dragon fruit : ಚೀನಾದಲ್ಲಿ ಡ್ರ್ಯಾಗನ್​ ಫ್ರೂಟ್​ನಲ್ಲಿ ಕೊರೊನಾ ವೈರಸ್​ ಪತ್ತೆ

dragon fruit :ಕೊರೊನಾ ವೈರಸ್​ ರೂಪಾಂತರಿಗಳು ಜಾಗತಿಕ ಮಟ್ಟದಲ್ಲಿ ಆತಂಕವನ್ನು ಸೃಷ್ಟಿಸುತ್ತಿವೆ.ದಿನದಿಂದ ದಿನಕ್ಕೆ ಜಾಗತಿಕ ಮಟ್ಟದಲ್ಲಿ ಕೋವಿಡ್ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಈ ಎಲ್ಲದರ ನಡುವೆ ಚೀನಾದಲ್ಲಿ ಡ್ರ್ಯಾಗನ್​ ಹಣ್ಣಿನಲ್ಲಿ ಕೊರೊನಾ ವೈರಸ್​ ಪತ್ತೆಯಾಗಿದೆ..! ವಿಯೆಟ್ನಾಂನಿಂದ ಆಮದು ಮಾಡಿಕೊಂಡಿದ್ದ ಹಣ್ಣುಗಳಲ್ಲಿ ಕೊರೊನಾ ವೈರಸ್​ ಪತ್ತೆಯಾದ ಹಿನ್ನೆಲೆಯಲ್ಲಿ ಅನೇಕ ಸೂಪರ್​ಮಾರ್ಕೆಟ್​ಗಳನ್ನು ಬಂದ್​ ಮಾಡಲಾಗಿದೆ.


ಝೆಜಿಯಾಂಗ್​​ ಹಾಗೂ ಜಿಯಾಂಗ್ಸಿಯ ಕನಿಷ್ಟ 9 ನಗರಗಳಲ್ಲಿ ವಿಯೆಟ್ನಾಂನಿಂದ ತರಿಸಲಾದ ಡ್ರ್ಯಾಗನ್​ ಹಣ್ಣುಗಳಲ್ಲಿ ಕೊರೊನಾ ವೈರಸ್​ ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ.


ಈ ಘಟನೆಯ ಬಳಿಕ ಅಧಿಕಾರಿಗಳು ಆಮದು ಮಾಡಿಕೊಂಡ ಆಹಾರ ಉತ್ಪನ್ನಗಳ ತುರ್ತು ತಪಾಸಣೆಯನ್ನು ಆರಂಭಿಸಿದ್ದಾರೆ. ಹಾಗೂ ಈ ಹಣ್ಣನ್ನು ಖರೀದಿ ಮಾಡಿದವರಿಗೆ ಹೋಂ ಕ್ವಾರಂಟೈನ್​ಗೆ ಒಳಗಾಗುವಂತೆ ಸೂಚನೆ ನೀಡಲಾಗಿದೆ. ಆಹಾರ ಪದಾರ್ಥಗಳಿಂದ ಕೊರೊನಾ ಸೋಂಕು ಹರಡುವ ಬಗ್ಗೆ ಯಾವುದೇ ಪುರಾವೆಗಳಿಲ್ಲವಾದರೂ ಸಹ ಚೀನಾ ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಂಡಿದೆ.


ಡಿಸೆಂಬರ್​ ಕೊನೆಯ ವಾರದಲ್ಲಿ ಕೋವಿಡ್​ 19 ಕುರುಹು ಪತ್ತೆಯಾದ ಹಿನ್ನೆಲೆಯಲ್ಲಿ ವಿಯೆಟ್ನಾಂನಿಂದ ಆಮದು ಮಾಡಿಕೊಳ್ಳುವ ಡ್ರ್ಯಾಗನ್​ ಹಣ್ಣಿನ ಮೇಲೆ ಜನವರಿ 26ರವರೆಗೆ ನಿಷೇಧ ಹೇರಿತ್ತು.


ಚೀನಾಕ್ಕೆ ಡ್ರ್ಯಾಗನ್​ ಫ್ರೂಟ್​ ಕಳುಹಿಸಿಕೊಡುವ ಲ್ಯಾಂಗ್​ ಸನ್​ ಪ್ರಾಂತ್ಯದ ಹುಯು ಘಿ ಬಾರ್ಡರ್​ ಮೇಲೆ ನಿಷೇಧ ಹೇರಲಾಗಿದೆ. ಕಂಟೈನರ್​ ಟ್ರಕ್​ಗಳನ್ನು ಹಿಂದಕ್ಕೆ ಕಳುಹಿಸಿದ್ದರಿಂದ ಅಧಿಕಾರಿಗಳು ಟಾನ್​ ಥಾನ್​​ ಗಡಿಯಿಂದ ಡ್ರ್ಯಾಗನ್​​ ಹಣ್ಣಿನ ಆಮದನ್ನು ನಿಷೇಧಿಸಿದ್ದರು.

