China Covid Explosion : ಇದು ಥರ್ಮೋನ್ಯೂಕ್ಲಿಯರ್‌ ಬ್ಯಾಡ್‌ನ ಆರಂಭವೇ; ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಕೊಟ್ಟ 10 ಎಚ್ಚರಿಕೆಗಳೇನು..

ಚೀನಾದಲ್ಲಿ ಮತ್ತೆ ಕೋವಿಡ್‌ ಸ್ಪೋಟವಾಗಿದೆ (China Covid Explosion). ಹೊಸ ಒಮಿಕ್ರಾನ್‌ ರೂಪಾಂತರದ ಗಂಭೀರತೆಯು ಕೋವಿಡ್‌ನ ಗಂಭೀರ ಅಲೆಯನ್ನು ಸೃಷ್ಟಿ ಮಾಡಿದೆ. ಚೀನಾದಲ್ಲಿ ಸೋಂಕುಗಳು, ಸಾವುಗಳು ಗಗನಕ್ಕೇರುತ್ತಿವೆ. ಕೋವಿಡ್‌ ನಿರ್ಬಂಧಗಳ ಸಡಿಲಿಕೆ ಮತ್ತು ಶೂನ್ಯ ಕೋವಿಡ್‌ ನಿರ್ಭಂಧಗಳನ್ನು ತೆಗೆದುಹಾಕಿದಾಗಿನಿಂದ ಇದು ಹೆಚ್ಚಾಗಿದೆ. ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಆರೋಗ್ಯ ಅರ್ಥಶಾಸ್ತ್ರಜ್ಞ ಎರಿಕ್ ಫೀಗಲ್-ಡಿಂಗ್ ಪ್ರಕಾರ, ಸೋಂಕು ಏರಿಕೆಯು ದಿನಗಳಲ್ಲಾಗುತ್ತಿಲ್ಲ, ಅದು ಗಂಟೆಗಳಲ್ಲಿ ದ್ವಿಗುಣಗೊಳ್ಳುತ್ತಿವೆ. ಮುಂದಿನ 90 ದಿನಗಳಲ್ಲಿ ಮುಂದಿನ 90 ದಿನಗಳಲ್ಲಿ ಚೀನಾದ ಶೇಕಡಾ 60 ಕ್ಕಿಂತ ಹೆಚ್ಚು ಮತ್ತು ವಿಶ್ವದ ಜನಸಂಖ್ಯೆಯ 10 ಪ್ರತಿಶತದಷ್ಟು ಜನರು ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ ಎಂದು ಅವರು ಅಂದಾಜಿಸಿದ್ದಾರೆ. ಸಾವುಗಳು ಲಕ್ಷಕ್ಕೆ ಏರುವ ಸಾಧ್ಯತೆಯಿದೆ. ಅವರ ಪ್ರಕಾರ ಈಗಿರುವ ಸೋಂಕಿನ ಪ್ರಮಾಣವು ಆರಂಭದ ಹಂತವಾಗಿದೆ. ವೈದ್ಯರ ಪ್ರಕಾರ, ಚೀನಾದ ಕಮ್ಯುನಿಸ್ಟ್‌ ಪಕ್ಷವು ಇದೀಗ ಯೋಚಿಸುತ್ತಿರುವುದೇನೆಂದರೆ ಸೋಂಕಿಗೆ ಒಳಗಾದವರು ಸಾಯಲಿ, ಸಾಯಬೇಕಾದವರು ಸಾಯಲಿ. ಆರಂಭಿಕ ಸೋಂಕುಗಳು, ಆರಂಭಿಕ ಸಾವುಗಳು, ಆರಂಭಿಕ ಪೀಕ್, ಸೋಂಕಿನ ಪುನರಾರಂಭವಾಗಿದೆ. ಸೋಂಕು ದ್ವಿಗುಣಗೊಳ್ಳುವಿಕೆಯು ಒಂದು ದಿನಕ್ಕಿಂತ ಕಡಿಮೆಯಿದ್ದರೆ ಚೇತರಿಕೆ ದರವನ್ನು ಲೆಕ್ಕಾಚಾರ ಮಾಡುವುದು ಕಷ್ಟ, ಏಕೆಂದರೆ ಪಿಸಿಆರ್ (PCR) ಪರೀಕ್ಷೆಯನ್ನು ವೇಗವಾಗಿ ಮಾಡುವುದು ಕಷ್ಟ. ಚೀನಾ ಮತ್ತು ಜಗತ್ತು ತೀವ್ರ ತೊಂದರೆಯಲ್ಲಿದೆ ಎಂಬುದು ವೈದ್ಯರ ಅಭಿಪ್ರಾಯ.

ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಎರಿಕ್ ಫೀಗಲ್-ಡಿಂಗ್ ಪ್ರಕಾರ ಚೀನಾದಲ್ಲಿನ ಪರಿಸ್ಥಿತಿ ಮತ್ತು ಅವರು ಹೇಳಿದ ಎಚ್ಚರಿಕೆಗಳು:

  1. ಚೀನಾದಲ್ಲಿ ಸಂಭವಿಸುತ್ತಿರುವ ಸಾವುಗಳ ತೀವ್ರತೆಯು ಚೀನಾದ ಹೊರಗೆ ಕೆಡಿಮೆ ವರದಿಯಾಗುತ್ತಿವೆ. ಬೀಜಿಂಗ್‌ನಲ್ಲಿನ ಆಸ್ಪತ್ರೆಗಳು, ಶವಸಂಸ್ಕಾರದ ಜಾಗಗಳು, ಅದಕ್ಕೆ ಸಂಬಂಧಿತ ಅಂತ್ಯಕ್ರಿಯೆ ಸಮೀಕ್ಷೆಯ ಮೂಲಕ ಚೀನಾ ದಲ್ಲಿ ಕೋವಿಡ್‌ನಿಂದಾಗಿ ಸಾವಿನ ತೀವ್ರತೆ ಹೆಚ್ಚಿದೆ. ಇದು ಅಂತ್ಯಕ್ರಿಯೆ ಸೇವೆಗಳಲ್ಲಿಯೂ ಭಾರಿ ಸ್ಪೋಟವನ್ನೇ ಸೃಷ್ಟಿಸಿದೆ. ಇದು 2020 ಅನ್ನು ಮರುಸೃಷ್ಟಿಸಲಿದೆ. ಆದರೆ, ಈ ಬಾರಿ ಚೀನಾ ಹೆಚ್ಚಿನದಾಗಿ ಪಾಶ್ಚಾತ್ಯ-ಸಾಮೂಹಿಕ ಸೋಂಕಿನ ವಿಧಾನವನ್ನೇ ಅನುಕರಿಸಲಿದೆ ಎಂದು ಎರಿಕ್‌ ಫೀಗಲ್‌–ಡಿಂಗ್‌ ಹೇಳಿದ್ದಾರೆ.
  2. ಸಾಂಕ್ರಾಮಿಕ ರೋಗ ಶಾಸ್ತ್ರಜ್ಞ ಎರಿಕ್‌ ಫೀಗಲ್‌– ಡಿಂಗ್‌ ಪ್ರಕಾರ ಪಾಶ್ಚಾತ್ಯರು ಈಗ ಜ್ವರ ಮತ್ತು ಆಂಟಿಬಯೋಟಿಕ್‌ಗಳ ಕೊರತೆಯಿದೆ ಎಂದು ಭಾವಿಸುತ್ತಿದ್ದಾರೆಯೇ? ಇಲ್ಲ. ಏಕೆಂದರೆ ಚೀನಾದಲ್ಲಿ ಉತ್ಪಾದನೆಯಾಗುತ್ತಿರುವ ಇವುಗಳು ರಫ್ತಾಗುತ್ತಿವೆ. ಯಾವಾಗ ಅವು ರಫ್ತಾಗುವುದಿಲ್ಲವೋ ಆಗ ಜನರು ಐಬುಪ್ರೊಫೇನ್ ಅನ್ನು ಖರೀದಿಸಲು ಔಷಧೀಯ ಕಾರ್ಖಾನೆಗೆ ಧಾವಿಸುತ್ತಾರೆ. ಅವರು ಹೇಳುವುದೇನೆಂದರೆ ಸಾಂಕ್ರಾಮಿಕ ರೋಗಶಾಸ್ತ್ರಜ್ಞನಾಗಿರುವುದರಿಂದ ಮತ್ತು ಚೀನಾದಲ್ಲಿ ಜನಿಸಿದ್ದರಿಂದ ಕಾಳಜಿಯನ್ನು ವಹಿಸುತ್ತಿದ್ದೇನೆ. 3 ವರ್ಷಗಳ ಹಿಂದೆ ವುಹಾನ್‌ ನಮಗೆ ಪಾಠವಾಗಿತ್ತು. 2022–2023 ರ ಅಲೆಯ ಜಾಗತಿಕ ಕುಸಿತ ಚಿಕ್ಕಮಟ್ಟದ್ದಾಗಿರುವುದಿಲ್ಲ.
  3. ಇದು ವಿಶ್ವದಾದ್ಯಂತ ಮತ್ತೊಂದು ಕೋವಿಡ್‌ ತರಂಗ ‘ಥರ್ಮೋನ್ಯೂಕ್ಲಿಯರ್ ಬ್ಯಾಡ್’ ನ ಆರಂಭವೇ? ನೇರವಾಗಿ ಇದು ವೈರಸ್‌ ಮೂಲಕವೇ ಆಗಬೇಕೆಂದಿಲ್ಲ. ಸದ್ಯ ನನ್ನ ಮಾತನ್ನು ನಿರ್ಲಕ್ಷಿಸಬಹುದು, ಚೀನಾದ ಹೊಸ ಮೆಗಾ ಸುನಾಮಿ ಅಲೆಯಿಂದ ಜಾಗತಿಕ ಆರ್ಥಿಕ ಕುಸಿತ ಮತ್ತಷ್ಟು ಹದಗೆಡಬಹುದು.
