ ಮೆಲ್ಬೋರ್ನ್‌ ನಲ್ಲಿರುವ ಹಿಂದೂ ದೇವಾಲಯದ ಮೇಲೆ ಖಲಿಸ್ತಾನ್‌ ಬೆಂಬಲಿಗರು ದಾಳಿ ನಡೆಸಿದ್ದು, ಭಾರತ ವಿರೋಧಿ ಗೀಚುಬರಹದೊಂದಿಗೆ ವಿರೂಪಗೊಳಿಸಿದ್ದಾರೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ಮೆಲ್ಬೋರ್ನ್‌ ನ ಉತ್ತರ ಉಪನಗರ ಮಿಲ್‌ ಪಾರ್ಕ್‌ ನಲ್ಲಿರುವ ಪ್ರಮುಖ ಸ್ವಾಮಿನಾರಾಯಣ ದೇವಸ್ಥಾನದ ಗೋಡೆಗಳ ಮೇಲೆ ಹಿಂದೂಸ್ತಾನ್‌ ಮುರ್ದಾಬಾದ್‌ ಎಂಬುದಾಗಿ ಗೋಡೆಬರಹ(Attack on hindhu temple)ಗಳನ್ನು ಬರೆಯಲಾಗಿದ್ದು, ಬಿಎಪಿಎಸ್‌ ಸ್ವಾಮಿನಾರಾಯಣ ದೇವಸ್ಥಾನ ಇದನ್ನು ಖಂಡಿಸಿದೆ.”ಈ ವಿಧ್ವಂಸಕ ಕೃತ್ಯಗಳಿಂದ ನಾವು ತೀವ್ರ ದುಃಖಿತರಾಗಿದ್ದೇವೆ ಮತ್ತು ಇದನ್ನು ದ್ವೇಷಿಸುತ್ತೇವೆ. ನಾವು ಶಾಂತಿ ಮತ್ತು ಸೌಹಾರ್ದತೆಗಾಗಿ ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸುತ್ತೇವೆ” ಎಂದು ದೇವಸ್ಥಾನ ಮಂಡಳಿಯವರು ತಿಳಿಸಿದ್ದಾರೆ.

” ಈ ವಿಧ್ವಂಸಕತೆಯು ವಿಕ್ಟೋರಿಯಾದ ಶಾಂತಿಯುತ ಹಿಂದೂ ಸಮುದಾಯಕ್ಕೆ ಸಂಕಟವನ್ನುಂಟುಮಾಡುತ್ತದೆ” ಎಂದು ಉತ್ತರ ಮೆಟ್ರೋಪಾಲಿಟಿನ್‌ ಪ್ರದೇಶದ ಲಿಬರಲ್‌ ಸಂಸದ ಇವಾನ್‌ ಮುಲ್ಹೋಲ್ಯಾಂಡ್‌ ಹೇಳಿದ್ದಾರೆ ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿವೆ.

ಸ್ಥಳೀಯರೊಬ್ಬರು ಈ ಬಗ್ಗೆ ಮಾತನಾಡಿದ್ದು, “ತಾನು ಇದು ಬೆಳಿಗ್ಗೆ ದೇವಸ್ಥಾನಕ್ಕೆ ಬಂದಿದ್ದಾಗ ದೇವಸ್ಥಾನದ ಎಲ್ಲಾ ಗೋಡೆಗಳ ಮೇಲೆ ಖಲಿಸ್ತಾನಿ ದ್ವೇಷದ ಗೋಡೆಬರಹಗಳು ಕಂಡುಬಂದಿವೆ” ಎಂದು ಹೇಳಿದ್ದಾರೆ. ಹಿಂದೂ ಕೌನ್ಸಿಲ್‌ ಅಫ್‌ ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯ ಅಧ್ಯಕ್ಷ ಮಕರಂದ್‌ ಭಾಗವತ್‌ ಅವರು ಆರಾಧನಾ ಸ್ಥಳಗಳ ವಿರುದ್ದ ಯಾವುದೇ ರೀತಿಯ ದ್ವೇಷ ಮತ್ತು ವಿಧ್ವಂಸಕ ಕೃತ್ಯಗಳು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದು ಅದನ್ನು ಖಂಡಿಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ : Afghanistan blast : ಕಾಬೂಲ್‌ನ ತಾಲಿಬಾನ್‌ ವಿದೇಶಾಂಗ ಸಚಿವಾಲಯದಲ್ಲಿ ಭಾರೀ ಸ್ಫೋಟ : 3 ಸಾವು

ಇದನ್ನೂ ಓದಿ : US judge Surendran.K patil: ಅಂದು ಶಾಲೆ ಬಿಟ್ಟು ಮನೆಯಲ್ಲಿ ಬೀಡಿ ಕಟ್ಟುತ್ತಿದ್ದ ಬಾಲಕ, ಇಂದು ಅಮೇರಿಕಾದ ನ್ಯಾಯಾಧೀಶ

ಇದನ್ನೂ ಓದಿ : Humpback whale video viral: ತಾಯಿಯ ಪ್ರವೃತ್ತಿಯನ್ನು ಪ್ರತಿಬಿಂಬಿಸುವ ಸುಂದರ ಚಿತ್ರಣ: ಹಂಪ್‌ಬ್ಯಾಕ್‌ ತಿಮಿಂಗಿಲದ ವಿಡಿಯೋ ವೈರಲ್‌

ಕಳೆದ ವರ್ಷ ಸೆಪ್ಟೆಂಬರ್‌ ನಲ್ಲಿ ಕೆನಡಾದ ಬಿಎಪಿಎಸ್‌ ಸ್ವಾಮಿನಾರಾಯಣ ಮಂದಿರವನ್ನು ಕೆನಡಾದ ಖಲಿಸ್ತಾನಿ ಉಗ್ರಗಾಮಿಗಳು ಭಾರತ ವಿರೋಧಿ ಗೋಡೆಬರಹಗಳ ಮೂಲಕ ವಿರೂಪಗೊಳಿಸಿದ್ದರು. ಇದನ್ನು ಭಾರತ ತೀವ್ರವಾಗಿ ಖಂಡಿಸಿತ್ತು ಮತ್ತು ಅಪರಾಧಿಗಳ ವಿರುದ್ದ ಕಠಿಣ ಕ್ರಮಕ್ಕೆ ಕರೆ ನೀಡಿತ್ತು.

Attack on hindhu temple: Khalistan supporters attacked Hindu temple in Australia

Comments are closed.