ಚೀನಾ ಧ್ವಜ ಪ್ರದರ್ಶನ ವಿಡಿಯೋ ನಿಷೇಧವಿಲ್ಲ


ನವದೆಹಲಿ: ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯ (Galwan Valley) ಅನಾಮಿಕ ಸ್ಥಳವೊಂದರಲ್ಲಿ ಚೀನಾ ಯೋಧರು (Chinese Soldiers) ತಮ್ಮ ದೇಶದ ಧ್ವಜ ಪ್ರದರ್ಶಿಸಿರುವ ವಿಡಿಯೋವನ್ನು ನಿಷೇಧಿಸುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಚೀನಾದ ಪ್ರದೇಶದಲ್ಲೇ ಧ್ವಜವನ್ನು (Chinese Flag) ಪ್ರದರ್ಶಿಸಲಾಗಿದೆ. ಅದರ ವಿಡಿಯೋ ಚಿತ್ರೀಕರಿಸಲಾಗಿದೆಯೇ ಹೊರತು ವಾಸ್ತವ ನಿಯಂತ್ರಣ ರೇಖೆಯ (ಎಲ್ಒಸಿ) ವಿವಾದಿತ ಸ್ಥಳದಲ್ಲಿ ಈ ಕಾರ್ಯ ಆಗಿಲ್ಲ. ಹೀಗಾಗಿ ಈ ವಿಡಿಯೋ ನಿಷೇಧಿಸುವ ಅಗತ್ಯವಿಲ್ಲ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (IT Ministry) ಅಧಿಕಾರಿಗಳು ಹೇಳಿದ್ದಾರೆ.

ಗಲ್ವಾನ್ ಕಣಿವೆಯಲ್ಲಿ ಧ್ವಜ ಪ್ರದರ್ಶನದ ವಿಡಿಯೋವನ್ನು ಜನವರಿ 1ರಂದು ಚೀನಿ ಮಾಧ್ಯಮ ಹ್ಯಾಂಡ್ಲರ್ಗಳು ಟ್ವೀಟ್ ಮಾಡಿದ್ದರು. ಆದರೆ ಚೀನಾ ಸರ್ಕಾರ ಆ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ವಾಸ್ತವವಾಗಿ ಹೊಸ ವರ್ಷದ ದಿನದಂದು ಎಲ್‌ಒಸಿಯ ವಿವಿಧ ಭಾಗಗಳಲ್ಲಿ ಭಾರತ ಮತ್ತು ಚೀನಿ ಸೈನಿಕರು ಸಿಹಿ ಹಾಗೂ ಇತರ ಉಡುಗೊರೆಗಳ ವಿನಿಮಯ ಮಾಡಿಕೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಗಲ್ವಾನ ಗಡಿಯಲ್ಲಿ ಹಾರಾಡದ ತಿರಂಗಾ:
ಚೀನಾದ ಅಪಪ್ರಚಾರದ ಹಿಕ್ಮತ್ತಿನ ಮಧ್ಯೆ ಹೊಸ ವರ್ಷದ ದಿನ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರು ಹೆಮ್ಮೆಯಿಂದ ತ್ರಿವರ್ಣ ಧ್ವಜ ಹಾರಿಸಿದ ಫೋಟೊಗಳನ್ನು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ಸೋಮವಾರ ಬಿಡುಗಡೆ ಮಾಡಿದ್ದಾರೆ. ಇದು ಚೀನಿ ಅಪಪ್ರಚಾರಕ್ಕೆ ತಕ್ಕ ಉತ್ತರ ಎಂದು ಅಭಿಪ್ರಾಯಪಡಲಾಗಿದೆ.

China shuts supermarkets after virus traces found in dragon fruit from Vietnam

ಇದನ್ನು ಓದಿ : Mixed Booster Dose : ಕೋವಿಶೀಲ್ಡ್ ಅಥವಾ ಕೋವಾಕ್ಸಿನ್ : ಮಿಕ್ಸ್ ಬೂಸ್ಟರ್ ಡೋಸ್ ಅವಕಾಶವಿಲ್ಲಎಂದ ಕೇಂದ್ರ ಸರಕಾರ

ಇದನ್ನೂ ಓದಿ : Weekend curfew rules : ರಾಜ್ಯದಲ್ಲಿ ವೀಕೆಂಡ್​ ಕರ್ಫ್ಯೂ ಅವಧಿಯಲ್ಲಿ ಏನಿರುತ್ತೆ, ಏನಿರಲ್ಲ: ಇಲ್ಲಿದೆ ಮಾಹಿತಿ

Comments are closed.