Chemical Free Shampoo:ರಾಸಾಯನಿಕ ಮುಕ್ತ ಶಾಂಪೂ ಮನೆಯಲ್ಲಿಯೇ ತಯಾರಿಸಿಕೊಳ್ಳಿ

(Chemical Free Shampoo)ಅಂಗಡಿಗಳಲ್ಲಿ ಖರೀದಿ ಮಾಡುವಂತಹ ಶಾಂಪೂವಿನಲ್ಲಿ ಅತಿ ಹೆಚ್ಚು ಕೆಮಿಕಲ್‌ ಬಳಸುವುದರಿಂದ ಹಲವು ಕೂದಲಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಅಂಗಡಿಗಳಲ್ಲಿ ಶಾಂಪೂ ಖರೀದಿ ಮಾಡುವ ಬದಲು ಮನೆಯಲ್ಲಿಯೇ ಇದನ್ನು ತಯಾರಿಸಿಕೊಳ್ಳಬಹುದು. ಈ ಶಾಂಪೂ ತಯಾರಿಸಲು ಎನೆಲ್ಲಾ ಬಳಸುತ್ತಾರೆ ಮತ್ತು ಹೇಗೆ ಮಾಡುತ್ತಾರೆ ಎಂಬ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

(Chemical Free Shampoo)ಬೇಕಾಗುವ ಸಾಮಾಗ್ರಿಗಳು:

  • ಸೇಬುಹಣ್ಣಿನ ಸಿಪ್ಪೆ
  • ಕಪ್ಪು ಜೀರಿಗೆ
  • ಮೆಂತೆ
  • ಪಲಾವ್‌ ಎಲೆ
  • ಅಂಟುವಾಳ

ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಅದಕ್ಕೆ ಸೇಬುಹಣ್ಣಿನ ಸಿಪ್ಪೆ, ಕಪ್ಪು ಜೀರಿಗೆ, ಮೆಂತೆ, ಪಲಾವ್‌ ಎಲೆ, ತುಂಡರಿಸಿದ ಅಂಟುವಾಳ ಹಾಕಿ ನೀರನ್ನು ಕಾಯಿಸಿದರೆ ಶಾಂಪೂ ರೆಡಿಯಾಗುತ್ತದೆ. ತಣ್ಣಗಾದ ನಂತರ ಒಂದು ಡಬ್ಬಿಯಲ್ಲಿ ಶೇಖರಿಸಿ ಇಡಬೇಕು. ತಲೆಸ್ನಾನ ಮಾಡುವಾಗ ಈ ರಾಸಾಯನಿಕ ಮುಕ್ತ ಶಾಂಪೂ ಬಳಸಿದರೆ ನಿಮ್ಮ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಸೇಬುಹಣ್ಣಿನ ಸಿಪ್ಪೆ
ಸೇಬುಹಣ್ಣಿನ ಸಿಪ್ಪೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನವಿದೆ. ಸೇಬು ಹಣ್ಣಿನ ಸಪ್ಪೆಯಲ್ಲಿ ಟೀ ಮಾಡಿ ಕುಡಿಯುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ಕಿಯನ್ನು ಹೆಚ್ಚಿಸುತ್ತದೆ. ಮತ್ತು ತೂಕವನ್ನು ಇಳಿಸಿಕೊಳ್ಳಲು ಸಹಕಾರಿಯಾಗಿದೆ.ಬಾಣಲೆಯಲ್ಲಿ ಒಂದು ಲೋಟ ನೀರು, ಸಣ್ಣ ತುಂಡು ದಾಲ್ಚಿನಿ ,ಸೇಬು ಹಣ್ಣಿನ ಸಿಪ್ಪೆ ಹಾಕಿ ಕುದಿಸಿ ನಂತರ ಒಂದು ಲೋಟದಲ್ಲಿ ಸೊಸಿಕೊಂಡು ಕುಡಿಯಿರಿ. ಬೇಕಾದಲ್ಲಿ ಇದಕ್ಕೆ ಜೇನುತುಪ್ಪವನ್ನು ಹಾಕಿಕೊಂಡು ಕುಡಿಯಬೇಕು. ವಾರದಲ್ಲಿ ಎರಡು ಬಾರಿ ಸೇಬುಹಣ್ಣಿನ ಸಿಪ್ಪೆಯಿಂದ ಟೀ ಮಾಡಿ ಕುಡಿಯುವುದರಿಂದ ದೇಹವನ್ನು ಓಳಗಿನಿಂದ ಸ್ವಚ್ಛಗೊಳಿಸುವ ಕಾರ್ಯವನ್ನು ಮಾಡುತ್ತದೆ. ತರಕಾರಿ ಮತ್ತು ಹಣ್ಣಿನ ಸಲಾಡ್‌ ನ ಮೇಲೆ ಸೇಬು ಹಣ್ಣಿನ ಸಿಪ್ಪೆಯನ್ನು ಹಾಕಿಕೊಂಡು ತಿನ್ನುವುದರಿಂದ ಆರೋಗ್ಯವನ್ನು ಕಾಪಾಡುವುದಲ್ಲದೆ, ಚರ್ಮದ ಸಮಸ್ಯೆಯನ್ನು ಗುಣಪಡಿಸಲು ಸಹಕಾರಿಯಾಗಿದೆ.

