Puneeth Rajkumar : ತಂದೆಯ ಸಿನಿಮಾವನ್ನು ರಿಕ್ರಿಯೇಟ್​ ಮಾಡಲು ಬಯಸಿದ್ದರಂತೆ ಪುನೀತ್​ ರಾಜ್​ಕುಮಾರ್​​

Puneeth Rajkumar Naa Ninna Mareyalare : ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ನಮ್ಮನೆಲ್ಲ ಅಗಲಿ ಒಂದು ವರ್ಷ ಪೂರೈಸುತ್ತಾ ಬಂದಿದೆ. ಅಪ್ಪು ಅಗಲಿ ಹಲವು ತಿಂಗಳುಗಳೇ ಕಳೆದರೂ ಸಹ ಅವರ ನೆನಪು ಇನ್ನೂ ಅಜರಾಮರವಾಗಿದೆ. ಪುನೀತ್​ ನಿಧನಕ್ಕೂ ಮುನ್ನ ಕೈಯಲ್ಲಿ ಅನೇಕ ಸಿನಿಮಾಗಳನ್ನು ಹೊಂದಿದ್ದರು. ಆದರೆ ಕರುನಾಡಿಗೆ ದೊಡ್ಡ ಆಘಾತ ಎಂಬಂತೆ ಅಕ್ಟೋಬರ್​ 29ರಂದು ಪುನೀತ್​ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದರು. ಪುನೀತ್​ ನಿಧನದ ಬಳಿಕ ಅವರು ಸಿನಿಮಾ ರಂಗಕ್ಕೆ ನೀಡಬೇಕೆಂದುಕೊಂಡಿದ್ದ ಅನೇಕ ಕೊಡುಗೆಗಳ ಬಗ್ಗೆ ಸ್ನೇಹಿತರ ಬಳಿ ಹಂಚಿಕೊಂಡಿದ್ದ ಅನೇಕ ಮಾಹಿತಿಗಳು ಒಂದೊಂದಾಗಿಯೇ ಹೊರಬರುತ್ತಿದೆ. ಇದೀಗ ತಮ್ಮ ತಂದೆಯ ಸಿನಿಮಾವನ್ನು ಅವರು ರಿಕ್ರಿಯೇಟ್​ ಮಾಡಲು ಹೊರಟಿದ್ದರು ಎಂಬ ವಿಚಾರವೊಂದು ಇದೀಗ ತಿಳಿದು ಬಂದಿದೆ.

ಸ್ವತಃ ಡಾರ್ಲಿಂಗ್​ ಕೃಷ್ಣ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. 1976ರಲ್ಲಿ ತೆರೆ ಕಂಡ ಬ್ಲಾಕ್​ಬಸ್ಟರ್​ ಸಿನಿಮಾ ನಾ ನಿನ್ನ ಮರೆಯಲಾರೆ ನೆನಪಿದ್ದರಬಹುದು. ವಿಜಯ್​ ನಿರ್ದೇಶನ , ಡಾ.ರಾಜ್​ ಕುಮಾರ್​, ಲಕ್ಷ್ಮೀ, ಬಾಲಕೃಷ್ಣ ಹಾಗೂ ಲೀಲಾವತಿ ಅಭಿನಯದ ಈ ಸಿನಿಮಾ ಬ್ಲಾಕ್​ಬಸ್ಟರ್​ ಯಶಸ್ಸನ್ನು ಸಾಧಿಸಿತ್ತು. ಈ ಸಿನಿಮಾ ಬರೋಬ್ಬರಿ 175 ದಿನಗಳ ಯಶಸ್ವಿ ಪ್ರದರ್ಶನವನ್ನು ಕಂಡಿತ್ತು. ಇದೇ ಸಿನಿಮಾವನ್ನು ರಿಕ್ರಿಯೇಟ್​ ಮಾಡಬೇಕೆಂಬುದು ಅಪ್ಪು ಕನಸಾಗಿತ್ತಂತೆ ಲಕ್ಷ್ಮೀ ಪಾತ್ರಕ್ಕೆ ರಮ್ಯಾರನ್ನು ಆಯ್ಕೆ ಕೂಡ ಮಾಡಿದ್ದರಂತೆ. ಈ ಬಗ್ಗೆ ಸ್ವತಃ ನಟ ಡಾರ್ಲಿಂಗ್​ ಕೃಷ್ಣ ಮಾಹಿತಿ ನೀಡಿದ್ದಾರೆ.

