China Corona : ಕೊರೊನಾ ಜನ್ಮದಾತ ಚೀನಾದಲ್ಲಿ ಹೆಚ್ಚಿದ ಸೋಂಕು : ಡೆಲ್ಟಾ ಆರ್ಭಟಕ್ಕೆ ತತ್ತರಿಸಿದೆ ಕೆಂಪು ರಾಷ್ಟ್ರ

  • ಸುಶ್ಮಿತಾ ಸುಬ್ರಹ್ಮಣ್ಯ

ಬೀಜಿಂಗ್‌ : ಪ್ರಪಂಚಕ್ಕೆ ಮಹಾಮಾರಿಯೆಂಬ ಕೊರೋನಾವನ್ನ ಪರಿಚಯಿಸಿದ್ದ ಚೀನಾ ತಾನು ಬಚಾವ್‌ ಆದೆ ಅಂತಾ ಬಡಾಯಿಕೊಚ್ಚಿಕೊಂಡಿತ್ತು. ಆದ್ರೀಗ ಚೀನಾದ 15 ನಗರ ಗಳಲ್ಲಿ ಡೆಲ್ಟಾ ರೂಪಾಂತರ ಆತಂಕವನ್ನು ಸೃಷ್ಟಿಸಿದ್ದು, ಹಲವು ಕಡೆಗಳಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುತ್ತಿದೆ.

ಡಿಸೆಂಬರ್ 2019 ರಲ್ಲಿ ವುಹಾನ್‌ನಗರದಲ್ಲಿ ಮೊದಲ ಬಾರಿಗೆ ಕೊರೊನಾ ಪ್ರಕರಣ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಹೆಮ್ಮಾರಿ ವಿಶ್ವದಾದ್ಯಂತ ಕಾಡ್ಗಿಚ್ಚಿನಂತೆಯೇ ಹರಡಿತ್ತು. ಕೋಟ್ಯಾಂತರ ಮಂದಿಯನ್ನು ಕಾಡಿದ್ದ ಹೆಮ್ಮಾರಿ, ಲಕ್ಷಾಂತರ ಮಂದಿಯನ್ನು ಬಲಿ ಪಡೆದಿದೆ. ಕಳೆದ ಹಲವು ಸಮಯಗಳಿಂದಲೂ ಕೊರೊನಾದಿಂದ ಗೆದ್ದಿದ್ದೇವೆ ಎಂದು ಹೇಳಿದ್ದ ಚೀನಾ ಇದೀಗ ಹೊಸ ಹೆಮ್ಮಾರಿಯ ಆರ್ಭಟಕ್ಕೆ ಅಕ್ಷರಶಃ ತತ್ತರಿಸಿ ಹೋಗಿದೆ.

ಹಲವು ಸಮಯಗಳ ನಂತರ ಡೆಲ್ಟಾ ಹೆಮ್ಮಾರಿ ಚೀನಾದಲ್ಲಿ ಕಾಣಿಸಿಕೊಂಡಿದೆ. ಡೆಲ್ಟಾ ರೂಪಾಂತರಿಯ ಆರ್ಭಟದಿಂದಾಗಿ ದೇಶದಲ್ಲಿ ಹೆಚ್ಚಿನ ಕೋವಿಡ್ ಕೇಸ್‌ಗಳನ್ನು ದಾಖಲಾಗುತ್ತಿದೆ. ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತ್ಯದ ರಾಜಧಾನಿಯಾದ ನಾನ್ಜಿಂಗ್ ವಿಮಾನ ನಿಲ್ದಾಣದಿಂದ ಪ್ರಾರಂಭವಾದ ಕೋವಿಡ್-19 ಕೇಸ್‌ಗಳ ಹೆಚ್ಚಳವು ಇದೀಗ ಐದು ಪ್ರಾಂತ್ಯಗಳು ಹಾಗೂ ಬೀಜಿಂಗ್ ಗೂ ಹರಡಿದೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಇದನ್ನೂ ಓದಿ : ಕೊರೊನಾ ಸೃಷ್ಟಿಕರ್ತ ಚೀನಾವನ್ನೇ ಕಾಡುತ್ತಿದೆ ಹೆಮ್ಮಾರಿ : ಗಂಟಲು ದ್ರವದ ಬದಲು ಗುದದ್ವಾರದ ಮಾದರಿ ಸಂಗ್ರಹ..!

