India vs New Zeeland : “ಮೊಸಳೆ ಬೈಕ್”ನಲ್ಲಿ ಬಂದು ಟ್ರೋಫಿ ಅನಾವರಣ ಮಾಡಿದ ಪಾಂಡ್ಯ, ವಿಲಿಯಮ್ಸನ್

ವೆಲ್ಲಿಂಗ್ಟನ್ : ಐಸಿಸಿ ಟಿ20 ವಿಶ್ವಕಪ್ ಸೆಮಿಫೈನಲಿಸ್ಟ್’ಗಳಾದ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು (India vs New Zeeland) ಇದೀಗ ಟಿ20 ಸರಣಿಯಲ್ಲಿ ಮುಖಾಮುಖಿಯಾಗಲಿದ್ದು, 3 ಪಂದ್ಯಗಳ ಟಿ20 ಸರಣಿ ಶುಕ್ರವಾರ ವೆಲ್ಲಿಂಗ್ಟನ್’ನಲ್ಲಿ ಆರಂಭವಾಗಲಿದೆ (India vs New Zeeland T20 Series). ಟಿ20 ಸರಣಿಯ ಹಿನ್ನೆಲೆಯಲ್ಲಿ ಭಾರತ ಮತ್ತು ಆತಿಥೇಯ ನ್ಯೂಜಿಲೆಂಡ್ ತಂಡಗಳು ನಾಯಕರು ವೆಲ್ಲಿಂಗ್ಟನ್’ನಲ್ಲಿ ಮೊಸಳೆ ಬೈಕ್’ನಲ್ಲಿ (Crocodile bike) ಬಂದು ಟ್ರೋಫಿ ಅನಾವರಣ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಭಾರತದಲ್ಲಿ ಟಾಂಗಾ ಎಂದು ಕರೆಯಲಾಗುವ ಬೈಕನ್ನು ನ್ಯೂಜಿಲೆಂಡ್’ನಲ್ಲಿ crocodile bike ಎಂದು ಕರೆಯಲಾಗುತ್ತದೆ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡದ ನಾಯಕತ್ವ ವಹಿಸಿರುವ ಹಾರ್ದಿಕ್ ಪಾಂಡ್ಯ (Hardik Pandya) ಮತ್ತು ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ (Kane Williamson) ಮೊಸಳೆ ಬೈಕ್’ನಲ್ಲಿ ಬಂದು ಟಿ20 ಟ್ರೋಫಿಯನ್ನು ಅನಾವರಣ ಮಾಡಿದ್ದಾರೆ. ಈ ಚಿತ್ರಗಳನ್ನು ಬಿಸಿಸಿಐ ತನ್ನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪೋಸ್ಟ್ ಮಾಡಿದೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಶುಕ್ರವಾರ (ನವೆಂಬರ್ 18) ವೆಲ್ಲಿಂಗ್ಟನ್’ನಲ್ಲಿ ನಡೆಯಲಿದೆ. 2ನೇ ಪಂದ್ಯ ಭಾನುವಾರ (ನವೆಂಬರ್ 20) ಮೌಂಟ್ ಮೌಂಗ್’ನ್ಯುಯ್’ನಲ್ಲಿ ನಡೆಯಲಿದ್ರೆ, ಮಂಗಳವಾರ (ನವೆಂಬರ್ 22) ನಡೆಯುವ 3ನೇ ಪಂದ್ಯಕ್ಕೆ ನೇಪಿಯರ್ ಆತಿಥ್ಯ ವಹಿಸಲಿದೆ. ಟಿ20 ಸರಣಿಯ ನಂತರ ಉಭಯ ತಂಡಗಳು 3 ಪಂದ್ಯಗಳ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಲಿದ್ದು, 50 ಓವರ್’ಗಳ ಫಾರ್ಮ್ಯಾಟ್’ನಲ್ಲಿ ಟೀಮ್ ಇಂಡಿಯಾವನ್ನು ಅನುಭವಿ ಎಡಗೈ ಓಪನರ್ ಶಿಖರ್ ಧವನ್ ಮುನ್ನಡೆಸಲಿದ್ದಾರೆ.

