Samsung Galaxy F04 : ಬಜೆಟ್‌ ಫ್ರೆಂಡ್ಲಿ ಸ್ಮಾರ್ಟ್‌ಫೋನ್‌ ಸ್ಯಾಮ್‌ಸಂಗ್‌ ಗ್ಯಾಲಕ್ಸಿ F04 ಇಂದಿನಿಂದ ಮಾರಾಟ ಪ್ರಾರಂಭ; ಬೆಲೆ ಮತ್ತು ವೈಶಿಷ್ಟ್ಯಗಳು ಹೀಗಿವೆ…

ಸ್ಯಾಮ್‌ಸಂಗ್‌ ಕಳೆದ ವಾರ ಭಾರತದಲ್ಲಿ ತನ್ನ ಹೊಚ್ಚ ಹೊಸ ಬಜೆಟ್‌ ಫ್ರೆಂಡ್ಲಿ ಸ್ಮಾರ್ಟ್‌ಫೋನ್‌ ಗ್ಯಾಲಕ್ಸಿ F04 (Samsung Galaxy F04) ಅನ್ನು ಪರಿಚಯಿಸಿತ್ತು . ಇಂದಿನಿಂದ ಆ ಫೋನ್‌ನ ಮಾರಾಟ ಪ್ರಾರಂಭವಾಗಿದೆ. ಸ್ಯಾಮ್‌ಸಂಗ್‌ ಗ್ಯಾಲಕ್ಸಿ F04 ಯುನಿಬಾಡಿಯಿಂದ ನಿರ್ಮಾಣವಾಗಿದೆ. ಇದು ಆಕ್ಟಾ-ಕೋರ್ ಪ್ರೊಸೆಸರ್, ದೊಡ್ಡ ಡಿಸ್ಪ್ಲೇ, ವರ್ಚುವಲ್ RAM ವಿಸ್ತರಣೆ ಮತ್ತು 5000mAh ಬ್ಯಾಟರಿ, ಮುಂತಾದ ವೈಶಿಷ್ಟ್ಯಗಳನ್ನು ಇದು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ನ ಬೆಲೆ ಮತ್ತು ವೈಶಿಷ್ಟ್ಯಗಳು ಹೀಗಿವೆ.

ವೈಶಿಷ್ಟ್ಯತೆಗಳು :
ಸ್ಯಾಮ್‌ಸಂಗ್‌ ಗ್ಯಾಲಕ್ಸಿ F04 ಸ್ಮಾರ್ಟ್‌ಫೋನ್‌, HD+ ರೆಸಲ್ಯೂಷನ್‌ ಹೊಂದಿರುವ 6.5 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದರ ರಿಫ್ರೆಶ್‌ ದರವು 60Hz ಆಗಿದೆ. ಡಿಸ್‌ಪ್ಲೇಯಲ್ಲಿ ವಾಟರ್‌ಡ್ರಾಪ್ ನಾಚ್ ಹೊಂದಿದ್ದು, ಅದು ಸೆಲ್ಫೀ ಕ್ಯಾಮೆರಾವನ್ನು ಹೊಂದಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೊ ಪಿ35 ಪ್ರೊಸೆಸರ್‌ನಿಂದ ಚಲನೆ ಪಡೆದುಕೊಳ್ಳಲಿದೆ. ಇದನ್ನು 12nm ಫ್ಯಾಬ್ರಿಕೇಶನ್ ಪ್ರಕ್ರಿಯೆಯಲ್ಲಿ ನಿರ್ಮಿಸಲಾಗಿದೆ. ಈ ಫೋನ್‌ IMG PowerVR GE8320 GPU ಅನ್ನು ಸಹ ಒಳಗೊಂಡಿದೆ. ಇದರ ಚಿಪ್‌ಸೆಟ್ ಅನ್ನು 4GB RAM ಮತ್ತು 64GB ಆಂತರಿಕ ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ. ಗ್ಯಾಲಕ್ಸಿ F04 ಸ್ಮಾರ್ಟ್‌ಫೋನ್‌ ಹೆಚ್ಚುವರಿ 4GB ಯಷ್ಟು RAM ಅನ್ನು ವಿಸ್ತರಿಸಲು ಅನುವು ಮಾಡಿಕೊಡುತ್ತದೆ.ಜೊತೆಗೆ ಇದು ಮೈಕ್ರೊ SD ಕಾರ್ಡ್ ಸ್ಲಾಟ್ ಹೊಂದಿರುವುದರಿಂದ ಮೆಮೊರಿಯನ್ನು ಇನ್ನಷ್ಟು ವಿಸ್ತರಿಸಬಹುದಾಗಿದೆ. ಇದು ಕಾರ್ಯನಿರ್ವಹಿಸಲು ಆಂಡ್ರಾಯ್ಡ್‌ 12 OS ಅನ್ನು ಆಧರಿಸಿದೆ.

