Guinness record- video viral: 15,730 ಕೆಜಿ ಟ್ರಕ್ ನ್ನು ಹಲ್ಲುಗಳಿಂದ ಎಳೆದು ಗಿನ್ನೀಸ್ ದಾಖಲೆ ಬರೆದ ಈಜಿಪ್ಟ್‌ ವ್ಯಕ್ತಿ: ವಿಡಿಯೋ ವೈರಲ್

(Guinness record- video viral) ದೈಹಿಕ ಶಕ್ತಿಯು ನಮ್ಮ ದೈನಂದಿನ ಜೀವನದಲ್ಲಿಒಂದು ಉತ್ತಮ ಪಾತ್ರವನ್ನು ವಹಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ದೈಹಿಕ ಮತ್ತು ಮಾನಸಿಕ ಶಕ್ತಿಯ ನಡುವೆ ಯಾವಾಗಲೂ ಅಘೋಷಿತ ಸ್ಪರ್ಧೆ ಇರುತ್ತದೆ ಎಂಬ ಮಾತು ಸುಳ್ಳಲ್ಲ. ದೇಹವನ್ನು ಚೆನ್ನಾಗಿ ನೋಡಿಕೊಂಡರೆ ನಮ್ಮ ದೇಹವು ಕೆಲವು ಅದ್ಭುತಗಳನ್ನು ಮಾಡುತ್ತದೆ. ಬಹುಷಃ ಅನೇಕರು ಇಂತಹ ವಿಷಯವನ್ನು ಕನಸಿನಲ್ಲೂ ಎಣಿಸಿಕೊಂಡಿರಲು ಸಾಧ್ಯವಿಲ್ಲ. ಆದರೆ ಯಾರೂ ಎಣಿಸಿಕೊಳ್ಳದಂತಹ ದಾಖಲೆಯನ್ನು ಇಲ್ಲೊಬ್ಬ ವ್ಯಕ್ತಿ ಮಾಡಿದ್ದಾನೆ.

ಹೌದು..ಈಜಿಪ್ಟ್‌ ನ ಈ ಮನುಷ್ಯ ತನ್ನ ಹಲ್ಲುಗಳಿಂದ ಬರೋಬ್ಬರಿ 15, 730 ಕೆಜಿ ಬಿರುವ ವಾಹನವನ್ನು ಎಳೆದು ಯಾರು ನಂಬಲಾಗದಂತಹ ಸಾಧನೆ ಮಾಡಿ ಗಿನ್ನೀಸ್‌ ದಾಖಲೆಯನ್ನು ಬರೆದುಕೊಂಡಿದ್ದಾರೆ. ನಂಬಲಾಗದ ಎಲ್ಲರನ್ನೂ ಬೆರಗುಗೊಳಿಸುವ ಈ ವ್ಯಕ್ತಿಯ ಸಾಧನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ವಿಡಿಯೋ ವೈರಲ್‌ ಜೊತೆಗೆ ಅತ್ಯಂತ ಭಾರವಾದ ವಾಹನವನ್ನು ಬರೀ ಹಲ್ಲಿನಿಂದ ಎಳೆದು ಸಾಧನೆ ಮಾಡಿ ಗಿನ್ನೀಸ್‌ ದಾಖಲೆ ಕೂಡ ಮಾಡಿದ್ದಾರೆ.

ಗಿನ್ನೆಸ್ ವಿಶ್ವ ದಾಖಲೆಗಳ ಪ್ರಕಾರ, ಅಶ್ರಫ್ ಮಹ್ರೂಸ್ ಮೊಹಮ್ಮದ್ ಸುಲಿಮಾನ್ ಅವರು 13 ಜೂನ್ 2021 ರಂದು ಈಜಿಪ್ಟ್‌ನ ಇಸ್ಮಾಯಿಲಿಯಾದಲ್ಲಿ ದಾಖಲೆಯನ್ನು ಮಾಡಿದ್ದಾರೆ. ಈ ವ್ಯಕ್ತಿಯ ವೀಡಿಯೊವನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಹಂಚಿಕೊಂಡಿದೆ. “ಹಲ್ಲುಗಳಿಂದ ಎಳೆದ ಅತ್ಯಂತ ಭಾರವಾದ ರಸ್ತೆ ವಾಹನ: 15,730.0 ಕೆಜಿ (34.678.714 ಪೌಂಡ್) ಅಶ್ರಫ್ ಸುಲಿಮಾನ್ ಅವರಿಂದ” ಎಂದು ವೀಡಿಯೊದ ಶೀರ್ಷಿಕೆಯನ್ನು ನೀಡಲಾಗಿದೆ.

https://www.instagram.com/reel/Cm7WPDVKNeE/?utm_source=ig_embed&ig_rid=7d18db72-e608-403b-a217-eaf13c5ca850

ಎರಡು ದಿನಗಳ ಹಿಂದಷ್ಟೇ ಶೇರ್ ಆಗಿರುವ ಈ ವಿಡಿಯೋ ಇದುವರೆಗೆ 4 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ. ಇನ್ನೂ ಇದಕ್ಕೆ ಕಾಮೆಂಟ್‌ ಗಳ ಸುರಿಮಳೆ ಬರುತ್ತಿದ್ದು, ಓರ್ವ ಇನ್ಸ್ಟಾಗ್ರಾಮ್‌ ಬಳಕೆದಾರರು “ಬ್ರೂಹ್‌ ಅವರ ದಂತವೈದ್ಯರು ಯಾರೆಂದು ನಾನು ಕಂಡುಹಿಡಿಯಬೇಕಾಗಿದೆ” ಎಂದು ಕಾಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ : Viral video-49.1K likes: 2 ಜೇನುಹುಳುಗಳು ಫಾಂಟಾ ಬಾಟಲಿಯ ಮುಚ್ಚಳ ತೆಗೆಯುವ ವಿಡಿಯೋ ವೈರಲ್:‌ ಒಂದೇ ದಿನದಲ್ಲಿ 49.1K ಲೈಕ್ಸ್‌

Guinness record- video viral: Egyptian man who pulled a 15,730 kg truck with his teeth set a Guinness record: video viral

Comments are closed.