wedding menu printed on ruler : ಅಳತೆ ಪಟ್ಟಿಯನ್ನು ಹೀಗೂ ಬಳಕೆಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದೆ ಈ ಮದುವೆ ಕಾರ್ಯಕ್ರಮ

wedding menu printed on ruler :ಮದುವೆ ಎಂದರೆ ಅದೊಂದು ದೊಡ್ಡ ಸಂಭ್ರಮ. ಪ್ರತಿಯೊಬ್ಬ ವಧು ವರನಿಗೂ ತಮ್ಮ ಮದುವೆ ಎಲ್ಲರಿಗಿಂತ ಭಿನ್ನವಾಗಿ ಇರಬೇಕು ಎಂಬ ಆಸೆ ಇದ್ದೇ ಇರುತ್ತದೆ. ಇದಕ್ಕಾಗಿ ಹಲವರು ಹಲವು ರೀತಿಯಲ್ಲಿ ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಾರೆ. ಕೆಲವರು ಮದುವೆ ಮಂಟಪದ ಅಲಂಕಾರವನ್ನು ಡಿಫರೆಂಟ್​ ಆಗಿ ಮಾಡಿದರೆ, ಇನ್ನು ಕೆಲವರು ತಮ್ಮ ಧಿರಿಸಿನಲ್ಲಿ ವಿಶೇಷತೆಯನ್ನು ತೋರುತ್ತಾರೆ. ಮತ್ತಷ್ಟು ಮಂದಿ ತರಹೇವಾರಿ ಅಡುಗೆಗಳನ್ನು ಮಾಡಿ ತಮ್ಮ ವಿಭಿನ್ನತೆಯನ್ನು ಪ್ರದರ್ಶಿಸುವುದುಂಟು. ಆದರೆ ಇಲ್ಲೊಂದು ನವಜೋಡಿ ತಮ್ಮ ಮದುವೆಯಲ್ಲಿ ಮಾಡಿದ ಈ ಡಿಫರೆಂಟ್​ ಕಾರ್ಯ ಎಷ್ಟರ ಮಟ್ಟಿಗೆ ಸೌಂಡ್ ಮಾಡ್ತಿದೆ ಅಂದರೆ ಸೋಶಿಯಲ್​ ಮೀಡಿಯಾದಲ್ಲೆಲ್ಲ ವೈರಲ್​ ಆಗಿದೆ.


ಮದುವೆ ಮನೆ ಅಂದಮೇಲೆ ಅಲ್ಲಿ ಒಳ್ಳೊಳ್ಳೆ ಅಡುಗೆಗಳು ಇರಲೇಬೇಕು. ಕೆಲವು ಕಡೆಗಳಲ್ಲಿ ಮದುವೆ ಮನೆಯ ಮೆನುವನ್ನು ಪ್ರಿಂಟ್​ ಮಾಡಲಾಗುತ್ತದೆ. ಇದನ್ನು ಅವರು ಕಾರ್ಡ್​ನಲ್ಲಿ ಪ್ರಿಂಟ್​ ಮಾಡಬಹುದು. ಅಥವಾ ಅದು ಕರ ಪತ್ರದ ರೂಪದಲ್ಲಿಯೂ ಇರಬಹುದು. ಆದರೆ ಪಶ್ಚಿಮ ಬಂಗಾಳದಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ಮೆನುವನ್ನು ಸ್ಕೇಲ್​ ಅಂದರೆ ಅಳತೆ ಪಟ್ಟಿಯ ಮೇಲೆ ಮುದ್ರಿಸಲಾಗಿದೆ..! ಈ ಫೋಟೋವನ್ನು ಟ್ವಿಟರ್​ ಬಳಕೆದಾರರೊಬ್ಬರು ಶೇರ್​ ಮಾಡಿದ್ದರು ಸೋಶಿಯಲ್​ ಮೀಡಿಯಾದಲ್ಲಿ ಈ ಫೊಟೋ ಹಾಟ್​ ಕೇಕ್​ನಂತೆ ಸೇಲ್​ ಆಗ್ತಿದೆ.


ಅಂದಹಾಗೆ ಇದು ನಿನ್ನೆ ಮೊನ್ನೆ ನಡೆದ ಮದುವೆಯಲ್ಲ. ಬದಲಾಗಿ 2013ರಲ್ಲಿ ನಡೆದ ಒಂದು ಮದುವೆ ಕಾರ್ಯಕ್ರಮವಾಗಿದೆ. ಈ ಮದುವೆ ಮನೆಯಲ್ಲಿ ಅತಿಥಿಗಳಿಗೆ ನೀಡಬೇಕಾದ ಆಹಾರದ ಪಟ್ಟಿಯನ್ನು ಅಳತೆ ಪಟ್ಟಿಗಳ ಮೇಲೆ ಮುದ್ರಿಸಲಾಗಿತ್ತು. ಈ ಅಳತೆ ಪಟ್ಟಿಯ ಮೇಲೆ ಬಂಗಾಳದ ಫೇಮಸ್​ ಆಹಾರ ಪದಾರ್ಥಗಳಾದ ಫಿಶ್​ ಕಾಲಿಯಾ, ಫ್ರೈಡ್​ ರೈಸ್​, ಮಟನ್​ ಮಸಾಲಾ, ಮಾವಿನಕಾಯಿ ಚಟ್ನಿ ಹೀಗೆ ಹಲವು ಹೆಸರುಗಳನ್ನು ಮುದ್ರಿಸಲಾಗಿದೆ. ಸುಶ್ಮಿತಾ ಹಾಗೂ ಅನಿಮೇಷ್​ ಎನ್​ ಸಿಲ್ಗುರಿ ಎಂಬವರ ವಿವಾಹದ ಮದುವೆ ಮೆನು ಇದಾಗಿದೆ.

ಇದನ್ನು ಓದಿ :How fast is Earth Moving around the sun?: ಭೂಮಿ ಎಷ್ಟು ವೇಗವಾಗಿ ಸೂರ್ಯನ ಸುತ್ತ ಸುತ್ತುತ್ತದೆ?

Bengali wedding menu printed on ruler makes netizens go ROFL. Viral pics

Comments are closed.