Dallas Air Show: ಎರಡನೇ ಮಹಾಯುದ್ದ ಕಾಲದ ವಿಮಾನಗಳು ಪರಸ್ಪರ ಡಿಕ್ಕಿ; 6 ಮಂದಿ ಸಾವು

ಡಲ್ಲಾಸ್‌ : (Dallas Air Show) ಏರ್‌ ಶೋ ಕಾರ್ಯಕ್ರಮದಲ್ಲಿ ಎರಡನೇ ಮಹಾಯುದ್ದ ಕಾಲದ ಎರಡು ವಿಮಾನಗಳು ಪರಸ್ಪರ ಡಿಕ್ಕಿಯಾಗಿ ಎರಡು ವಿಮಾನದಲ್ಲಿದ್ದ ಆರು ಮಂದಿ ಸಾವನ್ನಪ್ಪಿರುವ ಭೀಕರ ಘಟನೆ ಅಮೇರಿಕಾದ ಡಲ್ಲಾಸ್‌ ನಲ್ಲಿ ಶನಿವಾರ ನಡೆದಿದೆ. ವಿಮಾನಗಳು ಡಿಕ್ಕಿ ಹೊಡೆದ ಪರಿಣಾಮ ವಿಮಾನದ ಭಾಗಗಳು ಛಿದ್ರ ಛಿದ್ರವಾಗಿವೆ.

ಡಲ್ಲಾಸ್‌ ನಲ್ಲಿ ಶನಿವಾರ ವೈಮಾನಿಕ ಪ್ರದರ್ಶನ(Dallas Air Show) ನಡೆಯುತ್ತಿದ್ದು, ಪ್ರದರ್ಶನದಲ್ಲಿ ಎರಡನೇ ಮಹಾಯುದ್ದದ ಎರಡು ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಬೋಯಿಂಗ್‌ ಬಿ-17 ಫ್ಲೈಯಿಂಗ್‌ ಫೋರ್ಟ್ರೆಸ್‌ ಮತ್ತು ಬೆಲ್‌ ಪಿ- 63 ಕಿಂಗ್‌ ಕೋಬ್ರಾ ವಿಮಾನಗಳು ಪರಸ್ಪರ ಡಿಕ್ಕಿಯಾಗಿವೆ ಎಂದು ವರದಿಯಾಗಿವೆ. ಎರಡು ವಿಮಾನಗಳು ವೈಮಾನಿಕ ಪ್ರದರ್ಶನದ ಭಾಗವಾಗಿದ್ದ ಕಾರಣ ನಡೆದ ಘಟನೆ ಪೂರ್ತಿಯಾಗಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು , ಜನರನ್ನು ಬೆಚ್ಚಿಬೀಳಿಸುವಂತಿದೆ. ಪ್ರದರ್ಶನದ ವಿಮಾನದಲ್ಲಿ ಕನಿಷ್ಠ ಆರು ಮಂದಿ ಇರುವುದಾಗಿ, ಅವರು ಬದುಕುಳಿದಿರುವ ಕುರಿತು ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ವರದಿಗಳು ಹೇಳುತ್ತಿವೆ.

ಅಪಘಾತದ ವಿಡಿಯೋಗಳು ಜನರನ್ನು ಬೆಚ್ಚಿಬೀಳಿಸುತ್ತಿವೆ ಎಂದು ಡಲ್ಲಾಸ್‌ ನ ಮೇಯರ್‌ ಎರಿಕ್‌ ಜಾನ್ಸನ್‌ ಹೇಳಿದ್ದು, ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯು ಅಗ್ನಿಶಾಮಕ ದಳ ಮತ್ತು ಸ್ಥಳೀಯ ಪೋಲೀಸರ ಬೆಂಬಲದೊಂದಿಗೆ ಅಪಘಾತದ ದೃಶ್ಯವನ್ನು ನಿಯಂತ್ರಿಸಿದೆ ಎಂದು ತಿಳಿಸಿದ್ದಾರೆ.

Originally tweeted by DTX Daily (@dtxdaily) on November 12, 2022.

