Virat Kohli KL Rahul : ಎರಡನೇ ಟೆಸ್ಟ್‌ ಪಂದ್ಯದಿಂದ ಹೊರಬಿದ್ದ ವಿರಾಟ್ ಕೊಹ್ಲಿ, ಟೆಸ್ಟ್ ತಂಡಕ್ಕೆ KL ರಾಹುಲ್ ನಾಯಕ

ಜೋಹಾನ್ಸ್‌ಬರ್ಗ್‌ : ದಕ್ಷಿಣ ಆಫ್ರಿಕಾ ವಿರುದ್ದ ( Virat Kohli KL Rahul) ಎರಡನೇ ಟೆಸ್ಟ್‌ ಪಂದ್ಯದಲ್ಲಿ ನಾಯಕ ವಿರಾಟ್‌ ಕೊಯ್ಲಿ ಹೊರ ನಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡಿಗ ಕೆ.ಎಲ್.ರಾಹುಲ್‌ ನಾಯಕತ್ವದಲ್ಲಿ ಟೀಂ ಇಂಡಿಯಾ ಕಣಕ್ಕೆ ಇಳಿದಿದೆ. ಕನ್ನಡಿಗ ಮಯಾಂಕ್‌ ಅಗರ್ವಾಲ್‌, ಚೇತೇಶ್ವರ ಪೂಜಾರ ಹಾಗೂ ಅಜಿಂಕ್ಯಾ ರಹಾನೆ ನಿರಾಸೆ ಮೂಡಿಸಿದ್ದಾರೆ. ವಿರಾಟ್‌ ಕೊಯ್ಲಿ ಬದಲು ತಂಡ ಸೇರಿಕೊಂಡಿರುವ ಹನುಮ ವಿಹಾರಿ ಜೊತೆಗೆ ರಾಹುಲ್‌ ಬ್ಯಾಟಿಂಗ್‌ ನಡೆಸುತ್ತಿದ್ದಾರೆ.

ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲಿ ಬೆನ್ನು ನೋವಿಗೆ ತುತ್ತಾಗಿರುವ ವಿರಾಟ್‌ ಕೊಯ್ಲಿ ಪಂದ್ಯದಿಂದ ಹೊರಗುಳಿದಿದ್ದಾರೆ. ರಾಹುಲ್‌ ನಾಯಕನಾಗಿದ್ರೆ, ಜಸ್ಪ್ರಿತ್‌ ಬೂಮ್ರಾ ಉಪನಾಯಕರಾಗಿದ್ದಾರೆ. ಬೆನ್ನು ಮೂಳೆಯ ಸೆಳೆತಕ್ಕೆ ಒಳಗಾಗಿರುವ ವಿರಾಟ್‌ ಕೊಯ್ಲಿ ಅವರಿಗೆ ಪಿಸಿಯೋ ವಿಶ್ರಾಂತಿ ಸೂಚಿಸಿದ ಹಿನ್ನೆಲೆಯಲ್ಲಿ ಟೆಸ್ಟ್‌ ಪಂದ್ಯಕ್ಕೆ ನಾಯಕನಾಗುವ ಅದೃಷ್ಟ ಕೆ.ಎಲ್.ರಾಹುಲ್‌ ಅವರಿಗೆ ಒಲಿದಿದೆ. ಮೊದಲ ಟೆಸ್ಟ್‌ನಲ್ಲಿ ಅದ್ಬುತ ಬ್ಯಾಟಿಂಗ್‌ ಪ್ರದರ್ಶಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಕೆಎಲ್ ರಾಹುಲ್, ರೋಹಿತ್ ಶರ್ಮಾ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ನಾಯಕರಾಗಿಯೂ ಆಯ್ಕೆಯಾಗಿದ್ದರು.

