neet result : ನೀಟ್​ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಮನನೊಂದ ವಿದ್ಯಾರ್ಥಿ ನೀರುಪಾಲು

ಉಡುಪಿ : neet result : ವೈದ್ಯಕೀಯ ಶಿಕ್ಷಣವನ್ನು ಪಡೆಯಬೇಕು ಅಂದರೆ ಅದಕ್ಕೂ ಮುನ್ನ ನೀಟ್​ ಪರೀಕ್ಷೆಯನ್ನು ಬರೆಯವುದು ದೇಶದಲ್ಲಿ ಕಡ್ಡಾಯವಾಗಿದೆ.ಒಳ್ಳೆಯ ಕಾಲೇಜಿನಲ್ಲಿ ಪ್ರವೇಶವನ್ನು ಪಡೆಯಬೇಕು ಅಂದರೆ ನೀಟ್​ನಲ್ಲಿ ಉತ್ತಮ ಪ್ರದರ್ಶನ ತೋರುವುದು ಅತ್ಯವಶ್ಯಕವಾಗಿದೆ.ಅದೇ ರೀತಿ ನಿನ್ನೆ ಕೂಡ ನೀಟ್​​ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ನೀಟ್​ ಪರೀಕ್ಷೆಯ ಅಂಕಗಳು ಕೆಲವರಿಗೆ ಸಮಾಧಾನ ತಂದಿದ್ದರೆ ಇನ್ನೂ ಹಲವು ವಿದ್ಯಾರ್ಥಿಗಳಿಗೆ ನಿರೀಕ್ಷೆ ಮಾಡಿದಷ್ಟು ಅಂಕ ಬರಲಿಲ್ಲ ಎಂಬ ಕಾರಣಕ್ಕೆ ದುಃಖ ಕೂಡ ತಂದಿದೆ. ಇದೇ ರೀತಿ ನೀಟ್​ ಪರೀಕ್ಷೆ ರ್ಯಾಂಕ್​ ಕಡಿಮೆ ಬಂದಿದ್ದಕ್ಕೆ ಮನನೊಂದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾನೆ.


ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ವಿಠಲವಾಡಿ ಎಂಬಲ್ಲಿ ಇಂತಹದ್ದೊಂದು ಘಟನೆ ಸಂಭವಿಸಿದೆ. ವೈದ್ಯಕೀಯ ಶಿಕ್ಷಣವನ್ನು ಪಡೆಯಬೇಕು ಎಂಬ ಹೆಬ್ಬಯಕೆ ಹೊಂದಿದ್ದ ಶಾಯೀಶ್​ ಶೆಟ್ಟಿ (18) ನೀಟ್​ ಪರೀಕ್ಷೆಯನ್ನು ಎದುರಿಸಿದ್ದ. ಆದರೆ ನಿನ್ನೆ ಬಂದ ನೀಟ್​ ಫಲಿತಾಂಶವನ್ನು ಪರಿಶೀಲಿಸಿದ ಸಂದರ್ಭದಲ್ಲಿ ಈತನಿಗೆ ಕಡಿಮೆ ರ್ಯಾಂಕ್​ ಬಂದಿದೆ. ತಾನು ಅಂದುಕೊಂಡ ಕಾಲೇಜಿನಲ್ಲಿ ದಾಖಲಾತಿ ಪಡೆಯಲು ಸಾಧ್ಯವಾಗೋದಿಲ್ಲ ಎಂದು ಶಾಯೀಶ್​ ನೊಂದುಕೊಂಡಿದ್ದ ಎಂದು ಪೋಷಕರು ಮಾಹಿತಿ ನೀಡಿದ್ದಾರೆ.


ವೈದ್ಯಕೀಯ ಶಿಕ್ಷಣದಲ್ಲಿ ತಾನು ಅಂದುಕೊಂಡ ಸಾಧನೆಯನ್ನು ತನ್ನಿಂದ ಮಾಡಲಾಗುತ್ತಿಲ್ಲ ಎಂದು ಮನನೊಂದ ಶಾಯೀಶ್​ ಶೆಟ್ಟಿ ಇಂದು ಮಧ್ಯಾಹ್ನದ ಸುಮಾರಿಗೆ ಅರಾಟೆಯ ಸೇತುವೆ ಬಳಿಗೆ ಬಂದಿದ್ದಾನೆ. ಇಲ್ಲಿಂದ ಈತ ಮೈದುಂಬಿ ಹರಿಯುತ್ತಿದ್ದ ನದಿಗೆ ಹಾರಿದ್ದಾನೆ. ಸ್ಥಳೀಯರೊಬ್ಬರು ಯುವಕ ಈ ರೀತಿ ಮಾಡಿದ್ದನ್ನು ಗಮನಿಸಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಕುಂದಾಪುರ ಠಾಣಾ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಶಾಯೀಶ್​ ಶೆಟ್ಟಿಯ ಪತ್ತೆಗಾಗಿ ಹುಡುಕಾಟ ಶುರುವಿಟ್ಟಿದ್ದಾರೆ.


ಶಾಯೀಶ್​ ಶೆಟ್ಟಿ ಇಂತಹ ದುಡುಕಿನ ನಿರ್ಧಾರ ಕೈಗೊಂಡಿದ್ದು ಪೋಷಕರಿಗೆ ದೊಡ್ಡ ಆಘಾತವನ್ನೇ ನೀಡಿದೆ. ಶಾಯೀಶ್​ ಇಂತಹ ನಿರ್ಧಾರ ಕೈಗೊಳ್ಳುವ ಮುನ್ನ ಜೀವನದಲ್ಲಿ ಇನ್ನೂ ಬಹಳಷ್ಟು ಆಯ್ಕೆಗಳಿವೆ ಎಂದು ಯೋಚನೆ ಮಾಡಿದ್ದರೆ ಇಂದು ತಂದೆ – ತಾಯಿ ಮರುಗುವ ಸ್ಥಿತಿ ಬರುತ್ತಿರಲಿಲ್ಲ. ಸಣ್ಣ ನೋವಿಗಾಗಿ ಶಾಯೀಶ್​ ಶೆಟ್ಟಿ ಬದುಕನ್ನೇ ಅಂತ್ಯಗೊಳಿಸುವ ನಿರ್ಧಾರಕ್ಕೆ ಬಂದಿದ್ದು ನಿಜಕ್ಕೂ ದುರಂತವೇ ಸರಿ .

ಇದನ್ನು ಓದಿ :Congress attack On Ministers : ಕಾಣೆಯಾಗಿದ್ದಾರೆ ಸಚಿವರು, ಬಿಜೆಪಿ ಕಾಲೆಳೆದ ‘ಕೈ’

ಇದನ್ನೂ ಓದಿ : NIA attack in Mangalore :ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ‌ ಹತ್ಯೆಗೆ ಸಂಚು: ಮಂಗಳೂರಿನಲ್ಲಿ ಎನ್.ಐ.ಎ ದಾಳಿ

neet result boy who failed to get expected rank ends life

Comments are closed.