ಇದನ್ನೂ ಓದಿ:Coffee Powder Face Mask :ಬಿಸಿಲಿಗೆ ಟ್ಯಾನ್‌ ಆಗುವ ಚಿಂತೆಯೇ ? ಕಾಫಿ ಪೌಡರ್‌ ಫೇಸ್‌ ಮಾಸ್ಕ್‌ ಮುಖಕ್ಕೆ ಹಚ್ಚಿ

ಇದನ್ನೂ ಓದಿ:Protein Dosa:ತೂಕ ಇಳಿಸಲು ಆರೋಗ್ಯಕರ ಟೇಸ್ಟಿ ಪ್ರೋಟಿನ್‌ ದೋಸೆ

ಇದನ್ನೂ ಓದಿ:Gooseberry Benefits: ಹುಳಿ–ಸಿಹಿ ರುಚಿ ಹೊಂದಿರುವ ನೆಲ್ಲಿಕಾಯಿಯನ್ನು ಮಧುಮೇಹಿಗಳು ತಿನ್ನಬಹುದಾ…

ಕಪ್ಪು ಜೀರಿಗೆ
ಕಪ್ಪು ಜೀರಿಗೆಯಲ್ಲಿ ಕ್ಯಾಲ್ಸಿಯಂ, ಪೊಟ್ಯಾಶಿಯಂ,ಕಬ್ಬಿಣ, ಮೆಗ್ನೀಷಿಯಂ ಅಂಶಗಳು ಇರುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಮನೆಮದ್ದಾಗಿ ಇದನ್ನು ಬಳಸಲಾಗುತ್ತದೆ. ಇದನ್ನು ಯಾವುದಾದರೂ ರೂಪದಲ್ಲಿ ಸೇವನೆ ಮಾಡುವುದರಿಂದ ಶೀತ, ಕೆಮ್ಮು ಕಡಿಮೆಯಾಗುತ್ತದೆ. ದೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಗುಣಪಡಿಸುತ್ತದೆ. ತೂಕವನ್ನು ಇಳಿಸಿಕೊಳ್ಳಲು ಕೂಡ ಸಹಕಾರಿಯಾಗಿದೆ. ಅಷ್ಟೇ ಅಲ್ಲದೆ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಕಪ್ಪು ಜೀರಿಗೆಯನ್ನು ಸೇವಿಸುವುದರಿಂದ ಕಣ್ಣಿನ ದೃಷ್ಟಿ ಸುಧಾರಣೆ ಆಗುತ್ತದೆ ಮತ್ತು ಕಣ್ಣು ಕೆಂಪಾಗುವುದನ್ನು ಕಡಿಮೆ ಮಾಡುತ್ತದೆ

Make chemical free shampoo at home: how to make Shampoo

Comments are closed.