Kaavi art revival: ಕಾವಿ ಕಲೆಗೆ ಪುನರುಜ್ಜೀವನ : ಕದಿಕೆ ಟ್ರಸ್ಟ್‌ ಜೊತೆ ಕೈ ಜೋಡಿಸಿದ ವಿಶ್ವ ಕೊಂಕಣಿ ಕೇಂದ್ರ

ಮಂಗಳೂರು: (Kaavi art revival) ದೇವಾಲಯ ರಚನೆಗಳ ಆಧುನಿಕರಣದಿಂದಾಗಿ ಅಪಾಯದ ಸುಳಿಯಲ್ಲಿರುವ ಕಾವಿ ಕಲೆಯನ್ನು ಪುನರುಜ್ಜೀವನಗೊಳಿಸಲು ವಿಶ್ವ ಕೊಂಕಣಿ ಕೇಂದ್ರ ಕದಿಕೆ ಟ್ರಸ್ಟ್‌ ನೊಂದಿಗೆ ಕೈ ಜೋಡಿಸಿದೆ. ಉಡುಪಿ ಸೀರೆಗಳ ಮೇಲೆ ಕಾವಿ ಕಲೆ ವಿನ್ಯಾಸವನ್ನು ರೂಪಿಸಲು ವಿಶ್ವ ಕೊಂಕಣಿ ಕೇಂದ್ರವು ಕದಿಕೆ ಟ್ರಸ್ಟ್‌ ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಸನಾತನ ಸಂಪ್ರದಾಯವನ್ನು ಉಳಿಸಲು ಶ್ರಮಿಸುತ್ತಿದೆ.

ಭಾರತದ ಪಶ್ಚಿಮ ಕರಾವಳಿಯಾದ್ಯಂತ ಕೊಂಕಣಿ ದೇವಾಲಯಗಳಲ್ಲಿ ಕಾವಿ ಕಲೆ(Kaavi art revival)ಯನ್ನು ಸಂರಕ್ಷಿಸಲಾಗಿದ್ದು, ಅಳಿವಿನ ಅಂಚಿನಲ್ಲಿರುವ ಈ ಕಾವಿ ಕಲೆಯನ್ನು ಪುನರುಜ್ಜೀವನಗೊಳಿಸಲು ಕೇಂದ್ರ ಹೆಣಗಾಡುತ್ತಿದೆ. ಸಾಂಪ್ರದಾಯಿಕ ಕೈಮಗ್ಗದ ಸೀರೆಗಳು ಕೂಡ ಅಳಿವಿನ ಅಂಚಿನಲ್ಲಿದ್ದು, ಈ ಸನಾತನ ಸಂಪ್ರದಾಯವನ್ನು ಉಳಿಸಿ ಅದಕ್ಕೆ ಪುನರುಜ್ಜೀವನಗೊಳಿಸಲು ಕದಿಕೆ ಟ್ರಸ್ಟ್‌ ನಿರಂತರವಾಗಿ ಶ್ರಮಿಸಿದೆ. ಈ ಟ್ರಸ್ಟ್‌ ನ ಶ್ರಮಕ್ಕೆ ಇದೀಗ ಇನ್ನೊಂದು ಟ್ರಸ್ಟ್‌ನ ಕೈ ಜೋಡಣೆಯಾಗಿದ್ದು, ಕಾವಿ ಕಲೆಯನ್ನು ಉಡುಪಿಯ ಕೈ ಮಗ್ಗದ ಸೀರೆಗಳಲ್ಲಿ ವಿಲೀನಗೊಳಿಸಿ ಈ ಕಲೆಯನ್ನು ಉಳಿಸುವ ಪ್ರಯತ್ನಕ್ಕೆ ಎರಡು ಟ್ರಸ್ಟ್‌ ಗಳು ಮುಂದಾಗಿವೆ.

