dk suresh ashwath narayan : ಸಿಎಂ ಬೊಮ್ಮಾಯಿ ಎದುರಲ್ಲೇ ಸಚಿವ ಅಶ್ವಥ್‌ ನಾರಾಯಣ್‌, ಸಂಸದ ಡಿ.ಕೆ.ಸುರೇಶ್‌ ಜಟಾಪಟಿ

ರಾಮನಗರ : ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರ ಎದುರಲ್ಲೇ ಸಚಿವ ಅಶ್ವಥ್‌ ನಾರಾಯಣ್‌ ಹಾಗೂ ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್‌ (dk suresh ashwath narayan) ನಡುವೆ ಜಟಾಪಟಿ ನಡೆದಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆಯ ನಡುವಲ್ಲೇ ಸಚಿವರು ಹಾಗೂ ಸಂಸದರ ನಡುವೆ ಕೈ ಕೈ ಮಿಲಾಯಿಸುವಷ್ಟರ ಮಟ್ಟಿಗೆ ಹೋಗಿದ್ದ ಪರಿಸ್ಥಿತಿಯನ್ನು ಸಿಎಂ ಸಮಾಧಾನ ಪಡಿಸುವ ಮೂಲಕ ವಾತಾವರಣವನ್ನು ತಿಳಿಗೊಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದು ರಾಮನಗರ ಜಿಲ್ಲೆಯ ಮಾಗಡಿ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದರು. ಈ ವೇಳೆಯಲ್ಲಿ ಮಾಗಡಿ ಕ್ಷೇತ್ರಕ್ಕೆ 195 ಕೋಟಿ ಅನುದಾನ ಹಾಗೂ ರಾಮನಗರ, ಕನಕಪುರ, ಚನ್ನಪಟ್ಟಣಕ್ಕೆ ಮೀಸಲಿಟ್ಟಿರುವ 95 ಕೋಟಿ ರೂಪಾಯಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಇದೇ ವೇಳೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ನಿರ್ಮಾಣಗೊಂಡಿದ್ದ ಕೆಂಪೇಗೌಡ ಹಾಗೂ ಅಂಬೇಡ್ಕರ್‌ ಪುತ್ಥಳಿಯನ್ನು ಅನಾವರಣಗೊಳಿಸಿದ್ದರು. ಆದರೆ ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್‌ ಹಾಗೂ ವಿಧಾನಪರಿಷತ್‌ ಸದಸ್ಯ ಎಸ್.‌ ರವಿ ಅವರು ಕಾರ್ಯಕ್ರಮಕ್ಕೆ ಬರುವ ಮುನ್ನವೇ ಅಂಬೇಡ್ಕರ್‌ ಪುತ್ಥಳಿ ಅನಾವರಣಗೊಳಿಸಿರುವ ಕ್ರಮಕ್ಕೆ ಕಾಂಗ್ರೆಸ್‌ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ.

minister ashwath narayan vs dk suresh clash in cm basavaraj bommai programs 2

ಕಾಂಗ್ರೆಸ್‌ ಕಾರ್ಯಕರ್ತರು ಗದ್ದಲ ಎಬ್ಬಿಸಲು ಮುಂದಾದ ವೇಳೆಯಲ್ಲಿ ಸಂಸದ ಡಿ.ಕೆ.ಸುರೇಶ್‌ ಅವರು ಕಾರ್ಯಕರ್ತರನ್ನು ಸಮಾಧಾನ ಪಡಿಸಿದ್ದರು. ಸಿಎಂ ವೇದಿಕೆಗೆ ಆಗಮಿಸುವ ವೇಳೆಯಲ್ಲಿಯೂ ಬೊಮ್ಮಾಯಿ ಅವರಿಗೆ ಧಿಕ್ಕಾರ ಕೂಗಿದ್ದಾರೆ. ಅಲ್ಲದೇ ಡಿ.ಕೆ.ಸುರೇಶ್‌ ಅವರಿಗೆ ಜೈಕಾರ ಕೂಗಿದಿದ್ದಾರೆ. ನಂತರದಲ್ಲಿ ಅಶ್ವಥ್‌ ನಾರಾಯಣ ಭಾಷಣದ ವೇಳೆಯಲ್ಲಿ ರಾಮನಗರದ ಅಭಿವೃದ್ದಿಯನ್ನು ಬಿಜೆಪಿ ಮಾತ್ರವೇ ಮಾಡಿದೆ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ. ಇದರಿಂದ ಕೆರಳಿದ ಡಿ.ಕೆ.ಸುರೇಶ್‌ ಅವರು ಅಶ್ವಥ್‌ ನಾರಾಯಣ್‌ ಅವರನ್ನು ವೇದಿಕೆಯ ಮೇಲೆಯೇ ತರಾಟೆಗೆ ತೆಗೆದುಕೊಂಡಿದ್ದಾರೆ.

minister ashwath narayan vs dk suresh clash in cm basavaraj bommai programs 3

ಸಚಿವ ಅಶ್ವಥ್‌ ನಾರಾಯಣ್‌ ಹಾಗೂ ಸಂಸದರ ನಡುವಿನ ಜಟಾಪಟಿ ಕೈ ಕೈ ಮೀಲಾಯಿಸುವ ಹಂತಕ್ಕೂ ತಲುಪಿತ್ತು. ನಂತರದಲ್ಲಿ ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಸಮಾಧಾನ ಪಡಿಸಿದ್ದಾರೆ. ಸಿಎಂ ಬಸವರಾಜ್‌ ಬೊಮ್ಮಾಯಿ ಅವರ ಸಮ್ಮುಖದಲ್ಲಿಯೇ ಎಲ್ಲಾ ಘಟನೆಗಳು ನಡೆದಿತ್ತು. ಸಚಿವರಾದ ಡಾ.ಕೆ.ಸುಧಾಕರ್, ಅಶ್ವಥ್‌ ನಾರಾಯಣ, ಬೈರತಿ ಬಸವರಾಜ್, ಸಂಸದ ಡಿ.ಕೆ.ಸುರೇಶ್, ಶಾಸಕಿ ಅನಿತಾ ಕುಮಾರಸ್ವಾಮಿ ಸಾಥ್ ಉಪಸ್ಥಿತರಿದ್ದರು.

ಇದನ್ನೂ ಓದಿ : ರಾಜ್ಯದಲ್ಲಿ ಸಂಪುಟ ಸಂಕ್ರಾಂತಿ ಸರ್ಕಸ್ : ಸಿಎಂ ಮನೆಗೆ ದೌಡಾಯಿಸಿದ ಅಕಾಂಕ್ಷಿಗಳು

ಇದನ್ನೂ ಓದಿ : ಡಿಕೆಶಿ ಪಾದಯಾತ್ರೆಗೆ ನಾದಬ್ರಹ್ಮನ ಸಾಥ್ : ಹಾಡು ಬರೆದುಕೊಡ್ತಾರಂತೆ ಹಂಸಲೇಖ

( minister ashwath narayan vs dk suresh clash in cm basavaraj bommai programs)

Comments are closed.