Tips for diabetes: ಈ ಸಲಹೆ ಪಾಲಿಸಿ ಮಧುಮೇಹವನ್ನು ನಿಯಂತ್ರಣದಲ್ಲಿಡಿ

(Tips for diabetes)ರಕ್ತದಲ್ಲಿನ ಸಕ್ಕರೆ, ಕೊಲೆಸ್ಟ್ರಾಲ್ ಮಟ್ಟಗಳು ಮತ್ತು ರಕ್ತದೊತ್ತಡದ ಸರಿಯಾದ ನಿರ್ವಹಣೆಯೊಂದಿಗೆ ದೃಷ್ಟಿ ನಷ್ಟ, ಹೃದಯ ಮತ್ತು ಮೂತ್ರಪಿಂಡದ ಕಾಯಿಲೆಯಂತಹ ಪ್ರಮುಖ, ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಬಹುದು. ಮಧುಮೇಹವು ಕಣ್ಣುಗಳ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುತ್ತದೆ ಇದು ಕುರುಡುತನಕ್ಕೆ ಕಾರಣವಾಗಬಹುದು. ದೇಹದಲ್ಲಿ ಅಧಿಕ ಸಕ್ಕರೆ ಅಂಶವು ಕಣ್ಣಿನ ಅತ್ಯಂತ ಸೂಕ್ಷ್ಮವಾದ ಅಂಗಾಂಶಗಳಲ್ಲಿನ ಲೋಮನಾಳಗಳನ್ನು ನಾಶಪಡಿಸುತ್ತದೆ. ಅಧಿಕ ರಕ್ತದೊತ್ತಡದಿಂದ ಉಂಟಾಗುವ ಈ ರೆಟಿನಾದ ಹಾನಿಯಿಂದ ಶಾಶ್ವತ ದೃಷ್ಟಿ ನಷ್ಟವು ಉಂಟಾಗಬಹುದು.

(Tips for diabetes)ರಕ್ತದಲ್ಲಿನ ಸಕ್ಕರೆಯ ಅಂಶವು ಹೆಚ್ಚಾದಾಗ ಕಣ್ಣುಗಳ ಅತ್ಯಂತ ಸೂಕ್ಷ್ಮವಾದ ಪ್ರದೇಶಗಳನ್ನು ಪೋಷಿಸುವ ಸೂಕ್ಷ್ಮ ರಕ್ತನಾಳಗಳಿಗೆ ಹಾನಿ ಆಗುತ್ತದೆ ಮತ್ತು ರೆಟಿನಾವನ್ನು ಹಾನಿಗೊಳಿಸುತ್ತದೆ. ಕಣ್ಣಿನ ಹಿಂಭಾಗದ ಸುಮಾರು 65 ಪ್ರತಿಶತದಷ್ಟು ತೆಳುವಾದ ಅಂಗಾಂಶವನ್ನು ರೆಟಿನಾ ಎಂದು ಕರೆಯಲಾಗುತ್ತದೆ. ಅನೇಕ ಬೆಳಕು-ಸೂಕ್ಷ್ಮ ಕೋಶಗಳು ಅಲ್ಲಿ ವಾಸಿಸುತ್ತವೆ, ಕಣ್ಣುಗಳು ದೃಷ್ಟಿಗೋಚರ ಮಾಹಿತಿಯನ್ನು ಮೆದುಳಿಗೆ ಆಪ್ಟಿಕ್ ನರದ ಮೂಲಕ ಸಂವಹನ ಮಾಡಲು ಅನುವು ಮಾಡಿಕೊಡುತ್ತದೆ. ಒಂದು ವೇಳೆ ದೇಹದಲ್ಲಿ ಸಕ್ಕರೆ ಮಟ್ಟವು ಹೆಚ್ಚಾದರೆ ರೆಟಿನಾವನ್ನು ಪೂರೈಸುವ ರಕ್ತನಾಳಗಳು ಹಾನಿಗೊಳಗಾಗುತ್ತವೆ. ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಇದರಿಂದ ದೃಷ್ಟಿ ಸಮಸ್ಯೆ ಉಂಟಾಗಬಹುದು. ಡಯಾಬಿಟಿಕ್ ರೆಟಿನೋಪತಿ, ಗ್ಲುಕೋಮಾ ಮತ್ತು ಕಣ್ಣಿನ ಪೊರೆಗಳು ಮಧುಮೇಹ ಹೊಂದಿರುವ ಜನರಲ್ಲಿ ಸಾಮಾನ್ಯವಾಗಿ ಕಂಡುಬರುವ ಮೂರು ವಿಭಿನ್ನ ಕಣ್ಣಿನ ಕಾಯಿಲೆಗಳಾಗಿವೆ. ಹಾಗಾಗಿ ವೈದ್ಯರ ಸಲಹೆಗಳನ್ನು ತೆಗೆದುಕೊಂಡು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಮೂಲಕ ಕಣ್ಣಿನ ಹಾನಿಯನ್ನು ತಪ್ಪಿಸಬಹುದು ಮತ್ತು ಕೆಲವು ಅಂಶಗಳನ್ನು ಪ್ರತಿದಿನ ಪಾಲಿಸುವ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಮಧುಮೇಹ ನಿಯಂತ್ರಣದಲ್ಲಿ ಹೇಗೆ ಇಟ್ಟುಕೊಳ್ಳುವುದು ಎನ್ನುವ ಮಾಹಿತಿಯ ಕುರಿತು ತಿಳಿಯೋಣ.