ವಿಶ್ವ ಕೊಂಕಣಿ ಕೇಂದ್ರದ ಸಿಇಒ ಗುರುದತ್ತ ಬಂಟ್ವಾಳ್ಕರ್‌ ಅವರು ಇದರ ಕುರಿತಾಗಿ ಮಾಹಿತಿ ನೀಡಿದ್ದು, “ಕೆಂಪು ಆಕ್ಸೈಡ್‌ನೊಂದಿಗೆ ಸುಣ್ಣದ ಮಿಶ್ರಣದ ಈ ಕಲೆ(Kaavi art revival) ಒಂದು ಸುಂದರ ಕಲೆ. ಗೋವಾದ ದೇವಸ್ಥಾನಗಳಲ್ಲಿಯೂ ಕೂಡ ಈ ಸುಂದರ ಕಲೆಗಳು ಕಂಡುಬಂದಿವೆ. ಈ ಸುಂದರ ಕಲೆಯನ್ನು ಕಲಾಕೃತಿಗಳ ಮೂಲಕ ಉಳಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದ್ದು, ಕಾವಿ ಕಲೆಯನ್ನು ಪುನರುಜ್ಜೀವನಗೊಳಿಸುವ ಒಂದು ಬೃಹತ್‌ ಉದ್ದೇಶದಿಂದ ಕದಿಕೆ ಟ್ರಸ್ಟ್‌ ನ ಉಡುಪಿ ಸೀರೆಗಳೊಂದಿಗೆ ನಾವು ಕೈ ಜೋಡಿಸಿದ್ದೇವೆ ” ಎಂದು ಮಾದ್ಯಮಕ್ಕೆ ತಿಳಿಸಿದ್ದು, ಡಾ. ಕೃಷ್ಣಾನಂದ್‌ ಕಾಮತ್‌ ಅವರ ಕಾವಿ ಕಲೆಯ ಬಗ್ಗೆ ಬರೆದಿರುವ ಪುಸ್ತಕವನ್ನು ನೆನಪಿಸಿಕೊಂಡು ದೇವಸ್ಥಾನಗಳಲ್ಲಿ ರಚಿಸಲಾದ ಈ ಕಲೆಯನ್ನು ಉಳಿಸುವ ಪ್ರಯತ್ನದ ಬಗ್ಗೆ ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : District Conference of Journalists -2023: ಸಮಾಜದ ಅಭಿವೃದ್ಧಿಗೆ ಪತ್ರಕರ್ತರ ಕೊಡುಗೆ ಶ್ರೇಷ್ಠವಾದುದು: ಪ್ರಕಾಶ್ ಶೆಟ್ಟಿ ಅಭಿಮತ

ಇನ್ನೂ ಈ ಕಾಮಗಾರಿಯ ಬಗ್ಗೆ ಕದಿಕೆ ಟ್ರಸ್ಟ್‌ ನ ಅಧ್ಯಕ್ಷೆ ಮಮತಾ ರೈ ಮಾತನಾಡಿದ್ದು,” ವಾಸ್ತವವಾಗಿ ಯಾವುದೇ ಉತ್ಪನ್ನಗಳನ್ನು ಪ್ರಾರಂಭಿಸುವ ಮೊದಲು ಹಲವಾರು ಕಾರ್ಯಗಾರಗಳನ್ನು ನಡೆಸಲಾಗುತ್ತದೆ ಮತ್ತು ಕಾಮಗಾರಿಗಳು ಪ್ರಗತಿಯಲ್ಲಿವೆ. ಇನ್ನೂ ಈ ಕಲೆಯನ್ನು ಉಳಿಸುವ ಸಲುವಾಗಿ ಕೆಂಪು ಆಕ್ಸೈಡ್‌ , ಸುಣ್ಣದ ಮಿಶ್ರಣದ ಜೊತೆಗೆ ನೈಸರ್ಗಿಕ ಬಣ್ಣ ಮತ್ತು ಮಂಜಿಷ್ಠ ದಂತಹ ವಸ್ತುಗಳನ್ನು ಉಪಯೋಗಿಸುವ ಕುರಿತಾಗಿ ಚಿಂತನೆಗಳು ನಡೆಯುತ್ತಿವೆ. ಈ ಯೋಜನೆಗಳ ಬಗ್ಗೆ ನೇಕಾರರ ಜೊತೆ ಚರ್ಚೆಯನ್ನು ನಡೆಸಲಾಗಿದ್ದು, ಅವರು ಕೂಡ ಇದರ ಬಗ್ಗೆ ಆತ್ಮವಿಶ್ವಾಸವನ್ನು ಹೊಂದಿದ್ದಾರೆ” ಎಂದು ಹೇಳಿದ್ದಾರೆ.

The World Konkani Center has tied up with the Kadike Trust to design Kavi art designs on Udupi sarees, working hard to save the age-old tradition.

Comments are closed.