IPL Trading : ಪ್ರಮುಖ ವೇಗಿಯನ್ನು ಮುಂಬೈ ಇಂಡಿಯನ್ಸ್‌ಗೆ ನೀಡಿದ ರಾಯಲ್ ಚಾಲೆಂಜರ್ಸ್

ಬೆಂಗಳೂರು: ಐಪಿಎಲ್-16ನೇ ಆವೃತ್ತಿಯ ಟೂರ್ನಿಗಾಗಿ 10 ತಂಡಗಳು ಸಜ್ಜಾಗುತ್ತಿದ್ದು, ಆಟಗಾರರ ಟ್ರೇಡಿಂಗ್ ಆರಂಭವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಪಾಳೆಯದಲ್ಲಿದ್ದ ಆಸ್ಟ್ರೇಲಿಯಾದ ಎಡಗೈ ವೇಗದ ಬೌಲರ್ ಜೇಸನ್ ಬೆಹ್ರೆನ್’ಡ್ರೊಫ್ (Jason Behrendroff) ಅವರನ್ನು ಮುಂಬೈ ಇಂಡಿಯನ್ಸ್ ತಂಡಕ್ಕೆ ಬಿಟ್ಟು ಕೊಟ್ಟಿದೆ.

2022ರ ಐಪಿಎಲ್ ಹರಾಜಿನಲ್ಲಿ ಬೆಹ್ರೆನ್’ಡ್ರೊಫ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 75 ಲಕ್ಷ ರೂಪಾಯಿ ಮೊತ್ತಕ್ಕೆ ಖರೀದಿಸಿತ್ತು. ಕಳೆದ ಐದು ವರ್ಷಗಳಿಂದ ಐಪಿಎಲ್’ನಲ್ಲಿ ಆಡುತ್ತಿರುವ ಆಸೀಸ್ ವೇಗಿ ಬೆಹ್ರೆನ್’ಡ್ರೊಫ್ 2018ರಿಂದ 2020ರವರೆಗೆ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರು. ಆದರೆ ಆಡಲು ಅವಕಾಶ ಸಿಕ್ಕಿದ್ದು 2019ರ ಟೂರ್ನಿಯಲ್ಲಿ ಮಾತ್ರ. ಆ ಟೂರ್ನಿಯಲ್ಲಿ ಬೆಹ್ರೆನ್’ಡ್ರೊಫ್ ಐದು ವಿಕೆಟ್’ಗಳನ್ನು ಪಡೆದಿದ್ದರು.

2021ರಲ್ಲಿ ಬೆಹ್ರೆನ್’ಡ್ರೊಫ್ ಅವರನ್ನು ಮತ್ತೊಮ್ಮೆ ಆಸೀಸ್ ವೇಗಿ ಜೋಶ್ ಹೇಜಲ್’ವುಡ್ ಅವರಿಗೆ ಬದಲಿ ಆಟಗಾರನಾಗಿ ಚೆನ್ನೈ ಸೂಪರ್ ಕಿಂಗ್ಸ್ ತನ್ನ ತಂಡಕ್ಕೆ ಸೇರಿಸಿಕೊಂಡಿತ್ತು.
ಆಸ್ಟ್ರೇಲಿಯಾ ಪರ 9 ಟಿ20 ಪಂದ್ಯಗಳನ್ನಾಡಿರುವ ಜೇಸನ್ ಬೆಹ್ರೆನ್’ಡ್ರೊಫ್ 8.50 ಎಕಾನಮಿಯಲ್ಲಿ 7 ವಿಕೆಟ್ ಪಡೆದಿದ್ದಾರೆ. ವೃತ್ತಿಜೀವನದಲ್ಲಿ ಒಟ್ಟಾರೆ 105 ಟಿ20 ಪಂದ್ಯಗಳನ್ಬೆನು ಆಡಿರುವ ಬೆಹ್ರೆನ್’ಡ್ರೊಫ್ 7.41ರ ಉತ್ತಮ ಎಕಾನಮಿಯಲ್ಲಿ 117 ವಿಕೆಟ್’ಗಳನ್ನು ಕಬಳಿಸಿದ್ದಾರೆ.

ಎರಡು ವರ್ಷಗಳ ನಂತರ ಮತ್ತೆ ಮುಂಬೈ ಇಂಡಿಯನ್ಸ್ ತಂಡ ಸೇರಿರುವ ಜೇಸನ್ ಬೆಹ್ರೆನ್’ಢ್ರೊಫ್ 2023ರ ಐಪಿಎಲ್’ನಲ್ಲಿ ಐದು ಬಾರಿಯ ಚಾಂಪಿಯನ್ನರ ಪರ ಕಣಕ್ಕೆ ಇಳಿಯಲಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಜಸ್ಪ್ರೀತ್ ಬುಮ್ರಾ, ರೀಲೆ ಮೆರಿಡಿತ್, ಜೋಫ್ರಾ ಆರ್ಚರ್, ಡೇನಿಯಲ್ ಸ್ಯಾಮ್ಸ್’ರಂತಹ ಉತ್ತಮ ಗುಣಮಟ್ಟದ ವೇಗಿಗಳಿದ್ದಾರೆ. ಹ್ರೆನ್’ಡ್ರೊಫ್ ಅವರ ಆಗಮನದಿಂದ ಮುಂಬೈ ಇಂಡಿಯನ್ಸ್ ತಂಡದ ವೇಗದ ಬೌಲಿಂಗ್ ಪಡೆದೆ ಮತ್ತಷ್ಟು ಬಲ ಬಂದಿದೆ. 2023ರ ಐಪಿಎಲ್ ಟೂರ್ನಿಗೆ ಆಟಗಾರರ ಮಿನಿ ಹರಾಜು ಡಿಸೆಂಬರ್ 23ರಂದು ಕೇರಳದ ಕೊಚ್ಚಿಯಲ್ಲಿ ಆರಂಭವಾಗಲಿದೆ. ನವೆಂಬರ್ 15ಕ್ಕೂ ಮುನ್ನ ರೀಟೇನ್ ಆಟಗಾರರ ಪಟ್ಟಿಯನ್ನು ಎಲ್ಲಾ ತಂಡಗಳು ಐಪಿಎಲ್ ಆಡಳಿತ ಮಂಡಳಿಗೆ ಸಲ್ಲಿಸಬೇಕಿದೆ.

ಇದನ್ನೂ ಓದಿ : IPL 2023 :ಕೀರಾನ್ ಪೊಲಾರ್ಡ್ ಗೆ ಕೋಕ್ ಕೊಟ್ಟ ಮುಂಬೈ ಇಂಡಿಯನ್ಸ್‌

ಇದನ್ನೂ ಓದಿ : Pakistan Vs England final: ಭಾರತವಿಲ್ಲದ ಟಿ20 ವಿಶ್ವಕಪ್ ಫೈನಲ್ ಹೇಗಿರಲಿದೆ ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

RCB top bowler Jason Behrendroff joins Mumbai Indians for IPL 2023

Comments are closed.