0nline Gaming: ಆನ್ ಲೈನ್ ಗೇಮಿಂಗ್ ಪ್ರಿಯರಿಗೆ ದರ ಏರಿಕೆ ಬಿಸಿ?; ಶೇ.28ರಷ್ಟು GST ವಿಧಿಸುವಂತೆ ಸಮಿತಿ ಶಿಫಾರಸ್ಸು ಸಾಧ್ಯತೆ

ನವದೆಹಲಿ: 0nline Gaming: ಆನ್ ಲೈನ್ ಪ್ರಿಯರ ಜೀಬಿಗೆ ಸದ್ಯದಲ್ಲೇ ಕತ್ತರಿಬೀಳುವ ಸಾಧ್ಯತೆ ಇದೆ. ಸದ್ಯದಲ್ಲೇ ಗೇಮಿಂಗ್ ಮೇಲಿನ ಜಿಎಸ್ ಟಿ ಏರಿಕೆ ಮಾಡುವ ಸಂಭವವಿದೆ ಎಂದು ಹೇಳಲಾಗುತ್ತಿದೆ. ಈಗಿರುವ ಜಿಎಸ್ ಟಿಗಿಂತ ಶೇ.10ರಷ್ಟು ಜಿಎಸ್ ಟಿ ಏರಿಕೆ ಮಾಡುವ ಸಾಧ್ಯತೆಗಳಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Mangaluru blast FSL Report: ಮಂಗಳೂರು ಬಾಂಬ್‌ ಸ್ಫೋಟ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌: ಬೆಚ್ಚಿಬೀಳಿಸಿದ ಎಫ್‌ಎಸ್‌ಎಲ್‌ ವರದಿ

ಆನ್ ಲೈನ್ ಗೇಮಿಂಗ್ ಗೆ ಶೇ.28ರಷ್ಟು ಸರಕು ಮತ್ತು ಸೇವಾ ತೆರಿಗೆ ವಿಧಿಸುವ ಬಗ್ಗೆ ರಾಜ್ಯಗಳ ಹಣಕಾಸು ಸಚಿವರ ಸಮಿತಿ ಶಿಫಾರಸ್ಸು ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಅದು ಕೌಶಲ್ಯದ ಗೇಮ್ ಅಥವಾ ಅವಕಾಶದ ಗೇಮ್ಸ್ ಆಗಿದೆಯೇ ಎಂಬುದನ್ನು ಪರಿಗಣಿಸದೇ ಶೇ.28 ಜಿಎಸ್ ಟಿ ವಿಧಿಸಲು ಶಿಫಾರಸ್ಸು ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದರ ಜೊತೆಗೆ ಜಿಎಸ್ ಟಿ ಮೊತ್ತವನ್ನು ಲೆಕ್ಕಹಾಕುವ ವಿಧಾನವನ್ನು ಪರಿಷ್ಕರಿಸುವಂತೆ ಸಲಹೆಗಳನ್ನು ನೀಡುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ಆನ್ ಲೈನ್ ಗೇಮಿಂಗ್ ಗೆ ಶೇ.18ರಷ್ಟು ಜಿಎಸ್ ಟಿ ವಿಧಿಸಲಾಗುತ್ತಿದೆ. ಆನ್ ಲೈನ್ ಗೇಮಿಂಗ್ ಪೋರ್ಟಲ್ ಗಳು ವಿಧಿಸುವ ಶುಲ್ಕದಿಂದ ಸಂಗ್ರಹವಾದ ಒಟ್ಟು ಆದಾಯದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ರಾಜ್ಯಗಳ ಹಣಕಾಸು ಸಚಿವರ ಸಮಿತಿಯ ವರದಿಯು ಬಹುತೇಕ ಅಂತಿಮಗೊಂಡಿದೆ. ಶೀಘ್ರದಲ್ಲೇ ಸಮಿತಿ ಈ ವರದಿಯನ್ನು ಜಿಎಸ್ ಟಿ ಮಂಡಳಿಯ ಪರಿಶೀಲನೆಗೆ ಕಳುಹಿಸಿಕೊಡಲಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Sukhant funeral: ಮುಂಬೈನಲ್ಲಿ ಹೀಗೊಂದು ‘ಸುಖಾಂತ’ ಸ್ಟಾರ್ಟ್ ಅಪ್; ದುಡ್ಡು ಕೊಟ್ಟರೆ ಅಂತ್ಯಸಂಸ್ಕಾರ ಕೂಡಾ ಮಾಡಿಕೊಡುತ್ತಂತೆ ಈ ಕಂಪೆನಿ

ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ ರಾಜ್ಯಗಳ ಹಣಕಾಸು ಸಚಿವರ ಸಮಿತಿಯ ಅಧ್ಯಕ್ಷತೆ ವಹಿಸಿದ್ದಾರೆ. ಆನ್ ಲೈನ್ ಗೇಮಿಂಗ್ ನ ಪೂರ್ಣ ಮೌಲ್ಯ ಆಧರಿಸಿ ಶೇ. 28ರ ಜಿಎಸ್ ಟಿ ವಿಧಿಸುವಂತೆ ಈ ಹಿಂದೆ ಸಮಿತಿ ಶಿಫಾರಸ್ಸು ಮಾಡಿತ್ತು. ಅಂದರೆ ಪ್ರವೇಶ ಶುಲ್ಕ ಸೇರಿದಂತೆ ವಿವಿಧ ಶುಲ್ಕಗಳ ಒಟ್ಟು ಮೊತ್ತದ ಮೇಲೆ ಜಿಎಸ್ ಟಿ ಸಂಗ್ರಹಿಸಲು ಸಲಹೆ ನೀಡಲಾಗಿತ್ತು. ಇದರಲ್ಲಿ ಬದಲಾವಣೆ ತರುವಂತೆ ಸಚಿವರ ಸಮಿತಿ ಮನವಿ ಸಲ್ಲಿಸುವ ನಿರೀಕ್ಷೆ ಇದೆ ಎನ್ನಲಾಗಿದೆ. ಸಚಿವರ ಸಮಿತಿಯ ಶಿಫಾರಸ್ಸಿನ ಬಳಿಕ ಅಟಾರ್ನಿ ಜನರಲ್ ಅವರು ಆನ್ ಲೈನ್ ಗೇಮಿಂಗ್ ಉದ್ಯಮಿಗಳ ಅಭಿಪ್ರಾಯ ಕೋರಲಿದ್ದಾರೆ. ಆ ಬಳಿಕವಷ್ಟೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.

0nline Gaming: Ministers panel may recommend 28 percentage GST on online gaming with a revised calculation formula

Comments are closed.