Akasa Air : ನೂತನ ಆಕಾಸ ಏರ್​ಲೈನ್​​ನಿಂದ ಬುಕ್ಕಿಂಗ್​ ಆರಂಭ : ಆ.7ರಂದು ಮೊದಲ ವಿಮಾನ ಹಾರಾಟ

Akasa Air : ಭಾರತದ ಬಿಗ್​ ಬುಲ್​ ಏಸ್​ ಹೂಡಿಕೆದಾರ ರಾಕೇಶ್​ ಜುಂಜುನ್​ವಾಲಾ ಮಾಲೀಕತ್ವದ ಆಕಾಸ ಏರ್​ಲೈನ್ಸ್​ ಆಗಸ್ಟ್​ ಏಳರಿಂದ ತನ್ನ ವಾಣಿಜ್ಯ ವಿಮಾನ ಕಾರ್ಯಾಚರಣೆಯನ್ನು ಆರಂಭಿಸಲಿದೆ ಎಂದು ವರದಿಯಾಗಿದೆ. ಬೋಯಿಂಗ್​​ 737 ಮ್ಯಾಕ್ಸ್​​ ವಿಮಾನದ ಮೂಲಕ ಮುಂಬೈ – ಅಹಮದಾಬಾದ್​ ಮಾರ್ಗದಲ್ಲಿ ಆಕಾಸ ಏರ್​ ತನ್ನ ಮೊದಲ ಕಾರ್ಯಾಚರಣೆಯನ್ನು ಕೈಗೊಳ್ಳಲಿದೆ ಎನ್ನಲಾಗಿದೆ.


ಆಗಸ್ಟ್​ ಏಳರಿಂದ ಮುಂಬೈ – ಅಹಮದಾಬಾದ್​ ಮಾರ್ಗದಲ್ಲಿ 28 ಸಾಪ್ತಾಹಿಕ ವಿಮಾನಗಳು ಹಾಗೂ ಆಗಸ್ಟ್​ 13ರಿಂದ ಬೆಂಗಳೂರು – ಕೊಚ್ಚಿ ಮಾರ್ಗದಲ್ಲಿ 28 ಸಾಪ್ತಾಹಿಕ ವಿಮಾನಗಳಿಗೆ ಟಿಕೆಟ್​ ಮಾರಾಟಕ್ಕಾಗಿ ಬುಕ್ಕಿಂಗ್​ ತೆರೆಯಲಾಗಿದೆ ಎಂದು ಆಕಾಸ ಏರ್​ ಲೈನ್ ಅಧಿಕೃತ ಮಾಹಿತಿಯನ್ನು ನೀಡಿದೆ.


ಆರಂಭದಲ್ಲಿ ಆಕಾಸ ಏರ್​​ ತನ್ನ ಎರಡು 737 MAX ವಿಮಾನಗಳ ಮೂಲಕ ವಾಣಿಜ್ಯ ಕಾರ್ಯಾಚರಣೆಯನ್ನು ಆರಂಭಿಸಲಿದೆ. ಬೋಯಿಂಗ್​​ ಒಂದು ಮ್ಯಾಕ್ಸ್​ ವಿಮಾನವನ್ನು ಆಕಾಸ ಏರ್​ಲೈನ್​ ಸಂಸ್ಥೆಗೆ ಈಗಾಗಲೇ ವಿತರಣೆ ಮಾಡಿದೆ. ಮತ್ತೊಂದು ವಿಮಾನ ಈ ತಿಂಗಳ ಕೊನೆಯಲ್ಲಿ ಆಕಾಸ ಏರ್​ಲೈನ್​ ಕಂಪನಿ ಕೈ ಸೇರಲಿದೆ.


