Sachin Tendulkar : ಕ್ರಿಕೆಟ್‌ ದೇವರ ಜನ್ಮದಿನ : ನನಗೆ ಕೇವಲ 20 ವರ್ಷ ಎಂದ ಸಚಿನ್

ಕ್ರಿಕೆಟ್ ಲೋಕದ ದೇವರು ಮಾಸ್ಟರ್ ಬ್ಲಾಸ್ಟರ್ ಸಚಿನ್‌ ತೆಂಡುಲ್ಕರ್ (Sachin Tendulkar) ಅವರು ಇಂದು 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕ್ರಿಕೆಟ್‌ ದಿಗ್ಗಜನಿಗೆ ಸಾಮಾಜಿಕ ತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ಸೇರಿದಂತೆ ಅನೇಕರು ಸಚಿನ್ ಅವರ ಫೋಟೋವನ್ನು ಶೇರ್ ಮಾಡಿ ಶುಭಾಶಯ ಕೋರುತ್ತಿದ್ದಾರೆ. ಆದರೆ ತೆಂಡೂಲ್ಕರ್ ಬರ್ತಡೇ ಕುರಿತು ಆಡಿರುವ ಮಾತು ಮಾತ್ರ ಎಲ್ಲಕ್ಕಿಂತ ಹೆಚ್ಚು ಸದ್ದು ಮಾಡುತ್ತಿದೆ.

ಮಹಾರಾಷ್ಟ್ರದ ಮುಂಬೈನಲ್ಲಿ 1973 ರಲ್ಲಿ ಜನಿಸಿದ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಶತಕಗಳ ಸರದಾರ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕ ಬಾರಿಸುವ ಮೂಲಕ ಕ್ರಿಕೆಟ್‌ ದಂತಕತೆ ಎನಿಸಿಕೊಂಡಿದ್ದಾರೆ. ಕ್ರಿಕೆಟ್‌ ಲೋಕದಲ್ಲಿ ಸಚಿನ್‌ ತೆಂಡೂಲ್ಕರ್‌ ಅವರ ಸಾಧನೆ ಇಂದಿನ ಯುವ ಕ್ರಿಕೆಟಿಗರಿಗೆ ಪ್ರೇರಣೆಯಾಗಿದೆ. ಐವತ್ತನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿರುವ ಸಚಿನ್‌ ಆಡಿರುವ ಆ ಮಾತು ಇದೀಗ ಸಾಕಷ್ಟು ಟ್ರೆಂಡ್‌ ಆಗುತ್ತಿದೆ.

ಏ.21 ರಂದು ಮುಂಬೈ ಮತ್ತು ಚೆನ್ನೈ ತಂಡದ ನಡುವೆ ನಡೆದ ಐಪಿಎಲ್ ಹಣಾಹಣಿ ನಡುವೆ ತೆಂಡೂಲ್ಕರ್ ಬಳಿ ಕಾಮೆಂಟೇಟರ್ ಒಬ್ಬರು, ಇನ್ನು ಮೂರು ದಿನಗಳಲ್ಲಿ ನಿಮ್ಮ ಜನ್ಮದಿನದ ಅರ್ಧಶತಕ ಆಚರಿಸಲಿದ್ದೀರಿ. ಅದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದ್ದರು. ಆ ಪ್ರಶ್ನೆಗೆ ಸಖತ್ತಾಗೇ ಉತ್ತರ ನೀಡಿದ್ದ ಸಚಿನ್, ” ನಾನು ಹೊಡೆದ ರನ್ ಗಳನ್ನು ಹಾಗೂ ಆದ ವಯಸ್ಸನ್ನೂ ಎಂದಿಗೂ ಲೆಕ್ಕ ಇಟ್ಟಿಲ್ಲ ಎಂದಿದ್ದರು.

“ನನಗೆ ಕೇವಲ 20 ವರ್ಷ ಎಂದ ಸಚಿನ್”

ಇನ್ನೂ ಮುಂದುವರೆದು ಪ್ರಶ್ನೆ ಕೇಳಿದ್ದ ಕಾಮೆಂಟೇಟರ್, ಕ್ರೀಡಾಂಗಣದ ಒಳಗೆ ಹೊಡೆಯುವ ಅರ್ಧಶತಕಕ್ಕೂ, ಜೀವನದ ಅರ್ಧಶತಕಕ್ಕೂ ಏನು ವ್ಯತ್ಯಾಸ ಎಂದಿದ್ದರು. ಅದಕ್ಕೆ ಉತ್ತರ ನೀಡಿದ್ದ ಮಾಸ್ಟರ್ ಬ್ಲಾಸ್ಟರ್ ನಾನೂ ಯಾವಾಗಲೂ ಯೋಚಿಸುವ ಹಾಗೆ ನನಗೆ ಆಗಿರೋದು ಕೇವಲ 20 ವರ್ಷ ಮಾತ್ರ. ಆದರೆ ಅದರ ಜತೆ 29 ವರ್ಷಗಳ ಅನುಭವ ಮಾತ್ರ ಸೇರಿಕೊಂಡಿದೆ ಎಂದಾಗ ಕಾಮೆಂಟೇಟರ್ ಆ ಮಾತಿಗೆ ಮೌನದ ಸಮ್ಮತಿ ಸೂಚಿಸಿದ್ದು ಈಗ ವೈರಲ್ ಸಂಗತಿ.

ಇದನ್ನೂ ಓದಿ : ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕೀರಾನ್‌ ಪೊಲಾರ್ಡ್‌ ನಿವೃತ್ತಿ ಘೋಷಣೆ

ಇದನ್ನೂ ಓದಿ : ಸೋತು ಸುಣ್ಣವಾದ ಮುಂಬೈ ತಂಡ ಸೇರಿದ ಭಾರತದ ಈ ಖ್ಯಾತ ಬೌಲರ್‌, ವೀಕ್ಷಕ ವಿವರಣೆಗಾರ

Sachin Tendulkar 50th birthday viral cricket god Talk

Comments are closed.