ಕಿಂಗ್‌ಕೋಬ್ರಾ ಅಮೆರಿಕದ ಯುದ್ಧ ವಿಮಾನವಾಗಿದೆ ಮತ್ತು ಯುದ್ಧದ ಸಮಯದಲ್ಲಿ ಸೋವಿಯತ್ ಪಡೆಗಳು ಇದನ್ನು ಹೆಚ್ಚಾಗಿ ಬಳಸಿದ್ದವು. ಇನ್ನು, B-17 ಮಹಾ ಯುದ್ಧದ ಸಮಯದಲ್ಲಿ ಜರ್ಮನಿಯ ವಿರುದ್ಧದ ದಾಳಿಯಲ್ಲಿ ಬಳಸಲಾದ 4 -ಎಂಜಿನ್ ಬಾಂಬರ್ ವಿಮಾನ ಇದಾಗಿದೆ. ಈ ಎರಡೂ ವಿಮಾನಗಳು ಹಾರಾಡುವ ಸ್ಥಿತಿಯಲ್ಲಿರುವುದು ಅಪರೂಪ ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ : Employment Visa Recruitment : 1 ಲಕ್ಷಕ್ಕೂ ಅಧಿಕ ಉದ್ಯೋಗ ವೀಸಾ ನೇಮಕಾತಿ ಘೋಷಿಸಿದ ಅಮೇರಿಕಾ

ಹೆಚ್ಚಿನ ಬಿ-17 ಬಾಂಬರ್‌ ವಿಮಾನಗಳನ್ನು ಯುದ್ದದ ನಂತರ ವಸ್ತು ಸಂಗ್ರಹಾಲಯಗಳು ಮತ್ತು ಏರ್‌ ಶೋ ಗಳಲ್ಲಿ ಮಾತ್ರ ನೋಡಬಹುದಾಗಿದೆ. ನಿರೂಪಕರು ವಿಮಾನಗಳ ಮಹತ್ವನ್ನು ವಿವರಿಸುತ್ತಿದ್ದರು ಮತ್ತು ಹಿನ್ನಲೆಯಲ್ಲಿ ದೇಶಭಕ್ತಿ ಗೀತೆಯೂ ಕೇಳಿಬರುತ್ತಿತ್ತು ಎಂದು ಕಾರ್ಯಕ್ರಮಕ್ಕೆ ಹೋಗಿದ್ದ ವಕೀಲರೊಬ್ಬರು ಘಟನೆಯ ಬಗ್ಗೆ ವರದಿಯೊಂದರಲ್ಲಿ ಹೇಳಿದ್ದಾರೆ.

ಇದನ್ನೂ ಓದಿ : Employment Visa Recruitment : 1 ಲಕ್ಷಕ್ಕೂ ಅಧಿಕ ಉದ್ಯೋಗ ವೀಸಾ ನೇಮಕಾತಿ ಘೋಷಿಸಿದ ಅಮೇರಿಕಾ (newsnext.live)

B-17 ನಿಜವಾಗಿಯೂ ಕೆಳಕ್ಕೆ ಹಾರುತ್ತಿರುವುದು ಕಂಡುಬಂದಿದ್ದು, ಆಗ ಏನಾಗುತ್ತಿದೆ ಎಂದು ಅವರು ಗ್ರಹಿಸಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು. ನಂತರ B-17 ನ ಒಂದು ರೆಕ್ಕೆ ಹೊರಬಂದಿತು ಮತ್ತು ವಿಮಾನದ ಫ್ಯೂಸ್ಲೇಜ್ ನೆಲಕ್ಕೆ ಬಿದ್ದಿತು, ನಂತರ ದೊಡ್ಡ ಬೆಂಕಿಯ ಚೆಂಡು ಕಾಣಿಸಿಕೊಂಡಿತು ಎಂದೂ ತಿಳಿದುಬಂದಿದೆ.

Originally tweeted by Giancarlo (@GianKaizen) on November 12, 2022.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾದ್ಯಮಗಳಲ್ಲಿ ವೀಕ್ಷಕರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, “ನಾನು ಅಲ್ಲಿಯೇ ನಿಂತಿದ್ದೆ ನಾನು ಸಂಪೂರ್ಣ ಆಘಾತಕ್ಕೊಳಗಾಗಿದ್ದೆ. ಸುತ್ತಮುತ್ತಲಿನ ಎಲ್ಲರೂ ಏಧುಸಿರು ಇಡುತ್ತಿದ್ದರು. ಅಳುತ್ತಿದ್ದರು ಮತ್ತು ಎಲ್ಲರೂ ಆಘಾತಕ್ಕೊಳಗಾಗಿದ್ದರು.” ಎಂದು ಮೊಂಟೋಯಾ ಎಂಬ ಇಪ್ಪತ್ತೇಳು ವರ್ಷದ ವ್ಯಕ್ತಿ ಹೇಳಿದರು.

Comments are closed.