BREAKING : ಇಂಡೋನೇಷ್ಯಾದಲ್ಲಿ ಭೂಕಂಪ: 20 ಮಂದಿ ಸಾವು, 300 ಮಂದಿಗೆ ಗಾಯ

ಜಕಾರ್ತಾ : ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ (Indonesia Earthquake) ಸಂಭವಿಸಿದೆ. ಭೂಕಂಪದಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿದ್ದು, 300 ಜನರು ಗಾಯಗೊಂಡಿದ್ದಾರೆ. ಸೋಮವಾರ ಇಂಡೋನೇಷ್ಯಾದ ಮುಖ್ಯ ದ್ವೀಪವಾದ ಜಾವಾದಲ್ಲಿ 5.6 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರವು ಪಶ್ಚಿಮ ಜಾವಾ ಪಟ್ಟಣದ ಸಿಯಾಂಜೂರ್ ಬಳಿ ಎಂದು ಗುರುತಿಸಲಾಗಿದೆ. ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ 5.6 ತೀವ್ರತೆಯ ಭೂಕಂಪ ಸಂಭವಿಸಿದ ನಂತರ ಕಟ್ಟಡಗಳು ಹಾನಿಗೆ ಒಳಗಾಗಿವೆ. ಭೂಕಂಪನವು ರಾಜಧಾನಿ ಜಕಾರ್ತಾದವರೆಗೂ ಎತ್ತರದ ಪ್ರದೇಶಗಳನ್ನು ಜರ್ಜರಿತಗೊಳಿಸಿದೆ ಎಂದು ತಿಳಿದು ಬಂದಿದೆ.

ಭೂಕಂಪದಲ್ಲಿ 20 ಮಂದಿ ಸಾವನ್ನಪ್ಪಿರುವುದನ್ನು ಇಂಡೋನೇಷ್ಯಾ ಮಾಧ್ಯಮಗಳು ವರದಿ ಮಾಡಿವೆ. ಇನ್ನು ಗಾಯಗೊಂಡಿರುವ ಕನಿಷ್ಠ 300 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಕಟ್ಟಡಗಳ ಅವಶೇಷಗಳ ಒಳಗೆ ಸಿಲುಕಿಕೊಂಡವರನ್ನು ರಕ್ಷಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಸಿಯಾಂಜೂರ್ ಆಡಳಿತದ ಮುಖ್ಯಸ್ಥ ಹರ್ಮನ್ ಸುಹೆರ್ಮನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಮಾಧ್ಯಮಗಳು ಭೂಕಂಪದ ತೀವ್ರತೆಯ ಕುರಿತು ವರದಿ ಮಾಡಿವೆ. ಸದ್ಯ 5.6 ತೀವ್ರತೆಯ ಭೂಕಂಪ ಸಂಭವಿಸಿರುವುದು ತಿಳಿದು ಬಂದಿದೆ. ಅಲ್ಲದೇ ಸ್ಥಳೀಯ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆಯೂ ಹವಾಮಾನ ಇಲಾಖೆ ಎಚ್ಚರಿಕೆಯನ್ನು ನೀಡಿದೆ.

ಭೂಕಂಪ ಮತ್ತೆ ಸಂಭವಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕಟ್ಟಡ ಹಾಗೂ ಮನೆಗಳಿಂದ ಹೊರಗೆ ಜನರು ಉಳಿದುಕೊಳ್ಳುವಂತೆ ಈಗಾಗಲೇ ಕರೆ ನೀಡಲಾಗಿದೆ. ಭೂಕಂಪ ಸಂಭವಿಸುತ್ತಿದ್ದಂತೆಯೇ ಇಂಡೋನೇಷ್ಯಾದ ರಾಜಧಾನಿ ಜಕಾರ್ತದಲ್ಲಿ ಕಟ್ಟಡಗಳಲ್ಲಿದ್ದವರು ಭಯಭೀತರಾಗಿ ಮನೆಯಿಂದ ಹೊರಬಂದಿದ್ದಾರೆ.

ಇದನ್ನೂ ಓದಿ : Mangaluru blast Shariq arrested: ಅವನೇ ಇವನು: ಶಾರೀಖ್ ಬಗ್ಗೆ ಮಂಗಳೂರು ಪೊಲೀಸರ ಸ್ಪಷ್ಟನೆ

ಇದನ್ನೂ ಓದಿ : Pune Bengaluru ಹೆದ್ದಾರಿಯಲ್ಲಿ ಭೀಕರ ಅಪಘಾತ : 48 ವಾಹನಗಳು ಜಖಂ

BREAKING : Indonesia Earthquake: 20 killed, 300 injured

Comments are closed.