ಡಾ.ರಾಜ್​ ಕುಮಾರ್​ ಅಭಿನಯದ ನಾ ನಿನ್ನ ಮರೆಯಲಾರೆ ಸಿನಿಮಾವನ್ನು ರಿಕ್ರಿಯೇಟ್​ ಮಾಡಲು ಪುನೀತ್​ ಯೋಚಿಸಿದ್ದರು. ಈ ಪ್ರಾಜೆಕ್ಟ್​ ಬಗ್ಗೆ ನಾನು ಹಾಗೂ ಪುನೀತ್​ ಮಾತನಾಡಿದ್ದೆವು. ಆದರೆ ಇದೀಗ ನಾವು ಪುನೀತ್​​ರನ್ನು ಮಿಸ್​ ಮಾಡಿಕೊಳ್ತಿದ್ದೇವೆ ಎಂದು ನಟಿ ರಮ್ಯಾ ಟ್ವೀಟ್​ ಮೂಲಕ ಮಾಹಿತಿ ತಿಳಿಸಿದ್ದಾರೆ .

ಕರ್ನಾಟಕ ಅರಣ್ಯ ಲೋಕದ ಬಗ್ಗೆ ಅದ್ಭುತ ಮಾಹಿತಿಯನ್ನು ನೀಡುವ ಪುನೀತ್​ ರಾಜ್​ಕುಮಾರ್​ರ ಕೊನೆಯ ಸಿನಿಮಾದ ಗಂಧದ ಗುಡಿ ಅಕ್ಟೋಬರ್​ 28ರಂದು ತೆರೆ ಕಾಣುತ್ತಿದೆ. ಜೇಮ್ಸ್​ ಸಿನಿಮಾದ ಬಳಿಕ ಅಪ್ಪುವನ್ನು ಬಿಗ್​ಸ್ಕ್ರೀನ್​ನಲ್ಲಿ ನೊಡೋಕೆ ಆಗೋದೇ ಇಲ್ಲವೇನೋ ಎಂದುಕೊಂಡಿದ್ದ ಅಭಿಮಾನಿಗಳಿಗೆ ಅಕ್ಟೋಬರ್​​ 28 ಯಾವಾಗ ಬರುತ್ತೋ ಎಂಬ ತವಕ ಶುರುವಾಗಿದೆ. ಇದೊಂದು ಸಾಕ್ಷ್ಯ ಚಿತ್ರವಾಗಿದ್ದು ಅಶ್ವಿನಿ ಪುನೀತ್​​ ರಾಜ್​ಕುಮಾರ್​​ ನಿರ್ಮಾಣ ಹಾಗೂ ಅಮೋಘವರ್ಷ ನಿರ್ದೇಶನ ಈ ಚಿತ್ರಕ್ಕಿದೆ.

ಇದನ್ನು ಓದಿ : neet result : ನೀಟ್​ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಮನನೊಂದ ವಿದ್ಯಾರ್ಥಿ ನೀರುಪಾಲು

ಇದನ್ನೂ ಓದಿ : Donald Trump : ಪ್ರಧಾನಿ ಮೋದಿಯನ್ನು ಹಾಡಿಹೊಗಳಿದ ಡೊನಾಲ್ಡ್​ ಟ್ರಂಪ್​ : ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆಯೂ ಸುಳಿವು

Puneeth Rajkumar Wanted To Recreate His Father Dr Rajkumar S Film Naa Ninna Mareyalare

Comments are closed.