ಭಾರತ Vs ನ್ಯೂಜಿಲೆಂಡ್ ಟಿ20 ಸರಣಿಯ ವೇಳಾಪಟ್ಟಿ
ಮೊದಲ ಟಿ20: ನವೆಂಬರ್ 18 (ವೆಲ್ಲಿಂಗ್ಟನ್)
2ನೇ ಟಿ20: ನವೆಂಬರ್ 20 (ಮೌಂಟ್ ಮೌಂಗ್’ನ್ಯುಯ್)
3ನೇ ಟಿ20: ನವೆಂಬರ್ 22 (ನೇಪಿಯರ್)

ಭಾರತ Vs ನ್ಯೂಜಿಲೆಂಡ್ ಏಕದಿನ ಸರಣಿಯ ವೇಳಾಪಟ್ಟಿ
ಮೊದಲ ಏಕದಿನ: ನವೆಂಬರ್ 25 (ಆಕ್ಲೆಂಡ್)
2ನೇ ಏಕದಿನ: ನವೆಂಬರ್ 27 (ಹ್ಯಾಮಿಲ್ಟನ್)
3ನೇ ಏಕದಿನ: ನವೆಂಬರ್ 30 (ಕ್ರೈಸ್ಟ್’ಚರ್ಚ್)

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡ (India Vs New Zeeland T20 series):
ಹಾರ್ದಿಕ್ ಪಾಂಡ್ಯ (ನಾಯಕ), ರಿಷಭ್ ಪಂತ್ (ಉಪನಾಯಕ, ವಿಕೆಟ್ ಕೀಪರ್), ಶುಭಮನ್ ಗಿಲ್, ಇಶಾನ್ ಕಿಶನ್, ದೀಪಕ್ ಹೂಡ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್.

ಇದನ್ನೂ ಓದಿ : RCB releases Karnataka stars : ಇಬ್ಬರೂ ಕನ್ನಡಿಗರನ್ನು ಕೈಬಿಟ್ಟ RCB, ಕರ್ನಾಟಕದ ಆಟಗಾರರ ಮೇಲೆ ಐಪಿಎಲ್ ಫ್ರಾಂಚೈಸಿಗಳ ನಿರಾಸಕ್ತಿ

ಇದನ್ನೂ ಓದಿ : IPL 2023 Retention : ಎಲ್ಲಾ 10 ತಂಡಗಳ ರಿಟೇಲ್, ರಿಲೀಸ್ ಆಟಗಾರರ ಕಂಪ್ಲೀಟ್ ಡೀಟೇಲ್ಸ್

ಇದನ್ನೂ ಓದಿ : Vijay Hazare Trophy: ಕೌಶಿಕ್ , ಕಾವೇರಪ್ಪ ಬೆಂಕಿ ಬೌಲಿಂಗ್; ಕರ್ನಾಟಕಕ್ಕೆ ಹ್ಯಾಟ್ರಿಕ್ ಜಯ

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ (India Vs New Zeeland ODI series):
ಶಿಖರ್ ಧವನ್ (ನಾಯಕ), ರಿಷಭ್ ಪಂತ್ (ಉಪನಾಯಕ, ವಿಕೆಟ್ ಕೀಪರ್), ಶುಭಮನ್ ಗಿಲ್, ದೀಪಕ್ ಹೂಡ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಶಹಬಾಜ್ ಅಹ್ಮದ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ದೀಪಕ್ ಚಹರ್, ಕುಲ್ದೀಪ್ ಸೇನ್, ಉಮ್ರಾನ್ ಮಲಿಕ್.

India vs New Zealand: Pandya, Williamson unveiled the trophy on a “crocodile bike”.

Comments are closed.