Mangalore : ಸಾಮಾಜಿಕ ಜಾಲತಾಣದಲ್ಲಿ ಕೊರಗಜ್ಜನಿಗೆ ಅವಮಾನ : ಭಾವಚಿತ್ರ ಅಶ್ಲೀಲಗೊಳಿಸಿದ ವ್ಯಕ್ತಿ ವಿರುದ್ದ ದೂರು

ಬಜಪೆ: ತುಳುನಾಡಿಗರ ಪಾಲಿನ ಆರಾಧ್ಯ ದೈವ ಎನಿಸಿಕೊಂಡಿರುವ ಕೊರಗಜ್ಜನಿಗೆ ಸಾಮಾಜಿಕ ಜಾಲತಾಣದಲ್ಲಿ ಅವಮಾನ ಮಾಡಲಾಗಿದೆ. ಕೊರಗಜ್ಜನ ಭಾವಚಿತ್ರವನ್ನು ಅಶ್ಲೀಲ ವಾಗಿ ರಚಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡಿದ ವ್ಯಕ್ತಿಯ ವಿರುದ್ದ ಇದೀಗ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಇತ್ತೀಚಿನ ದಿನಗಳಲ್ಲಿ ಕರಾವಳಿ ದೈವ ಕ್ಷೇತ್ರಗಳಲ್ಲಿ ದುಷ್ಕರ್ಮಿಗಳು ದುಷ್ಕೃತ್ಯವನ್ನು ಎಸಗುತ್ತಿದ್ದಾರೆ. ಈ ನಡುವಲ್ಲೇ ಕೊರಗಜ್ಜನ ಭಾವಚಿತ್ರವನ್ನು ತೀರಾ ಅಸಹ್ಯಕರವಾಗಿ ಚಿತ್ರೀಕರಿಸಲಾಗಿದೆ. ಅಲ್ಲದೇ ವಿದೇಶದಲ್ಲಿ ನೆಲೆಸಿರುವ ವ್ಯಕ್ತಿಯೋರ್ವ ಈ ಕೃತ್ಯವನ್ನು ಮಾಡಿದ್ದು, ಧಾರ್ಮಿಕ ಭಾವನೆಗೆ ಧಕ್ಕೆ ತಂದ ವ್ಯಕ್ತಿಯ ವಿರುದ್ದ ಸೂಕ್ತಕ್ರಮ ಕೈಗೊಳ್ಳುವಂತೆ ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ.

ಕೊರಗಜ್ಜನನ್ನು ಸಾಮಾಜಿಕ ಜಾಲತಾಣದಲ್ಲಿ ಅವಮಾನಿಸಿರುವ ಕುರಿತು ಹಿಂದೂ ಜಾಗರಣ ವೇದಿಕೆ ಬಜಪೆ ಠಾಣೆಗೆ ದೂರು ನೀಡಿದ್ದಾರೆ. ಹಿಂದೂ ಜಾಗರಣ ವೇದಿಕೆಯ ಜಿಲ್ಲಾಧ್ಯಕ್ಷ ಹರೀಶ್‌ ಮಟ್ಟಿ, ತಾಲೂಕು ಕಾರ್ಯದರ್ಶಿ ಸಜೇಶ್‌ ಕಂದಾವರ, ಸಾಮಾಜಿಕ ಕಾರ್ಯಕರ್ತ ಭರತ್‌ ಎಸ್.ಕರ್ಕೇರ, ಹಿಂದೂ ಜಾಗರಣ ವೇದಿಕೆಯ ಸಂದೀಪ್‌ ಮಟ್ಟ, ನಿಧಿ ಮಳಲಿ, ಅಶೋಕ್‌ ಕುಮಾರ್‌, ದಿನೇಶ್‌ ಮತ್ತು ನವೀನ್‌ ಅವರು ದೂರು ನೀಡಿದ್ದಾರೆ.

Comments are closed.