ಆಫ್ರಿಕಾ ದೇಶದ ಉನ್ನತ ಅಧಿಕಾರಿಯೊಬ್ಬರು ಐಶಾರಾಮಿ ಹೋಟೆಲ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಅಧಿಕಾರಿ ಹಾಗೂ ಅವರ ನಿಯೋಗದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ. ಅಲ್ಲಿಂದ ನಂತರ ಕೋವಿಡ್‌ನ ಹೊಸ ರೂಪಾಂತರ ಪ್ರಬಲವಾಗಿ ಹರಡುತ್ತಿದೆ. ಗಾಬರಿಗೊಂಡ ಅಧಿಕಾರಿಗಳು ಕೂಡಲೇ ಹೋಟೆಲ್ ಸೀಲ್‌ಡೌನ್ ಮಾಡಿದರು ಹಾಗೂ ಹೋಟೆಲ್‌ನಲ್ಲಿದ್ದ ನೂರಾರು ಅತಿಥಿಗಳನ್ನು 21 ದಿನದ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಆದರೆ ಅತಿಥಿಗಳ ಸಂಪರ್ಕಕ್ಕೆ ನೂರಾರು ಜನರು ಬಂದಿದ್ದರು ಎಂಬುದು ತಡವಾಗಿ ಬೆಳಕಿಗೆ ಬಂದಿದೆ. ನಾನ್‌ಜಿಂಗ್‌ನಲ್ಲಿ ಇದುವರೆಗೆ 200 ಕೊರೋನಾ ಕೇಸ್‌ಗಳು ವರದಿಯಾಗಿವೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : 80 ಲಕ್ಷ ಪೋನ್ ಸ್ಚಿಚ್ ಆಫ್, ಶೇ.80 ರಷ್ಟು ಜನರೇ ನಾಪತ್ತೆ : ವಿಶ್ವದೆದುರು ಸುಳ್ಳು ಹೇಳಿದ್ಯಾಕೆ ಚೀನಾ !

ನಾನ್ಜಿಂಗ್ ವಿಮಾನ ನಿಲ್ದಾಣದಲ್ಲಿ ಪ್ರಸ್ತುತ ವಿಮಾನಗಳ ಸೇವೆ ರದ್ದುಪಡಿಸಲಾಗಿದ್ದು ವಿಮಾನ ನಿಲ್ದಾಣದ ಹೆಚ್ಚಿನ ಸಿಬ್ಬಂದಿಗಳಲ್ಲಿ ವೈರಸ್ ಹರಡಿರುವುದು ಖಚಿತವಾಗಿದೆ. ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದರೂ ಇದು ಬೇರೆ ಬೇರೆ ಪ್ರಾಂತ್ಯಗಳಲ್ಲಿ ವ್ಯಾಪಕವಾಗಿ ಹರಡಬಹುದು ಎಂಬ ಕಳವಳ ದೇಶದಲ್ಲಿ ಮನೆಮಾಡಿದೆ.

ಇದನ್ನೂ ಓದಿ : 20,000 ರೋಗಿಗಳ ಹತ್ಯೆಗೆ ಚೀನಾ ಸ್ಕೆಚ್ : ಕೊರೊನಾ ಮುಚ್ಚಿಟ್ಟರೆ ಮರಣದಂಡನೆ !

ಭಾರತ ಹಾಗೂ ಇತರ ದೇಶಗಳಿಗಾಗಿ ಚೀನಾ ತನ್ನ ವಿಮಾನಯಾನ ಸೇವೆಯನ್ನು ಆರಂಭಿಸಿಲ್ಲ ಅದೇ ರೀತಿ ಬೀಜಿಂಗ್‌ಗೆ ಹೋಗುವ ಹೆಚ್ಚಿನ ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ಇತರ ನಗರಗಳಿಗೆ ಮರುನಿರ್ದೇಶಿಸಲಾಗಿದೆ. ಬೀಜಿಂಗ್ ಪ್ರವೇಶಿಸುವ ಮುನ್ನ ಪ್ರಯಾಣಿಕರಿಗೆ 21 ದಿನಗಳ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ. ಚೀನಾದ ಅನೇಕ ನಗರಗಳು ಸ್ಕ್ರೀನಿಂಗ್ ಹೆಚ್ಚಿಸಿದ್ದು ನಾನ್‌ಜಿಂಗ್ ಹಾಗೂ ದೃಢೀಕರಿಸಿದ ಪ್ರಕರಣಗಳು ಪತ್ತೆಯಾಗಿರುವ ಇತರ ನಗರಗಳ ನಿವಾಸಿಗಳಿಗೆ ಕಠಿಣ ನಿಯಮಗಳನ್ನು ಜಾರಿಗೆ ತಂದಿವೆ.

ಇದನ್ನೂ ಓದಿ : ‘ವುವಾನ್ ವೈರಾಲಜಿ ಲ್ಯಾಬ್’ ಎಂಬ ಚೀನಾದ ವಿವಾದಿತ ಲ್ಯಾಬ್ !

ಇದನ್ನೂ ಓದಿ : ಗುಪ್ತಚರ ವರದಿಯಿಂದ ಬಯಲಾಯ್ತು ಚೀನಾ ನಿಜಬಣ್ಣ : ಕೊರೊನಾ ವರದಿ ಮುಚ್ಚಿಡಲು WHO ಮೇಲೆ ಒತ್ತಡ ಹೇರಿದ ಪಾಪಿದೇಶ !

( China sees highest daily figure of COVID-19 patients )

Comments are closed.