ಭಾರತದ 20ನೇ ಟೆಸ್ಟ್ ನಾಯಕರಾಗಿರುವ ರಾಹುಲ್, ಸೆಂಚುರಿಯನ್‌ನಲ್ಲಿ ನಡೆಸಿದ್ದ ಬ್ಯಾಟಿಂಗ್‌ ಎರಡನೇ ಟೆಸ್ಟ್‌ ಪಂದ್ಯದಲ್ಲಿಯೂ ಮುಂದುವರಿಸುತ್ತಾರಾ ಅನ್ನೋದನ್ನು ಕಾದು ನೋಡಬೇಕಾಗಿದೆ. ಟೀಂ ಇಂಡಿಯಾದ ನಾಯಕನಾಗುವುದು ಪ್ರತಿಯೊಬ್ಬ ಭಾರತೀಯನ ಕನಸು, ನಿಜವಾಗಿಯೂ ಗೌರವ ಮತ್ತು ಈ ಸವಾಲನ್ನು ಎದುರು ನೋಡುತ್ತಿದ್ದೇನೆ ಎಂದು ರಾಹುಲ್‌ ಹೇಳಿದ್ದಾರೆ.

2020 ರ ಆರಂಭದಿಂದ 14 ಪಂದ್ಯಗಳಲ್ಲಿ 26.08 ಸರಾಸರಿಯಲ್ಲಿ ಕೇವಲ 652 ರನ್ ಗಳಿಸಿರುವ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಫಾರ್ಮ್ ಸ್ವಲ್ಪ ಸಮಯದವರೆಗೆ ಗಮನ ಸೆಳೆಯುತ್ತಿದೆ. ಭಾರತ ವಾಂಡರರ್ಸ್‌ನಲ್ಲಿ ಶತಕ ಮತ್ತು 2 ಅರ್ಧಶತಕಗಳನ್ನು ಒಳಗೊಂಡಂತೆ ಕೊಹ್ಲಿ 310 ರನ್ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ದ ಭಾರತ ಸೆಂಚುರಿಯನ್ ಟೆಸ್ಟ್ ಗೆದ್ದು ಇತಿಹಾಸ ನಿರ್ಮಿಸಿದೆ. ಐದನೇ ದಿನದಾಟದಲ್ಲಿ ದಕ್ಷಿಣ ಆಫ್ರಿಕಾವನ್ನು 113 ರನ್‌ಗಳಿಂದ ಸೋಲಿಸಿದ ಟೀಮ್ ಇಂಡಿಯಾ ಮೊದಲ ಬಾರಿಗೆ ಪಂದ್ಯವನ್ನು ಗೆದ್ದುಕೊಂಡಿತು. ಸೆಂಚುರಿಯನ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿದ ಏಷ್ಯಾದ ಮೊದಲ ತಂಡ ಭಾರತ. ನಮ್ಮ ತಂಡದಲ್ಲಿ ನನಗೆ ಶತ್ರುಗಳಿದ್ದಾರೆ, ಅವರ ಮುಂದೆ ಆಡಲು ಭಯಪಡುತ್ತೇನೆ ಎಂದು ಕೆಎಲ್ ರಾಹುಲ್ ಹೇಳಿದ್ದರು.

ಇದನ್ನೂ ಓದಿ : ನಮ್ಮ ತಂಡದಲ್ಲಿ ನನಗೆ ಶತ್ರುಗಳಿದ್ದಾರೆ ಎಂದ ಕೆಎಲ್ ರಾಹುಲ್

ಇದನ್ನೂ ಓದಿ :  ವಿವಾದಗಳಿಗೆ ವಿರಾಮ ನೀಡಿ ಭಾರತ ತಂಡವನ್ನು ಅತ್ಯುತ್ತಮ ತಂಡವಾಗಿಸಲು ಸಹಕರಿಸೋಣ: ಚೇತನ್‌ ಶರ್ಮ

(IND vs SA Test: Virat Kohli Out, KL Rahul captain for Test Team)

Comments are closed.