  4. ಎರಿಕ್‌ ಅವರು ಹೇಳುವಂತೆ ಚೀನಾದಲ್ಲಿ 1–2 ಮಿಲಿಯನ್‌ ಸಾವುಗಳು ಇತ್ತೀಚೆಗೆ ಸಾಮಾನ್ಯ ಸಂಖ್ಯೆಯಾಗಿದೆ. ಸರ್ಕಾರ ಏನನ್ನೂ ಮಾಡದಿದ್ದರೆ ಸಾವಿನ ಸಂಖ್ಯೆ ಹೆಚ್ಚಾಗಲೂಬಹುದು. ಸರ್ಕಾರ ಕೋವಿಡ್‌ ನಿಯಮಗಳ ಸಡಿಲಿಕೆ ವೈರಸ್‌ ಸೋಂಕು ನಿಗ್ರಹಕ್ಕೆ ಬರುವುದು ಕಷ್ಟವಾಗಬಹುದು. ಆದರೆ, ಇದು ಚೀನಾ–ಶೂನ್ಯ –ಕೋವಿಡ್‌ ವಿರೋಧಿ ಜನರು ಇದರಲ್ಲಿ ತಮ್ಮ ಕೈಯಿದೆ ಎಂಬುದನ್ನು ಒಪ್ಪಿಕೊಳ್ಳಬೇಕಾಗಿದೆ.
  5. ದೂರದ ನಗರದ ಯಾವುದೋ ಒಂದು ಸ್ಥಳದಲ್ಲಿ ನಾವು ಹಿಂದೆಂದೂ ಕೇಳಿರದ ಏನಾದರೂ ಸಂಭವಿಸಿದರೆ ಅದು ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅರ್ಥವಲ್ಲ. ಈ ಜಗತ್ತಿನಲ್ಲಿ-ಅದು ನಮ್ಮ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಅದು ನಮ್ಮ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಅಥವಾ ಹಾನಿ ಮಾಡಬಹುದು. ಅದಕ್ಕಾಗಿ ನಮಗೆ ಜಗತ್ತಿನಲ್ಲಿ ಹೆಚ್ಚು ಸಾಮೂಹಿಕ ಸಹಾನುಭೂತಿ ಬೇಕು.
  6. ಶಾಂಘೈನಲ್ಲಿ ಮುಂದಿನ ತಿಂಗಳು ಮತ್ತು ಇತರ ಅನೇಕ ನಗರಗಳಲ್ಲಿ ಏಕಾಏಕಿ ಶಾಲೆಗಳನ್ನು ಮುಚ್ಚಲಾಗುವುದು. ಕೋವಿಡ್‌ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿದ ಕೆಲವೇ ವಾರಗಳ ನಂತರ ಇದು ಬರುತ್ತದೆ. ಮಕ್ಕಳನ್ನು ರಕ್ಷಿಸುವುದು ಅವರ ಪೋಷಕರು, ಆರೈಕೆ ಮಾಡುವವರನ್ನು ರಕ್ಷಿಸುವುದು ಮತ್ತು ಸಾಂಕ್ರಾಮಿಕ ರೋಗದಿಂದ ಅನಾಥರಾಗುವುದನ್ನು ತಡೆಯಬೇಕಾಗಿದೆ.
  7. ಎರಿಕ್‌ ಅವರ ಪ್ರಕಾರ, ಹಾಗಾದರೆ ಚೀನಾದ ವ್ಯಾಕ್ಸಿನೇಷನ್ ಪರಿಸ್ಥಿತಿ ಹೇಗೆ ನಡೆಯುತ್ತಿದೆ? ವಯಸ್ಸಾದವರಲ್ಲಿ ಸಾಕಷ್ಟು ಲಸಿಕೆ ಪ್ರತಿರೋಧವಿದೆ. ಹೊಸ ಒಮಿಕ್ರಾನ್‌ ಉಪ ರೂಪಾಂತರಗಳು, ಎರಡನೆಯ ಮತ್ತು ಮೂರನೆಯ ಅಲೆಗಳಿಗೆ ಅವುಗಳು ಸಾಕಾಗುವುದಿಲ್ಲ. ಚೀನಾದ ಮುಖ್ಯ CoronaVac ಶಾಟ್‌ಗಳು ಹೊಸ ರೂಪಾಂತರ ವೈರಸ್‌ಗಳಿಗೆ ಮತ್ತೆ ಸಾಕಾಗುವುದಿಲ್ಲ.