ಇನ್ನು ಕ್ಯಾಮೆರಾದ ವಿಷಯದಲ್ಲಿ, ಸ್ಯಾಮ್‌ಸಂಗ್‌ ಗ್ಯಾಲೆಕ್ಸಿ F04 ಡ್ಯುಯಲ್‌ ಕ್ಯಾಮೆರಾ ಸೆಟಪ್‌ನೊಂದಿಗೆ ಬರಲಿದೆ. 13MP ಪ್ರೈಮರಿ ಶೂಟರ್ ಮತ್ತು 2MP ಡೆಪ್ತ್ ಸೆನ್ಸರ್ ಅನ್ನು ಒಳಗೊಂಡದೆ. ಸೆಲ್ಫಿ ಮತ್ತು ವೀಡಿಯೊ ಕರೆಗಳನ್ನು 5MP ಯ ಮುಂಭಾಗದ ಕ್ಯಾಮೆರಾ ನಿರ್ವಹಿಸುತ್ತದೆ. ಈ ಸ್ಮಾರ್ಟ್‌ಫೋನ್‌ನ ಇತರ ವೈಶಿಷ್ಟ್ಯಗಳೆಂದರೆ 4G VoLTE, ಡ್ಯುಯಲ್ ಸಿಮ್, ಬ್ಲೂಟೂತ್ v5.1, ಮೈಕ್ರೋ SD ಕಾರ್ಡ್ ಸ್ಲಾಟ್ ಮತ್ತು USB ಟೈಪ್-ಸಿ ಪೋರ್ಟ್ ಅನ್ನು ಒಳಗೊಂಡಿವೆ. ಹ್ಯಾಂಡ್‌ಸೆಟ್ 15W ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯಿಂದ ಪ್ಯಾಕ್‌ ಆಗಿದೆ.

ಬೆಲೆ ಮತ್ತು ಲಭ್ಯತೆ :
ಸ್ಯಾಮ್‌ಸಂಗ್‌ ಗ್ಯಾಲಕ್ಸಿ F04 ಸ್ಮಾರ್ಟ್‌ಫೋನ್‌ 9,499 ರೂ.ಗಳಿಗೆ ಭಾರತದಲ್ಲಿ ಮಾರಾಟ ಪ್ರಾರಂಭಿಸಿದೆ. ಜೊತೆಗೆ ಡಿಸ್ಕೌಂಟ್‌ ಅನ್ನು ನೀಡಿದೆ. ಈ ಫೋನ್‌ ಅನ್ನು ಇಂದು ಖರೀದಿಸಿದರೆ 1,000 ರೂಗಳ ರಿಯಾಯಿತಿ ಹಾಗೂ ICICI ಕ್ರೆಡಿಟ್‌ ಕಾರ್ಡ್‌ ಮೂಲಕ ಮಾಡಿದ ಖರೀದಿಗೆ ಹೆಚ್ಚುವರಿ 1000 ರೂ.ಗಳ ರಿಯಾಯಿತಿಯನ್ನು ನೀಡಿದೆ. ಅಂದರೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ F04 ಅನ್ನು 7,499 ರೂ.ಗಳಿಗೆ ಖರೀದಿಸಬಹುದಾಗಿದೆ. ಇನ್ನು ಈ ಫೋನ್‌ ಅನ್ನು ಸ್ಯಾಮ್‌ಸಂಗ್‌ನ ಅಧಿಕೃತ ವೆಬ್‌ಸೈಟ್‌ ನಿಂದ ಮತ್ತು ಫ್ಲಿಪ್‌ಕಾರ್ಟ್‌ ಮೂಲಕ ಖರೀದಿಸಬಹುದಾಗಿದೆ. ಇದು ಖರೀದುದಾರರಿಗೆ ಓಪಲ್‌ ಗ್ರೀನ್‌ ಮತ್ತು ಜೇಡ್‌ ಪರ್ಪಲ್‌ ಬಣ್ಣಗಳ ಆಯ್ಕೆಯನ್ನು ನೀಡಿದೆ.

ಇದನ್ನೂ ಓದಿ : National Youth Day 2023: ರಾಷ್ಟ್ರೀಯ ಯುವ ದಿನ : ಇಂದು ಮಹಾನ್‌ ಮಾನವತಾವಾದಿ ಸ್ವಾಮಿ ವಿವೇಕಾನಂದರ ಜನ್ಮದಿನ

ಇದನ್ನೂ ಓದಿ : iQOO 11 5G Smartphone : ಇಂದು ಭಾರತದಲ್ಲಿ ಬಿಡುಗಡೆಯಾಗಲಿರುವ iQOO 11 5G ಸ್ಮಾರ್ಟ್‌ಫೋನ್‌

(Samsung Galaxy F04 goes on sale in India from January 12, 2023)

Comments are closed.