beef hung outside three temples : ದೇಗುಲದ ಎದುರು ಗೋಮಾಂಸ ನೇತು ಹಾಕಿದ ದುಷ್ಕರ್ಮಿಗಳು

beef hung outside three temples : ಹಿಂದೂ ಧರ್ಮದಲ್ಲಿ ದೇಗುಲಗಳಿಗೆ ಅದರದ್ದೇ ಆದ ಮಹತ್ವವಿದೆ. ಬಹುತೇಕ ದೇವಸ್ಥಾನಗಳಲ್ಲಿ ಮಾಂಸ ಪ್ರವೇಶ ನಿಷಿದ್ಧವಾಗಿದೆ. ಅದರಲ್ಲೂ ಗೋವಿಗೆ ಹಿಂದೂ ಧರ್ಮದಲ್ಲಿ ದೇವರ ಸ್ಥಾನ ನೀಡಿರುವುದರಿಂದ ಗೋ ಮಾಂಸವನ್ನು ಎಲ್ಲಿಯೂ ಬಳಕೆ ಮಾಡಲಾಗೋದಿಲ್ಲ. ಆದರೆ ಈ ಎಲ್ಲಾ ಮಾತಿಗೆ ಅಪಚಾರ ಎಂಬಂತ ಘಟನೆಯೊಂದು ಬಾಂಗ್ಲಾದೇಶದಲ್ಲಿ ನಡೆದು ಹೋಗಿದೆ.

ಬಾಂಗ್ಲಾದೇಶದ ಹತಿಬಂಧ ಉಪಜಿಲಾದ ಗೆಂಡುಕುರಿ ಗ್ರಾಮದ ಮೂರು ಹಿಂದೂ ದೇವಾಲಯಗಳು ಹಾಗೂ ಮನೆಯೊಂದರ ಬಾಗಿಲ ಎದುರು ಪ್ಲಾಸ್ಟಿಕ್​ ಚೀಲಗಳಲ್ಲಿ ಗೋ ಮಾಂಸಗಳನ್ನು ತುಂಬಿ ನೇತು ಹಾಕಿದ ವಿಚಿತ್ರ ಘಟನೆಯೊಂದು ವರದಿಯಾಗಿದೆ. ಶುಕ್ರವಾರ ರಾತ್ರಿ ಈ ಘಟನೆ ಸಂಭವಿಸಿದ್ದು ಗೆಂಡುಕುರಿ ಕ್ಯಾಂಪ್​​ನ ಪಾರ ಶ್ರೀ ರಾಧಾ ಗೋವಿಂದ ಮಂದಿರ, ಗೆಂಡುಕುರಿ ಕುತ್ತಿಪರ ಕಾಳಿ ಮಂದಿರ , ಗೆಂಡುಕುರಿ ಬತ್ತಲ ಕಾಳಿ ಮಂದಿರದ ಬಾಗಿಲುಗಳಲ್ಲಿ ಗೋಮಾಂಸವನ್ನು ತುಂಬಿದ ಪ್ಲಾಸ್ಟಿಕ್​​ ಚೀಲಗಳು ಪತ್ತೆಯಾಗಿವೆ. ಈ ಬಗ್ಗೆ ಹತಿಬಂಧ ಉಪಜಿಲ್ಲಾ ಪೂಜಾ ಉದ್ಯಾಪನ ಪರಿಷತ್ತಿನ ಅಧ್ಯಕ್ಷ ದಿಲೀಪ್​ ಕುಮಾರ್​ ಸಿಂಗ್​​ ಅಧಿಕೃತ ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧ ಆರೋಪಿಗಳ ಪತ್ತೆಗಾಗಿ ಹತಿಬಂಧ ಪೊಲೀಸ್​ ಠಾಣೆಯಲ್ಲಿ ನಾಲ್ಕು ದೂರುಗಳನ್ನು ದಾಖಲಿಸಿರೋದಾಗಿ ದಿಲೀಪ್​ ಕುಮಾರ್​ ಸಿಂಗ್​ ಹೇಳಿದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಹತಿಬಂಧ ಪೊಲೀಸ್​ ಠಾಣೆಯ ಅಧಿಕಾರಿ ಇರ್ಷಾದುಲ್​ ಆಲಂ, ಈ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನೂ ಪತ್ತೆ ಮಾಡಿ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಹೇಳಿದರು. ಇನ್ನು ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿಂದೂಗಳು ಗ್ರಾಮದ ಶ್ರೀ ರಾಧಾ ಗೋವಿಂದ ದೇವಸ್ಥಾನದ ಎದುರು ಜಮಾಯಿಸಿದ್ದಾರೆ. ಈ ಘಟನೆಯಿಂದಾಗಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವವರೆಗೂ ನಾವು ದೇವಸ್ಥಾನದ ಎದುರು ಪ್ರತಿಭಟನೆ ಮುಂದುವರಿಸಲಿದ್ದೇವೆ ಎಂದು ಹೇಳಿದರು.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಗೆ ಘಟನೆ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಪೊಲೀಸರು ಶೀಘ್ರದಲ್ಲೇ ಸ್ಥಳೀಯರನ್ನು ಬಂಧಿಸಲಾಗುವುದು ಎಂದು ನಮಗೆ ಭರವಸೆ ನೀಡಿದ್ದಾರೆ ಎಂದು ದಿಲೀಪ್​ ಸಿಂಗ್​ ಹೇಳಿದರು. ಅಲ್ಲದೇ ಈ ಘಟನೆಯು ಡಿಸೆಂಬರ್ 26ರಲ್ಲಿ ನಡೆದ ಸ್ಥಳೀಯ ಒಕ್ಕೂಟಗಳ ಚುನಾವಣೆಗೆ ಸಂಬಂಧಿಸಿದ್ದರಬಹುದೇ ಎಂದು ಶಂಕಿಸಲಾಗಿದೆ.

ಇದನ್ನು ಓದಿ :gold mine collapse : ಸುಡಾನ್​​ನಲ್ಲಿ ಚಿನ್ನದ ಗಣಿ ಕುಸಿದು 38 ಮಂದಿ ಸಾವು…!

ಇದನ್ನೂ ಓದಿ : Chinese city of Xian : ಚೀನಾದ ಕ್ಸಿಯಾನ್​ ನಗರದಲ್ಲಿ ಕೊರೊನಾ ರಣಕೇಕೆ: ಮುಂದುವರಿದ ಲಾಕ್​ಡೌನ್​

Bags with beef hung outside three temples in Bangladesh

Comments are closed.