Mary Christmas:ಮೇರಿ ಕ್ರಿಸ್‌ಮಸ್ ನಲ್ಲಿ ವಿಜಯ ಸೇತುಪತಿ ಜೊತೆಯಾದ ನಟಿ ಕತ್ರಿನಾ ಕೈಫ್

(Mary Christmas)ಬಾಲಿವುಡ್‌ನ ಬಹುಬೇಡಿಕೆಯ ಖ್ಯಾತ ನಟಿ ಕತ್ರಿನಾ ಕೈಫ್‌ ಸದ್ಯ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಕ್ಕಿ ಕೌಶಲ್‌ ಜೊತೆ ಇತ್ತೀಚಿಗಷ್ಟೇ ಹಸೆಮಣೆ ಏರಿದ್ದ ಕತ್ರಿನಾ, ವಿವಾಹದ ನಂತರದಲ್ಲಿ ಹಲವು ಸಿನಿಮಾಗಳಿಗೆ ಡೇಟ್ಸ್‌ ನೀಡಿದ್ದಾರೆ. ಸದ್ಯ “ಮೇರಿ ಕ್ರಿಸ್‌ ಮಸ್‌” (Mary Christmas)ಸಿನಿಮಾ ಚಿತ್ರೀಕರಣದಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ. ಕತ್ರಿನಾ ಕೈಫ್‌ (Katrina Kaif)ಸಿನಿಮಾ ಶೂಟಿಂಗ್‌ ವೇಳೆಯಲ್ಲಿ ತೆಗೆದ ಕೆಲವೊಂದು ಪೋಟೋಸ್ ಗಳನ್ನು ಸಿನಿಮಾ ಸೆಟ್‌ ನಿಂದಲೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕತ್ರಿನಾ ಕೈಫ್‌ (Katrina Kaif) ರವರು ಶ್ರೀ ರಾಮ್‌ ರಾಘವನ್‌ ಮತ್ತು ವಿಜಯ ಸೇತುಪತಿ (Vijaya Sethupathi)ರವರ ಜೊತೆ ತೆಗೆದ ಪೋಟೋಸ್‌ಗಳನ್ನು ಇನ್ಸ್‌ ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಖ್ಯಾತ ನಟ ವಿಜಯ್‌ ಸೇತುಪತಿ (Vijaya Sethupathi)ಜೊತೆ ಅವರು ನಟಿಸಲಿದ್ದಾರೆ. ಶ್ರೀರಾಮ್‌ ರಾಘವನ್‌ರವರು “ಮೇರಿ ಕ್ರಿಸ್‌ ಮಸ್‌”(Mary Christmas) ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಕತ್ರಿನಾ ಕೈಫ್‌ (Katrina Kaif)ಈ ಸಿನಿಮಾದ ಬಗ್ಗೆ ಬಹು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಹಾಗೆ 2021ರಲ್ಲಿ ಇವರು ಈ ಸಿನಿಮಾದ ಬಗ್ಗೆ ಬಹಳ ಸಂತೋಷದಿಂದ ಹೇಳಿಕೊಂಡಿದ್ದರು. ಇದು ಹೊಸ ಆರಂಭ ಶ್ರೀರಾಮ್‌ ರಾಘವನ್‌ ಅವರ ಜೊತೆ ಕೆಲಸ ಮಾಡಬೇಕೆಂದು ನಾನು ಯಾವಾಗಲೂ ಅಂದುಕೊಂಡಿದ್ದೆ. ಸಾಹಸ ಚಿತ್ರಗಳನ್ನು ಕಟ್ಟಿಕೊಡುವುದರಲ್ಲಿಅವರು ಮಾಸ್ಟರ್.‌ ಹಾಗಾಗಿ ಅವರ ನಿರ್ದೇಶನದಲ್ಲಿ ನಟಿಸಲು ಹೆಮ್ಮೆ ಅನಿಸುತ್ತದೆ. ವಿಜಯ ಸೇತುಪತಿ (Vijaya Sethupathi)ಜತೆ ನಟಿಸಲು ಸೂಪರ್‌ ಎಗ್ಸೈಟ್‌ ಆಗಿದ್ದೇನೆ” ಎಂದು ಕತ್ರಿನಾ ಕೈಫ್‌ (Katrina Kaif) ರವರು ಶೇರ್‌ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : ಆಸ್ಕರ್‌ಗೆ ಆರ್‌ಆರ್‌ ಆರ್‌ : ಎಸ್‌ಎಸ್‌ ರಾಜಮೌಳಿ ಹೇಳಿದ್ದೇನು ಗೊತ್ತಾ ?

ಇದನ್ನೂ ಓದಿ : ಪ್ರೇಮ ವೈಫಲ್ಯ ತಮಿಳು ಖ್ಯಾತ ನಟಿ ದೀಪಾ ಆತ್ಮಹತ್ಯೆ

ಇದನ್ನೂ ಓದಿ : ಹಾಟ್ ಅವತಾರದಲ್ಲಿ ಅಮೃತ ವರ್ಷಿಣಿ ಹುಡುಗಿ : ರಜಿನಿ ಪೊಟೋಶೂಟ್ ನೋಡೋಕೆ ಮರಿಬೇಡಿ

ಕತ್ರಿನಾ ಕೈಫ್‌ ನಟನೆಯ ಇನ್ನೊಂದು ಚಿತ್ರ “ಫೋನ್‌ ಭೂತ್”‌ ನಿರೀಕ್ಷೆಯನ್ನು ಹುಟ್ಟಿಸಿದೆ. ಈ ಸಿನಿಮಾದಲ್ಲಿ ಇಶಾನ್‌ ಖಟ್ಟರ್‌ ಮತ್ತು ಸಿದ್ಧಾಂತ್‌ ಚತುರ್ವೇದಿ ಜೊತೆಯಾಗಿ ನಟಿಸಲಿದ್ದಾರೆ. ಈ ಚಿತ್ರವು ಬರುವ ನವೆಂಬರ್‌ 4ರಂದು ತೆರೆ ಕಾಣಲಿದೆ. ಹಾಗೆಯೇ ಕತ್ರಿನಾ ಕೈಫ್‌ “ಟೈಗರ್‌ 3” ಸಿನಿಮಾದಲ್ಲಿ ಸಲ್ಮಾನ್‌ ಖಾನ್‌ ಜೊತೆ ನಟಿಸಲಿದ್ದು ಇದರ ಬಗ್ಗೆ ಕೂಡ ಸಿನಿಪ್ರೇಕ್ಷಕರಲ್ಲಿ ಬಹಳ ನಿರೀಕ್ಷೆ ಕೂಡಿರುತ್ತದೆ. ಈ ಸಿನಿಮಾವು 2023ರ ಏಪ್ರಿಲ್‌ 23ರಂದು ತೆರೆ ಕಾಣಲಿದೆ. ಒಟ್ಟಾರೆ ಬಾಲಿವುಡ್‌ ಸಿನಿಮಾ ರಂಗದಲ್ಲಿ ಕತ್ರಿನಾ ಕೈಫ್‌ರವರು ಬಹುಬೇಡಿಕೆಯ ನಟಿಯಾಗಿ ಮಿನುಗುತ್ತಿದ್ದಾರೆ.

Actress Katrina Kaif opposite Vijay Sethupathi in Merry Christmas

Comments are closed.