14 ವರ್ಷದ ಹಿಂದೂ ಬಾಲಕಿಯ ಅಪಹರಿಸಿ ಇಸ್ಲಾಂಗೆ ಮತಾಂತರ : ಪೋಷಕರ ಜೊತೆ ಕಳುಹಿಸಲು ಕೋರ್ಟ್‌ ನಕಾರ

ಇಸ್ಲಾಮಾಬಾದ್‌ : Hindu girl kidnap: 14 ವರ್ಷದ ಪ್ರಾಯದ ಹಿಂದೂ ಬಾಲಕಿಯೋರ್ವಳನ್ನು ಅಪಹರಿಸಿ ಆಕೆಯನ್ನು ಇಸ್ಲಾಂಗೆ ಬಲವಂತವಾಗಿ ಮತಾಂತರಗೊಳಿಸಲಾಗಿದೆ. ಮುಸ್ಲೀಂ ವ್ಯಕ್ತಿಯನ್ನು ಮದುವೆಯಾಗಿದ್ದ 14 ವರ್ಷದ ಹಿಂದೂ ಬಾಲಕಿಯನ್ನು ಪೋಷಕರ ಜೊತೆಗೆ ಕಳುಹಿಸಲು ಪಾಕಿಸ್ತಾನ ಕೋರ್ಟ್‌ ನಿರಾಕರಿಸಿದೆ.

ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದ ಬೆನಜಿರಾಬಾದ್‌ ಜಿಲ್ಲೆಯ ನಿವಾಸಿಯಾಗಿದ್ದ 14 ವರ್ಷದ ಹಿಂದೂ ಬಾಲಕಿಯನ್ನ ಆಕೆಯ ತಾಯಿಯ ಮುಂದೆಯೇ ಗನ್‌ ತೋರಿಸಿ ಅಪಹರಿಸ ಲಾಗಿತ್ತು. ಈ ಹಿನ್ನೆಲೆಯಲ್ಲಿ ಬಾಲಕಿಯ ತಂದೆ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದರು. ಕಿಡ್ನಾಪ್‌ ಮಾಡಿದ ಯುವತಿಯನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ, ಮದುವೆ ಮಾಡಲಾಗಿತ್ತು. ಈ ಕುರಿತು ವಿಡಿಯೋವೊಂದನ್ನು ಹರಿಬಿಡಲಾಗಿತ್ತು. ಮದುವೆಯಾದ ಐದು ದಿನಗಳ ನಂತರದಲ್ಲಿ ಬಾಲಕಿ ಸಾಮಾಜಿಕ ಜಾಲತಾಣದಲ್ಲಿ ತನ್ನ ಅಳಲು ತೋಡಿಕೊಂಡಿದ್ದಳು.

ನಂತರ ಪೊಲೀಸರು ಬಾಲಕಿಯನ್ನು ಪತ್ತೆ ಹೆಚ್ಚಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆಯಲ್ಲಿ ಬಾಲಕಿ ತಾನು ಪೋಷಕರ ಜೊತೆಗೆ ತೆರಳುವುದಾಗಿ ತಿಳಿಸಿದ್ದಾಳೆ. ಆದೆ ಪಾಕಿಸ್ತಾನದ ಲರ್ಕಾನಾ ಜಿಲ್ಲಾ ನ್ಯಾಯಾಲಯವು ಬಾಲಕಿಯನ್ನು ಪೋಷಕರ ಜೊತೆಗೆ ಕಳುಹಿಸಿಕೊಡಲು ನಿರಾಕರಿಸಿದೆ. ಅಲ್ಲದೇ ಪ್ರಕರಣದ ವಿಚಾರಣಯನ್ನು ಜೂನ್‌ ೧೨ಕ್ಕೆ ಮುಂದೂಡಿಕೆ ಮಾಡಿದೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯವಾಗಿದ್ದು, ಸುಮಾರು 75 ಲಕ್ಷ ಹಿಂದೂಗಳು ಪಾಕಿಸ್ತಾನದಲ್ಲಿ ವಾಸವಾಗಿದ್ದಾರೆ. ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ನಿಂತರವಾಗಿ ದಬ್ಬಾಳಿಕೆ ನಡೆಯುತ್ತಿರುವ ಕುರಿತು ಆಗಾಗ ವರದಿಯಾಗುತ್ತಲೇ ಇದೆ.

ಇದನ್ನೂ ಓದಿ : Me too case : ಮೀ ಟೂ ಕೇಸ್ : ಅರ್ಜುನ್‌ ಸರ್ಜಾ ಲೈಂಗಿಕ ಕಿರುಕುಳದ ಬಗ್ಗೆ ಸಾಕ್ಷಿ ಕೊಡಿ, ನಟಿ ಶ್ರುತಿ ಹರಿಹರನ್‌ಗೆ ಕೋರ್ಟ್‌ ನೋಟಿಸ್‌

ಇದನ್ನೂ ಓದಿ : Hyderabad Murder Case‌ : ಪ್ರೇಯಸಿಯನ್ನು ಕೊಲೆಗೈದು ಚರಂಡಿಗೆ ಎಸೆದ ಅರ್ಚಕ

Hindu girl kidnap conversion Islam marriage in Karachi

Comments are closed.