ಧೂಮಪಾನ ಮಾಡುವುದನ್ನು ನಿಲ್ಲಿಸಿ
ಅತಿಯಾದ ಧೂಮಪಾನದಿಂದ ನಮ್ಮ ದೇಹಕ್ಕೆ ಹಲವು ಹಾನಿಯಾಗುತ್ತದೆ. ಆದರೆ ಮಧುಮೇಹಿಗಳು ಹೆಚ್ಚು ದುರ್ಬಲರಾಗಿರುವುದರಿಂದ ಧೂಮಪಾನ ಮಾಡಿದರೆ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ. ಮಧುಮೇಹ ಇರುವವರು ಧೂಮಪಾನ ಮಾಡುವುದರಿಂದ ದೇಹದಲ್ಲಿನ ರಕ್ತನಾಳಗಳು, ಅಪಧಮನಿಗಳು ಮತ್ತು ಕ್ಯಾಪಿಲ್ಲರಿಗಳಿಗೆ ಹಾನಿ ಮಾಡುತ್ತದೆ ಮತ್ತು ಕಣ್ಣಿನ ಹಾನಿಯನ್ನು ಉಲ್ಬಣಗೊಳಿಸುತ್ತದೆ. ಹಾಗಾಗಿ ಸಿಗರೆಟ್‌ ಸೇದುವ ಹವ್ಯಾಸವನ್ನು ಕಡಿಮೆ ಮಾಡಿಕೊಳ್ಳಿ.

ಪ್ರತಿದಿನ ವ್ಯಾಯಾಮ ಮಾಡಿ
ಪ್ರತಿದಿನ ವ್ಯಾಯಾಮ ಮಾಡುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವಾಕಿಂಗ್‌ ಮಾಡುವ ಹವ್ಯಾಸವನ್ನು ರೂಡಿಸಿಕೊಂಡರೆ ಮಧಮೇಹ ನಿಯಂತ್ರಣದಲ್ಲಿ ಇರುತ್ತದೆ. ವೈದ್ಯರ ಸಲಹೆಗಳನ್ನು ತೆಗೆದುಕೊಂಡು ಅವರು ಸಲಹೆ ನೀಡಿದ ವ್ಯಾಯಾಮವನ್ನು ಪ್ರತಿದಿನ ಪಾಲನೆ ಮಾಡಿ. ವ್ಯಾಯಾಮಗಳನ್ನು ಪಾಲನೆ ಮಾಡುವುದರಿಂದ ಬೇರೆ ಆರೋಗ್ಯದ ಸಮಸ್ಯೆಗಳು ನಿಮ್ಮನ್ನು ಕಾಡುವುದಿಲ್ಲ.

ಆರೋಗ್ಯಕರ ಆಹಾರ ಕ್ರಮವನ್ನು ಪಾಲನೆ ಮಾಡಿ

ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ದೇಹಕ್ಕೆ ಉತ್ತಮ ಪೋಷಕಾಂಶಗಳನ್ನು ಒದಗಿಸುವ ಆಹಾರ ಸೇವಿಸುವ ಹವ್ಯಾಸವನ್ನು ರೂಡಿಸಿಕೊಳ್ಳಿ. ವಿಟಮಿನ್‌ ಎ,ಸಿ, ಇ, ಬೀಟಾ- ಕ್ಯಾರೋಟಿನ್‌, ಲುಟೀನ್‌,ಒಮೆಗಾ-3, ಕೊಬ್ಬಿನಾಮ್ಲ ಅಂಶ ಒದಗಿಸುವಂತಹ ಆಹಾರವನ್ನು ಸೇವನೆ ಮಾಡಿ. ಸೊಪ್ಪುಗಳು, ಮೀನು, ವಾಲ್‌ ನಟ್ಸ್‌, ಮಶ್ರೂಮ್‌ ತಿನ್ನುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

ಇದನ್ನೂ ಓದಿ:Heel Pain Home Remedies:ಅತಿಯಾದ ಹಿಮ್ಮಡಿ ನೋವು ನಿಮ್ಮನ್ನು ಕಾಡುತ್ತಿದೆಯೇ ? ಹಾಗಾದ್ರೆ ಇಲ್ಲಿದೆ ಅತ್ಯುತ್ತಮ ಮನೆಮದ್ದು ಮಾಹಿತಿ

ಇದನ್ನೂ ಓದಿ:Skin care product: ಗೂಗಲ್‌ ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಸ್ಕಿನ್‌ ಕೇರ್‌ ಪದಾರ್ಥಗಳಿವು

ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಿ

ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಲು ಮಾಡುವಂತಹ ಪ್ರಯತ್ನಗಳು ನಿಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ವರ್ಷಕ್ಕೊಮ್ಮೆ ನೇತ್ರಶಾಸ್ತ್ರಜ್ಞರಲ್ಲಿ ನಿಮ್ಮ ಕಣ್ಣಿನ ತಪಾಸಣೆ ಮಾಡಿಕೊಳ್ಳಿ . ಕಣ್ಣಿನ ಪೊರೆ, ಗ್ಲುಕೋಮಾ ಮತ್ತು ಡಯಾಬಿಟಿಕ್ ರೆಟಿನೋಪತಿಯ ತಪಾಸಣೆಯನ್ನು ಮಾಡಿಸಬೇಕು. ಇದರಿಂದ ವೈದ್ಯರು ನಿಮ್ಮ ಸೂಕ್ಷ್ಮ ಅಂಗಾಂಶಗಳನ್ನು ನೋಡುವ ಮೂಲಕ ಡಯಾಬಿಟಿಕ್ ರೆಟಿನೋಪತಿಯನ್ನು ಆರಂಭಿಕ ಹಂತಗಳಲ್ಲಿ ಗುರುತಿಸಲು ಸಹಾಯವಾಗುತ್ತದೆ.

Tips for diabetes Keep diabetes under control with these tips

Comments are closed.