Kantara : ಕಾಂತಾರ ಸಿನಿಮಾ ನೆನಪಿಸುತ್ತಿದೆ ಪೆರ್ನೆ ಗ್ರಾಮ : ಅಷ್ಟಕ್ಕೂ ಆ ಗ್ರಾಮದಲ್ಲಿ ಆಗಿದಾದ್ರೂ ಏನು ?

Kantara reminiscent Perne : ಕಾಂತಾರ, ಸದ್ಯ ಎಲ್ಲರ ಬಾಯಲ್ಲೂ ಕೇಳಿಬರುತ್ತಿರುವ ಹೆಸರು. ಕೇವಲ ಒಂದೇ ಒಂದು ಸಿನಿಮಾ ದೈವಾರಾಧನೆಯ ಆಚರಣೆಯನ್ನು ಜಗದಲಕ್ಕೂ ಪಸರಿಸಿದೆ. ರಿಷಬ್ ಶೆಟ್ಟಿ ಅವರ ನಿರ್ದೇಶನ, ನಟನೆಯಲ್ಲಿ ತೆರೆ ಕಂಡಿರುವ ಸಿನಿಮಾ ಸೂಪರ್ ಹಿಟ್ ಆಗಿದೆ. ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿಯೂ ಸಿನಿಮಾ ರಿಲೀಸ್ ಆಗಲು ಸಿದ್ದವಾಗುತ್ತಿದೆ. ಕಾಂತಾರ ನೋಡಿದ ಪ್ರತೀ ವ್ಯಕ್ತಿಯಲ್ಲಿಯೂ ದೈವಾರಾಧನೆಯ ತುಡಿತ ಹೆಚ್ಚುತ್ತಿದೆ. ಕರಾವಳಿಗರ ಆಚರಣೆ, ದೈವಾರಾಧನೆ, ಸಂಪ್ರದಾಯವನ್ನು ಸಿನಿಮಾ ವೀಕ್ಷಿಸಿದ ಮಂದಿ ಕೊಂಡಾಡುತ್ತಿದ್ದಾರೆ. ಆದ್ರೀಗ ಕಾಂತಾರ ಸಿನಿಮಾವನ್ನು ಹೋಲುವ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಪೆರ್ನೆ ಗ್ರಾಮದಲ್ಲಿ ನಡೆದಿದೆ.

(Kantara)ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದಲ್ಲಿ ಸಾಲು ಸಾಲು ದುರಂತಗಳು ನಡೆದಿತ್ತು. ಗ್ಯಾಸ್ ಟ್ಯಾಂಕರ್ ಸ್ಪೋಟಗೊಂಡು ಹತ್ತು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು. ಅಷ್ಟೇ ಅಲ್ಲಾ ಗ್ರಾಮದಲ್ಲಿ ಸಾಕಷ್ಟು ನಾಗರ ಹಾವುಗಳು ಸಾವನ್ನಪ್ಪಿದ್ದವು. ಗ್ರಾಮದಲ್ಲಿ ನಡೆಯುತ್ತಿದ್ದ ಅನಾಹುತಗಳಿಗೆ ಕಾರಣವನ್ನು ಹುಡುಕುತ್ತಾ ಹೊರಟವರಿಗೆ ಅಚ್ಚರಿಯೊಂದು ಕಾದಿತ್ತು. ಗ್ರಾಮದಲ್ಲಿನ ಹಿರಿಯರು ಆರಂಭದಲ್ಲಿ ತಾಂಬೂಲ ಪ್ರಶ್ನೆಯನ್ನು ಇರಿಸಿದ್ದರು. ಈ ವೇಳೆಯಲ್ಲಿ ದೈವದ ಮೂರ್ತಿಗಳು ಪತ್ತೆಯಾಗಿತ್ತು. ನಂತರದಲ್ಲಿ ಅಷ್ಟಮಂಗಲ ಪ್ರಶ್ನೆಯನ್ನಿರಿಸಿದಾಗ ಕಾಡಿನಲ್ಲಿ ಸುಮಾರು ಐನೂರು ವರ್ಷಗಳಷ್ಟು ಹಳೆಯ ದೈವಸ್ಥಾನವೊಂದು ಪತ್ತೆಯಾಗಿತ್ತು. ಗ್ರಾಮದಲ್ಲಿ ನಡೆಯುತ್ತಿರುವ ದುರಂತಗಳಿಗೆ ದೈವಾರಾಧನೆಯನ್ನು ಮರೆತಿರುವುದೇ ಕಾರಣ ಅನ್ನೋದು ದೃಢಪಟ್ಟಿತ್ತು.

