elon musk : ಟ್ವಿಟರ್​ ಖರೀದಿ ನಿರ್ಧಾರಕ್ಕೆ ತಾತ್ಕಾಲಿಕ ತಡೆ ಘೋಷಿಸಿದ ಎಲಾನ್​ ಮಸ್ಕ್​

elon musk : ವಿಶ್ವದ ಅತ್ಯಂತ ಶ್ರೀಮಂತ ಹಾಗೂ ಟೆಸ್ಲಾ ಕಂಪನಿ ಮುಖ್ಯಸ್ಥ ಎಲಾನ್​ ಮಸ್ಕ್​ ಟ್ವಿಟರ್​ ಖರೀದಿ ಮಾಡುತ್ತಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಡಿದೆ. ಸಾಮಾಜಿಕ ಜಾಲತಾಣದ ದೈತ್ಯ ವೇದಿಕೆಯಾದ ಟ್ವಿಟರ್​ನ್ನು 44 ಬಿಲಿಯನ್​ ಡಾಲರ್​ ಒಪ್ಪಂದದ ಮೂಲಕ ಖರೀದಿ ಮಾಡಿದ್ದ ಟೆಸ್ಲಾ ಮುಖ್ಯಸ್ಥ ಎಲಾನ್​ ಮಸ್ಕ್​ ಇದೀಗ ಈ ಒಪ್ಪಂದವನ್ನು ತಾತ್ಕಾಲಿಕವಾಗಿ ತಡೆ ಹಿಡಿದಿದ್ದೇವೆ ಎಂದು ಟ್ವಿಟರ್​ನಲ್ಲಿ ಮಾಹಿತಿ ನೀಡಿದ್ದಾರೆ .


ತನ್ನ ದೈನಂದಿನ ಸಕ್ರಿಯ ಬಳಕೆಗಾರರಲ್ಲಿ ನಕಲಿ ಅಥವಾ ಸ್ಪ್ಯಾಮ್​​ ಖಾತೆಗಳು 5 ಪ್ರತಿಶತಕ್ಕಿಂತ ಕಡಿಮೆಯಿದೆ ಎಂದು ಟ್ವಿಟರ್​​ ವರದಿ ಮಾಡಿದ ಬಳಿಕ ಟ್ವಿಟರ್​ ಖರೀದಿಸುವ ಒಪ್ಪಂದವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಟ್ವಿಟರ್​​ ವರದಿ ಬಳಿಕ ಎಲಾನ್​ ಮಸ್ಕ್​ ಈ ರೀತಿಯಾಗಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ. 44 ಶತಕೋಟಿ ಡಾಲರ್​​ಗೆ ಟ್ವಿಟರ್​ ಖರೀದಿ ಮಾಡುವಲ್ಲಿ ಯಶಸ್ವಿಯಾಗಿದ್ದ ಎಲಾನ್​ ಮಸ್ಕ್ ಈ ಘೋಷಣೆಯು ಚರ್ಚೆಗೆ ಕಾರಣವಾಗಿದೆ.


ಟ್ವಿಟರ್​ ಮೊದಲ ತ್ರೈಮಾಸಿಕದಲ್ಲಿ ದೈನಂದಿನ ಸಕ್ರಿಯ ಬಳಕೆದಾರರಲ್ಲಿ ಅದರ ಹಣಗಳಿಸಬಹುದಾದ 5 ಪ್ರತಿಶತಕ್ಕಿಂತ ಕಡಿಮೆ ಇರುವ ನಕಲಿ ಖಾತೆಗಳನ್ನು ಪ್ರತಿನಿಧಿಸುತ್ತದೆ ಎಂದು ಅಂದಾಜಿಸಲಾಗಿದೆ. ಸಾಕಷ್ಟು ದಿನಗಳ ಹಗ್ಗ ಜಗ್ಗಾಟಗಳ ಬಳಿಕ ಟ್ವಿಟರ್​ ಖರೀದಿಸುವಲ್ಲಿ ಎಲಾನ್​ ಮಸ್ಕ್​ ಯಶಸ್ವಿಯಾಗಿದ್ದರು.

ಇದನ್ನು ಓದಿ : Air Fryer Cleaning: ನೀವು ಏರ್‌ ಫ್ರೈಯರ್ ಸ್ವಚ್ಛಗೊಳಿಸಲು ಕಷ್ಟಪಡುತ್ತಿದ್ದೀರಾ? ಹಾಗಾದರೆ ಈ ಟಿಪ್ಸ್‌ ಅನುಸರಿಸಿ!!

ಇದನ್ನೂ ಓದಿ : MS Dhoni : ಸಿನಿಮಾ ನಿರ್ಮಾಣಕ್ಕೆ ಮುಂದಾದ್ರು ಮಹೇಂದ್ರ ಸಿಂಗ್‌ ಧೋನಿ

elon musk said twitter deal temporarily on hold

Comments are closed.