ಆಕಾಸ ಏರ್​ನ ಸಹ – ಸಂಸ್ಥಾಪಕ ಹಾಗೂ ಮುಖ್ಯ ವಾಣಿಜ್ಯ ಅಧಿಕಾರಿ ಪ್ರವೀಣ್​ ಅಯ್ಯರ್​ ಈ ವಿಚಾರವಾಗಿ ಮಾತನಾಡಿದ್ದು, ನಾವು ಹೊಚ್ಚ ಹೊಸ ಬೋಯಿಂಗ್​ 737 ಮ್ಯಾಕ್ಸ್​ ವಿಮಾನದ ಮೂಲಕ ಆಗಸ್ಟ್​ ಏಳರಿಂದ ಮುಂಬೈ ಮತ್ತು ಅಹಮದಾಬಾದ್​ ನಡುವಿನ ಮಾರ್ಗಗಳಿಗೆ ವಾಣಿಜ್ಯ ವಿಮಾನ ಕಾರ್ಯಾಚರಣೆಯನ್ನು ಆರಂಭಿಸಲಿದ್ದೇವೆ. ನಮ್ಮ ಏರ್​ಲೈನ್​ ನೆಟ್​ವರ್ಕ್​ನ್ನು ವಿಸ್ತರಣೆ ಮಾಡಲು ನಾವು ಹಂತ ಹಂತವಾದ ಯೋಜನೆಗಳನ್ನು ಹೊಂದಿದ್ದೇವೆ. ಹಂತ ಹಂತವಾಗಿ ಹೆಚ್ಚಿನ ನಗರಗಳಿಗೆ ನಮ್ಮ ಸೇವೆಯನ್ನು ವಿಸ್ತರಿಸಲಿದ್ದೇವೆ. ನಮ್ಮ ಮೊದಲ ವರ್ಷದಲ್ಲಿ ಪ್ರತಿ ತಿಂಗಳು ನಮ್ಮ ಫ್ಲೀಟ್​​ಗೆ ಎರಡು ವಿಮಾನಗಳನ್ನು ಸೇರಿಸಲಿದ್ದೇವೆ ಎಂದು ಹೇಳಿದ್ದಾರೆ.


ಜುಲೈ ಏಳರಂದು ಆಕಾಸ ಏರ್​ ವಿಮಾನಯಾನ ಸಂಸ್ಥೆಯು ಡಿಜಿಸಿಎಯಿಂದ ಏರ್​ ಆಪರೇಟರ್​ ಪ್ರಮಾಣಪತ್ರವನ್ನು ಸ್ವೀಕರಿಸಿದ್ದ ಬಗ್ಗೆ ಮಾಹಿತಿಯನ್ನು ನೀಡಿತ್ತು. ಡಿಜಿಸಿಎ ಕಳೆದ ವರ್ಷ ಆಗಸ್ಟ್​ ತಿಂಗಳಲ್ಲಿ ಹಸಿರು ನಿಶಾನೆ ತೋರಿದ್ದರಿಂದ 72 ಮ್ಯಾಕ್ಸ್​ ವಿಮಾನಗಳನ್ನು ಖರೀದಿ ಮಾಡಲು ಕಳೆದ ವರ್ಷ ನವೆಂಬರ್​ 26ರಂದು ಬೋಯಿಂಗ್​ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು.

ಇದನ್ನು ಓದಿ : sudeep and appu cutout : ವಿಕ್ರಾಂತ್​ ರೋಣ ಸಿನಿತಂಡದಿಂದ ಅಪ್ಪು ಫ್ಯಾನ್ಸ್​ಗೆ ಗುಡ್​ ನ್ಯೂಸ್​ : ಸಿನಿಮಾ ರಿಲೀಸ್​ನಂದು ತಲೆ ಎತ್ತಲಿದೆ ಪುನೀತ್​ ಕಟೌಟ್​

ಇದನ್ನೂ ಓದಿ : Dinesh Gunawardena : ಶ್ರೀಲಂಕಾದ ನೂತನ ಪ್ರಧಾನಿಯಾಗಿ ದಿನೇಶ್​ ಗುಣವರ್ದೆನಾ ಪ್ರಮಾಣ ವಚನ

Akasa Air To Start Maiden Commercial Flight On August 7; Opens Ticket Sales

Comments are closed.