ಇದನ್ನೂ ಓದಿ:Malabar Spinach:ಬಸಳೆ ಸೊಪ್ಪಿನಿಂದ ರಕ್ತಹೀನತೆ ಸಮಸ್ಯೆ ನಿವಾರಣೆ

ಇದನ್ನೂ ಓದಿ:Bajaj Pulsar N160 : ಕಾರ್ಕಳ : ಬಜಾಜ್‌ ಪಲ್ಸರ್‌ ಎನ್‌ 160 ಮಾರುಕಟ್ಟೆಗೆ ಬಿಡುಗಡೆ

ನಂತರದಲ್ಲಿ ಗ್ರಾಮಸ್ಥರು ಸೇರಿಕೊಂಡು ದೈವಸ್ಥಾನವನ್ನು ಜೀರ್ಣೋದ್ದಾರ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಈಗಾಗಲೇ ದೈವಸ್ಥಾನದ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಫೆಬ್ರವರಿ ತಿಂಗಳಿನಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ. ಪೆರ್ನೆ ಗ್ರಾಮದಲ್ಲಿ ನಡೆದಿರುವ ಘಟನೆಗೂ ಕಾಂತಾರ ಸಿನಿಮಾಕ್ಕೂ ಹೋಲಿಕೆ ಕಂಡು ಬರುತ್ತಿದ್ದು, ಈ ಕುರಿತು ಕರಾವಳಿ ಭಾಗದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕರಾವಳಿಗರು ಅನಾಧಿ ಕಾಲದಿಂದಲೂ ದೈವಗಳನ್ನು ನಂಬಿಕೊಂಡು ಬಂದಿದ್ದಾರೆ. ಅದ್ರಲ್ಲೂ ಕಾಂತಾರ ಸಿನಿಮಾ ದೈವಗಳ ಕಾರಣೀಕ ಶಕ್ತಿ, ಆಚರಣೆಯ ಕುರಿತು ಬೆಳಕು ಚೆಲ್ಲಿತ್ತು. ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲಿಯೂ ಕರಾವಳಿಗರ ಆಚರಣೆಯ ಬಗ್ಗೆ ಚರ್ಚೆಯಾಗುತ್ತಿದೆ.

ದೈವಾರಾಧನೆಯ ಬಗ್ಗೆ ಚೆನ್ನಾಗಿ ಅರಿತಿರುವ ರಿಷಬ್ ಶೆಟ್ಟಿ ಸಿನಿಮಾವನ್ನು ಅದ್ಬುತವಾಗಿ ಸೃಷ್ಟಿಸಿದ್ದಾರೆ. ಸಿನಿಮಾದ ಮೂಲಕ ಕರಾವಳಿ ಭಾಗದಲ್ಲಿನ ಆಚರಣೆಗಳನ್ನು ಇತರರಿಗೆ ತಿಳಿ ಹೇಳುವ ಕಾರ್ಯವನ್ನು ಮಾಡಿದ್ದಾರೆ. ಪೆರ್ನೆ ಗ್ರಾಮದಲ್ಲಿ ದೈವಸ್ಥಾನ ನಿರ್ಮಾಣ ಕಾರ್ಯ ನಡೆಯುತ್ತಿದ್ದಂತೆಯೆ ದುರಂತಗಳು ನಿಂತೇ ಹೋಗಿವೆ. ಹೀಗಾಗಿ ಪೆರ್ನೆ ಗ್ರಾಮಕ್ಕೂ ಕಾಂತಾರ ಸಿನಿಮಾಕ್ಕೂ ಇದೀಗ ಸಂಬಂಧ ಕಲ್ಪಿಸಲಾಗುತ್ತಿದೆ.

The village of Perne is reminiscent of the movie Kantara

Comments are closed.