Guava Leaf : ಸೀಬೆ ಗಿಡದ ಚಿಗುರೆಲೆ ಮಧುಮೇಹಕ್ಕೆ ಅದ್ಭುತ ಔಷಧಿ

(Guava Leaf )ಸೀಬೆ ಹಣ್ಣಿನಿಂದ ಹಲವು ಆರೋಗ್ಯಕರ ಪ್ರಯೋಜನವಿದೆ. ಅದರಂತೆ ಸೀಬೆ ಗಿಡದ ಎಲೆಯಿಂದಲೂ ಕೂಡ ಆರೋಗ್ಯಕ್ಕೆ ಹಲವು ಪ್ರಯೋಜನವಿದೆ. ಸೀಬೆ ಗಿಡದ ಎಲೆಗಳಲ್ಲಿ ಪಾಲಿಫಿನಾಲ್, ಕ್ಯಾರೋಟಿನಾಯ್ಡ್, ಫ್ಲೇವನಾಯ್ಡ್ ಗಳೆಂಬ ಪೋಷಕಾಂಶ ಇರುವುದರಿಂದ ಹಲವು ಆರೋಗ್ಯದ ಸಮಸ್ಯೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಕಾರಿಯಾಗಿದೆ. ಸೀಬೆ ಗಿಡದ ಎಲೆಯಿಂದ ಜ್ಯೂಸ್‌ ಮಾಡಿ ಕುಡಿಯುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನವಿದೆ. ಈ ಜ್ಯೂಸ್‌ ಹೇಗೆ ಮಾಡುವುದು ಎಂಬ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

(Guava Leaf )ಬೇಕಾಗುವ ಸಾಮಗ್ರಿಗಳು:
ಸೀಬೆ ಗಿಡದ ಎಲೆ(ಪೇರಲೆ)
ನೆಲ್ಲಿಕಾಯಿ
ಜೇನುತುಪ್ಪ
ಏಲಕ್ಕಿ ಪುಡಿ

ಮಾಡುವ ವಿಧಾನ:
ಮಿಕ್ಸಿ ಜಾರಿನಲ್ಲಿ ನೆಲ್ಲಿಕಾಯಿ ಮತ್ತು ನಾಲ್ಕು ಸೀಬೆ ಹಣ್ಣಿನ ಏಸಳುಗಳನ್ನು ಹಾಕಿ ರುಬ್ಬಿಕೊಳ್ಳಬೇಕು. ನಂತರ ಇದರಿಂದ ರಸವನ್ನು ಶೋಧಿಸಿಕೊಳ್ಳಬೇಕು. ಶೋಧಿಸಿದ ರಸಕ್ಕೆ ಜೇನುತುಪ್ಪ ಮತ್ತು ಏಲಕ್ಕಿ ಪುಡಿಯನ್ನು ಬೆರೆಸಿ ಕುಡಿದರೆ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

ಸೀಬೆ ಗಿಡದ ಎಲೆ:
ಸೀಬೆ ಗಿಡದ ಎಲೆಯಲ್ಲಿ ಹಲವು ಔಷಧೀಯ ಗುಣಗಳಿರುವುದರಿಂದ ನಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಎಲೆಯನ್ನು ಜ್ಯೂಸ್ ಮಾಡಿಕೊಂಡು ಕುಡಿಯುವುದರಿಂದ ಮಧುಮೇಹ, ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿ ಇಟ್ಟು ಕೊಳ್ಳಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಕಾರಿಯಾಗಿದೆ. ಶೀತ ಮತ್ತು ಕೆಮ್ಮನ್ನು ಗುಣ ಪಡಿಸುವಂತಹ ಶಕ್ತಿ ಸೀಬೆಗಿಡದ ಎಲೆಗಿದೆ. ಇದನ್ನು ಪೇಸ್ಟ್‌ ಮಾಡಿಕೊಂಡು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವ ಸಮಸ್ಯೆಯನ್ನು ಕೂಡ ಕಡಿಮೆ ಮಾಡುತ್ತದೆ.

ಇದನ್ನೂ ಓದಿ:Gooseberry Health Tips:ಕಹಿ “ನೆಲ್ಲಿಕಾಯಿಯ” ಆರೋಗ್ಯಕ್ಕೆ ಸಂಜೀವಿನಿ

ಇದನ್ನೂ ಓದಿ:Increase Immunity : ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮನೆಯಲ್ಲಿಯೇ ಇದೆ ಮದ್ದು

ಜೇನುತುಪ್ಪ:
ಪ್ರಾಚೀನ ಆಯುರ್ವೇದದ ಭಾಗವಾಗಿರುವ ಜೇನುತುಪ್ಪದಿಂದ ಹಲವು ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಜೇನುತುಪ್ಪವನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ. ಜೇನುತುಪ್ಪ ಸಕ್ಕರೆಗಿಂತ ಸುರಕ್ಷಿತವಾಗಿರುವುದರಿಂದ ಮಧುಮೇಹ ಇರುವವರು ಇದನ್ನು ಸೇವಿಸಬಹುದು. ಜೇನುತುಪ್ಪವನ್ನು ಸೇವಿಸುವುದರಿಂದ ಅಸ್ತಮಾವನ್ನು ಗುಣ ಪಡಿಸುತ್ತದೆ.

ಇದನ್ನೂ ಓದಿ : Baby Skin Care : ಚಳಿಗಾಲದಲ್ಲಿ ನಿಮ್ಮ ಮಕ್ಕಳ ಕೋಮಲ ತ್ವಚೆಗಾಗಿ ಮನೆಯಲ್ಲಿಯೇ ತಯಾರಿಸಿ ಮಾಯಿಶ್ಚರೈಸರ್‌

Leaf of guava plant is a wonderful medicine for diabetes

Comments are closed.