China lockdown : ಚೀನಾದಲ್ಲಿ ಕೋವಿಡ್‌ ಮಹಾ ಸ್ಪೋಟ : ಲಾಕ್‌ಡೌನ್ ವಿಸ್ತರಣೆ ಪಿಪಿಇ ಕಿಟ್ ಧರಿಸಿದ ಮಕ್ಕಳು

ಬೀಜಿಂಗ್‌ : ವಿಶ್ವಕ್ಕೆ ಕೊರೊನಾ ಹೆಮ್ಮಾರಿಯನ್ನು ಪರಿಚಯಿಸಿದ್ದ ಚೀನಾ ಇದೀಗ ಕೋವಿಡ್‌ ಮಹಾ ಸ್ಪೋಟದಿಂದ (Covid Blast ) ತತ್ತರಿಸಿ ಹೋಗಿದೆ. ಚೀಬಾದ ಅತೀ ದೊಡ್ಡ ನಗರವಾಗಿರುವ ಶಾಂಘೈನಲ್ಲಿ ಲಾಕ್‌ಡೌನ್‌ (China lockdown) ಘೋಷಣೆ ಮಾಡಲಾಗಿದೆ. ಮಕ್ಕಳು ಪಿಪಿಇ ಕಿಟ್‌ ಧರಿಸಿ ಓಡಾಡುತ್ತಿದ್ರೆ, ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಇನ್ನೊಂದೆಡೆಯಲ್ಲಿ ಶೂನ್ಯ ಕೋವಿಡ್‌ ನೀತಿಯನ್ನು ಅಳವಡಿಸಿಕೊಳ್ಳಲಾಗಿದೆ.

ಚೀನಾ ಏಪ್ರಿಲ್ 26 ರವರೆಗೆ ಲಾಕ್‌ಡೌನ್‌ ವಿಸ್ತರಣೆ ಮಾಡಿದೆ. ಶಾಂಘೈ ನಗರದಲ್ಲಿ ಚಿಕ್ಕ ಮಕ್ಕಳು ಪಿಪಿಇ ಕಿಟ್‌ಗಳನ್ನು ಧರಿಸಿ ಓಡಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಶಾಂಘೈನ ಈ ವೀಡಿಯೊದಲ್ಲಿ, ಚಿಕ್ಕ ಮಕ್ಕಳು ತಲೆಯಿಂದ ಟೋ ವರೆಗೆ ಬಿಳಿ ಪಿಪಿಇ ಕಿಟ್‌ನಲ್ಲಿ ಮುಚ್ಚಿ ಶಾಲೆಗೆ ಹೋಗುತ್ತಿರುವುದನ್ನು ಕಾಣಬಹುದು. ಇನ್ನೊಂದೆಡೆಯಲ್ಲಿ ಮಕ್ಕಳು ಕೂಡ ಮುಖಕ್ಕೆ ಮಾಸ್ಕ್‌ ಹಾಕಿಕೊಂಡಿದ್ದಾರೆ. ಕಣ್ಣುಗಳನ್ನು ಮಾತ್ರ ಕಾಣಿಸುವಂತೆ ಮಕ್ಕಳು ಓಡಾಡುತ್ತಿರುವ ದೃಶ್ಯ ಹೃದಯ ವಿದ್ರಾವಕವಾಗಿದೆ. ಇನ್ನೊಂದೆಡೆಯಲ್ಲಿ ಕೋವಿಡ್‌ ಸೋಂಕಿನ ಹಿನ್ನೆಲೆಯಲ್ಲಿ ಮಕ್ಕಳನ್ನು ಪೋಷಕರಿಂದ ಬೇರ್ಪಡಿಸ ಕಾರ್ಯ ನಡೆಯುತ್ತಿದ್ದು, ಮಕ್ಕಳು ಕಿರುಚಾಡುತ್ತಿರುವುದು ಕಂಡು ಬರುತ್ತಿದೆ. ಇನ್ನೊಂದೆಡೆಯಲ್ಲಿ ಮಕ್ಕಳನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಶಾಂಘೈನ 26 ಮಿಲಿಯನ್ ಜನಸಂಖ್ಯೆಯು ವಿಶ್ವದ ಕಟ್ಟುನಿಟ್ಟಾದ ಲಾಕ್‌ಡೌನ್‌ನಲ್ಲಿ ವಾಸಿಸಬೇಕಾಗಿದೆ.. ಕಳೆದ ನಾಲ್ಕು ವಾರಗಳಿಂದ ಈ ಲಾಕ್‌ಡೌನ್ ಜಾರಿಯಲ್ಲಿದೆ. ನಗರದಲ್ಲಿನ ಕೋವಿಡ್ ಲಾಕ್‌ಡೌನ್ ಮೂಲಕ ಮಾತ್ರ ನಿಯಂತ್ರಿಸಬಹುದು ಎಂದು ಚೀನಾದ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಗುರುವಾರ ಶಾಂಘೈನಲ್ಲಿ COVID-19 ನಿಂದ 11 ರೋಗಿಗಳ ಸಾವಿನ ನಂತರ ಸಾರ್ವಜನಿಕ ಆಕ್ರೋಶ ಹೆಚ್ಚುತ್ತಿರುವ ವರದಿಗಳ ಮಧ್ಯೆ ನಗರದಲ್ಲಿ ಲಾಕ್‌ಡೌನ್ ಅನ್ನು ಏಪ್ರಿಲ್ 26 ರವರೆಗೆ ವಿಸ್ತರಿಸಲಾಗಿದೆ. ವರದಿಗಳ ಪ್ರಕಾರ, 26 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಶಾಂಘೈನಲ್ಲಿ ಪ್ರಸ್ತುತ ಕರೋನಾ ವೈರಸ್ ಅಲೆಯ ಸಮಯದಲ್ಲಿ ಸಾವಿನ ಸಂಖ್ಯೆ 36 ಕ್ಕೆ ಏರಿದೆ.

ಶುಕ್ರವಾರ ಬಿಡುಗಡೆಯಾದ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ನಗರದಲ್ಲಿ 17,629 ಹೊಸ ಸೋಂಕಿನ ಪ್ರಕರಣಗಳು ಕಂಡುಬಂದಿವೆ, ಇದು ಒಂದು ದಿನದ ಹಿಂದಿನ ಪ್ರಕರಣಗಳಿಗಿಂತ 4.7 ಶೇಕಡಾ ಕಡಿಮೆಯಾಗಿದೆ. ಮಾರ್ಚ್ 1 ರಿಂದ, ನಗರದಲ್ಲಿ ಒಟ್ಟು ಸೋಂಕಿನ ಪ್ರಕರಣಗಳ ಸಂಖ್ಯೆ 4,43,500 ಕ್ಕೆ ಏರಿಕೆ ಕಂಡಿದೆ.

ಇದನ್ನೂ ಓದಿ : ಸಿಬಿಎಸ್‌ಇ ಪರೀಕ್ಷೆಗೆ ಎರಡನೇ ದಿನ ಬಾಕಿ, ಹೆಚ್ಚಿನ ಅಂಕಗಳಿಸಲು ಹೀಗೆ ಇರಲಿ ನಿಮ್ಮ ತಯಾರಿ

ಇದನ್ನೂ ಓದಿ : ಅಕ್ರಮ ತೈಲ ಸಂಸ್ಕರಣಾಗಾರದಲ್ಲಿ ಸ್ಫೋಟ : 100 ಕ್ಕೂ ಅಧಿಕ ಮಂದಿ ಸಾವು

Covid Blast in China lockdown extended, students with PPE kit

Comments are closed.