  8. ಹೊಸ ಕೊವಿಡ್‌ ರೂ‍ಪಾಂತರದಿಂದ ಹೋಮ್‌ ಡಿಲಿವರಿ ಡ್ರೈವರ್‌ಗಳು ಸಾಕಾಗುವುದಿಲ್ಲ. ಅವರಲ್ಲಿ ಅನೇಕರು ಕೋವಿಡ್‌ನಿಂದ ಬಳಲುತ್ತಿದ್ದಾರೆ. ಫುಡ್ ಡೆಲಿವರಿ ಆರ್ಡರ್‌ಗಳು ಡೆಲಿವರಿ ಮಾಡಲು ಸಾಧ್ಯವಾಗುವುದಿಲ್ಲ.
  9. ಚೀನಾದಲ್ಲಿ ಮುಂಬರುವ ತಿಂಗಳುಗಳಲ್ಲಿ ಕೋವಿಡ್‌ನಿಂದ ಸುಮಾರು 2 ಮಿಲಿಯನ್‌ ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದರೆ ಅದು ಉತ್ಪ್ರೇಕ್ಷೆಯಾಗುವುದಿಲ್ಲ. ಸಂಶೋಧನಾ ತಂಡಗಳು ಈಗಾಗಲೇ ಇದನ್ನು ಹೇಳಿವೆ. ಕೋವಿಡ್‌ ನಿಯಂತ್ರಿಸದಿದ್ದರೆ ಸಮೀಕ್ಷೆಯಂತೆಯೇ ಸಂಭವಿಸಲಿದೆ. ಹಾಗಾದರೆ ಚೀನಾದಲ್ಲಿ ಕೋವಿಡ್‌ ನಿಯಂತ್ರಣ ನಿಯಮಗಳು ಎಷ್ಟು ಬದಲಾಗಿದೆ? ವಾಸ್ತವವಾಗಿ ಚೀನಾವು ಕೆಲವು ನಿಯಮಗಳನ್ನು ಮಾತ್ರ ಸಡಿಲಿಸಿದೆ. ಆದರೆ, ಯುಕೆ, ಯುಎಸ್‌ನಂತೆ ಎಲ್ಲಾ ನಿಯಮಗಳನ್ನು ತೆರೆಯಲಿಲ್ಲ.
  10. 1918 ರ ನಂತರ ನೋವಲ್‌ ಕರೋನಾವೈರಸ್‌ ಜಗತ್ತು ಕಂಡಿರದ ಸಾಂಕ್ರಾಮಿಕ ರೋಗ ಎಂದು ನಾನು 2020 ರ ಜನವರಿಯಲ್ಲಿ ಎಚ್ಚರಿಸಿದ್ದೆ, ಆದರೆ ಜನರು ನಂಬಿರಲಿಲ್ಲ. ಆದರೆ, ಈಗ ಮತ್ತೆ ನಾನು ಸಾಂಕ್ರಾಮಿಕ ರೋಗಶಾಸ್ತ್ರಜ್ಞನಾಗಿ #CovidIsNotOver ಎಂದು ಎಚ್ಚರಿಸಲು ಪ್ರಯತ್ನಿಸುತ್ತಿರುವೆ, ಎಂದು ಎರಿಕ್ ಫೀಗಲ್-ಡಿಂಗ್ ಹೇಳಿದ್ದಾರೆ.

ಇದನ್ನೂ ಓದಿ : Covid in China: ಚೀನಾದಲ್ಲಿ ಕೋವಿಡ್ ಮತ್ತಷ್ಟು ಉಲ್ಬಣ: ಆಸ್ಪತ್ರೆಗಳಲ್ಲಿ ಬೆಡ್, ವೆಂಟಿಲೇಟರ್ ಸಿಗದೆ ನರಳಾಟ; ಸರ್ಕಾರದ ವಿರುದ್ಧ ಭುಗಿಲೆದ್ದ ಆಕ್ರೋಶ

ಇದನ್ನೂ ಓದಿ : COVID protocol: ‘ಕೋವಿಡ್​ ಮಾರ್ಗಸೂಚಿ ಪಾಲಿಸಿ, ಇಲ್ಲವೇ ಭಾರತ್​ ಜೋಡೋ ಯಾತ್ರೆ ಮುಂದೂಡಿ’ :ಕೇಂದ್ರದ ಸೂಚನೆ

(China Covid Explosion is it start of thermonuclear bad warns epidemiologist. what world needs to know?)

Comments are closed.