sudeep and appu cutout : ವಿಕ್ರಾಂತ್​ ರೋಣ ಸಿನಿತಂಡದಿಂದ ಅಪ್ಪು ಫ್ಯಾನ್ಸ್​ಗೆ ಗುಡ್​ ನ್ಯೂಸ್​ : ಸಿನಿಮಾ ರಿಲೀಸ್​ನಂದು ತಲೆ ಎತ್ತಲಿದೆ ಪುನೀತ್​ ಕಟೌಟ್​

sudeep and appu cutout : ಸ್ಯಾಂಡಲ್​ವುಡ್​ನಲ್ಲಿ ಸಧ್ಯ ಸಾಲು ಸಾಲು ಹಿಟ್​ ಸಿನಿಮಾಗಳು ಬರ್ತಾನೇ ಇದೆ. ಗರುಡ ಗಮನ ವೃಷಭ ವಾಹನ, ಕೆಜಿಎಫ್​ 2, ಚಾರ್ಲಿ ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಚಂದನವನದಲ್ಲಿ ಬರ್ತಿರುವ ಸಿನಿಮಾಗಳು ಒಂದಕ್ಕಿಂದ ಒಂದು ಚೆನ್ನಾಗಿ ಇರೋದ್ರಿಂದ ಮುಂಬರುವ ಸಿನಿಮಾಗಳ ಮೇಲೂ ಸಿನಿ ರಸಿಕರಿಗೆ ನಿರೀಕ್ಷೆ ಮೊದಲಿಗಿಂತಲೂ ಹೆಚ್ಚಾಗಿದೆ. ಅದೇ ರೀತಿ ಸದ್ಯ ಬಿಡುಗಡೆಗೆ ಸಜ್ಜಾಗಿರುವ ಕಿಚ್ಚ ಸುದೀಪ್​ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ವಿಕ್ರಾಂತ್​ ರೋಣ ಸಿನಿಮಾ ಕೂಡ ಕನ್ನಡಿಗರಿಗೆ ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ವಿಕ್ರಾಂತ್​ ರೋಣ ಸಿನಿಮಾ ತಂಡ ಅತ್ಯಂತ ವಿಭಿನ್ನ ರೀತಿಯಲ್ಲಿ ಸಿನಿಮಾದ ಪ್ರಚಾರ ಕಾರ್ಯವನ್ನು ಮಾಡುತ್ತಿದೆ .

ವಿಕ್ರಾಂತ್​ ರೋಣ ಸಿನಿಮಾ ತಂಡವು ಸಿನಿಮಾದ ಪ್ರಚಾರ ಕಾರ್ಯದಲ್ಲಿ ಕಿಚ್ಚ ಸುದೀಪ ಅಭಿಮಾನಿಗಳಿಗೆ ಖುಷಿ ನೀಡುವ ಜೊತೆಯಲ್ಲಿ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳಿಗೂ ಖುಷಿ ಸುದ್ದಿ ನೀಡುವ ಕಾರ್ಯ ಮಾಡಿದೆ. ಪವರ್​ ಸ್ಟಾರ್​ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಜೇಮ್ಸ್​ ಚಿತ್ರ ಈಗಾಗಲೇ ತೆರೆ ಕಂಡಿದೆ. ಹೀಗಾಗಿ ಮತ್ತೊಮ್ಮೆ ಪವರ್​ ಸ್ಟಾರ್ ಪುನೀತ್​ ರಾಜ್​ಕುಮಾರ್​ ದೊಡ್ಡ ದೊಡ್ಡ ಕಟೌಟ್​ಗಳನ್ನು ಥಿಯೇಟರ್​ಗಳ ಮುಂದೆ ನೋಡುವ ಭಾಗ್ಯ ಅಪ್ಪು ಅಭಿಮಾನಿಗಳಿಗೆ ಇರಲಿಲ್ಲ. ಆದರೆ ಪುನೀತ್​ ಅಭಿಮಾನಿಗಳ ಈ ದುಃಖಕ್ಕೆ ಪರಿಹಾರ ನೀಡಿರುವ ವಿಕ್ರಾಂತ್​ ರೋಣ ಚಿತ್ರತಂಡ ಸುದೀಪ್​ ಜೊತೆಯಲ್ಲಿ ಪುನೀತ್​ ಕಟೌಟ್​ನ್ನು ಅಳವಡಿಸಲು ಪ್ಲಾನ್​ ರೂಪಿಸಿದೆ.

ಪುನೀತ್​ ರಾಜ್​ಕುಮಾರ್​ ಹಾಗೂ ಸುದೀಪ್​ ಬಾಲ್ಯದಿಂದಲೂ ಸ್ನೇಹಿತರು. ಸ್ನೇಹಿತನ ಅಗಲಿಕೆಯ ನೋವಿನಲ್ಲಿರುವ ನಟ ಕಿಚ್ಚ ಸುದೀಪ ತನ್ನ ಸಿನಿಮಾದಲ್ಲಿ ಪುನೀತ್​ರ ಕಟೌಟ್​ ಅಳವಡಿಸಲು ನಿರ್ಧರಿಸುವ ಮೂಲಕ ಸ್ನೇಹಿತನಿಗೆ ಚಿಕ್ಕ ಅರ್ಪಣೆ ನೀಡಿದ್ದಾರೆ. ವಿಕ್ರಾಂತ್​ ರೋಣ ಸಿನಿಮಾ ಬಿಡುಗಡೆಯ ದಿನದಂದು ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಸುದೀಪ್​ ಹಾಗೂ ಅಪ್ಪು ಜೊತೆಯಾಗಿರುವ ಕಟೌಟ್​​ಗಳು ತಲೆ ಎತ್ತಲಿವೆ.


ರಂಗಿತರಂಗ ಸಿನಿಮಾ ಖ್ಯಾತಿಯ ಅನೂಪ್​ ಭಂಡಾರಿ ನಿರ್ದೇಶನದ ಕಿಚ್ಚ ಸುದೀಪ ಅಭಿನಯದ ವಿಕ್ರಾಂತ್​ ರೋಣ ಸಿನಿಮಾ ಜುಲೈ 28ರಂದು ತೆರೆ ಕಾಣಲಿದೆ. ಹಿಂದಿ, ಮಲಯಾಳಂ, ತಮಿಳು, ತೆಲುಗು, ಅರೆಬಿಕ್​, ಜರ್ಮನಿ, ಉರ್ದು ಹೀಗೆ ಅನೇಕ ಭಾಷೆಗಳಲ್ಲಿ ವಿಶ್ವಾದ್ಯಂತ ಈ ಸಿನಿಮಾ ಬಿಡುಗಡೆಯಾಗಲಿದೆ.

ಇದನ್ನು ಓದಿ : CBSE class 12 Results declared : CBSE 12 ನೇ ತರಗತಿ ಫಲಿತಾಂಶ 2022 ಪ್ರಕಟ : ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ : Ranveer Singh poses naked :ಬಾಲಿವುಡ್ ನಟ ರಣವೀರ್​ ಸಿಂಗ್​ ಬೆತ್ತಲೆ ಫೋಟೋಶೂಟ್​ : ದಂಗಾದ ನೆಟ್ಟಿಗರು

sudeep and appu cutout will be erected during vikrant rona release

Comments are closed.