Yash aka Rocky Bhai : ಕೋಟಿ ಮೌಲ್ಯದ ಪಾನ್​ಮಸಾಲಾ ಆ್ಯಡ್​ ತಿರಸ್ಕರಿಸಿದ ಯಶ್​: ಅಭಿಮಾನಿಗಳ ಆರೋಗ್ಯ ಮುಖ್ಯ ಎಂದ ರಾಕಿ ಭಾಯ್​

Yash aka Rocky Bhai : ಪಾನ್​ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿರುವ ಬಾಲಿವುಡ್​ನ ನಟರೆಲ್ಲ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿರವುದು ಹೊಸ ವಿಚಾರವೇನಲ್ಲ. ಅಜಯ್​ ದೇವಗನ್​, ಶಾರೂಕ್​ ಖಾನ್​, ಅಕ್ಷಯ್​ ಕುಮಾರ್​ ಹೀಗೆ ಪಾನ್​ ಮಸಾಲಾ ಆ್ಯಡ್​ನಲ್ಲಿ ಗುರುತಿಸಿಕೊಂಡ ನಟರೆಲ್ಲರೂ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಿದೆ. ತೀರಾ ಇತ್ತೀಚಿಗೆ ಪಾನ್​ ಮಸಾಲಾ ಜಾಹೀರಾತೊಂದರಲ್ಲಿ ಶಾರೂಕ್​ ಖಾನ್​ ಹಾಗೂ ಅಜಯ್​ ದೇವಗನ್​ ಜೊತೆ ಕಾಣಿಸಿಕೊಂಡಿದ್ದ ನಟ ಅಕ್ಷಯ್​ ಕುಮಾರ್​​ಗೆ ನೆಟ್ಟಿಗರು ಲೆಫ್ಟ್​​ ರೈಟ್​ ತೆಗೆದುಕೊಂಡಿದ್ದಾರೆ. ಅಭಿಮಾನಿಗಳು, ಆಪ್ತರು ಹಾಗೂ ಹಿತೈಷಿಗಳ ಮಾತಿಗೆ ಬೆಲೆ ನೀಡಿದ್ದ ನಟ ಅಕ್ಷಯ್​ ಕುಮಾರ್​ ಬಹುಕೋಟಿ ಮೌಲ್ಯದ ಪಾನ್​ ಮಸಲಾಲಾ ಜಾಹೀರಾತಿನಿಂದ ಹಿಂದೆ ಸರಿಯುವ ನಿರ್ಧಾರವನ್ನು ಸೋಶಿಯಲ್​ ಮೀಡಿಯಾದಲ್ಲಿ ಪ್ರಕಟಿಸಿದ್ದರು. ಈ ಮೂಲಕ ಅಭಿಮಾನಿಗಳ ಬಳಿ ಕ್ಷಂಎ ಕೂಡ ಕೇಳಿದ್ದರು.


ಸ್ಯಾಂಡಲ್​ವುಡ್​ ನಟ ಯಶ್​ ಕೆಜಿಎಫ್​ ಚಾಪ್ಟರ್​ 2 ಸಿನಿಮಾದಿಂದಾಗಿ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಸದ್ಯ ಎಲ್ಲಿ ಕೇಳಿದರೂ ಕೆಜಿಎಫ್​ 2 ಸಿನಿಮಾದ್ದೇ ಮಾತು. ಹೀಗಿರುವಾಗ ಈ ಪಾನ್​ ಮಸಾಲಾ ಕಂಪನಿಯು ನಟ ಯಶ್​ಗೂ ತಮ್ಮ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವಂತೆ ಬಹುಕೋಟಿ ಮೌಲ್ಯದ ಡೀಲ್​ ನೀಡಿತ್ತು ಎಂಬ ಸುದ್ದಿ ಇದೀಗ ಬಹಿರಂಗವಾಗಿದೆ. ಕೋಟಿ ಕೋಟಿ ರೂಪಾಯಿ ಮೌಲ್ಯದ ಭರ್ಜರಿ ಡೀಲ್​ನ್ನು ಪಾನ್​ ಮಸಾಲಾ ಕಂಪನಿಯು ರಾಕಿ ಭಾಯ್​ ಮುಂದಿಟ್ಟಿತ್ತು. ಆದರೆ ನನ್ನ ವೈಯಕ್ತಿಕ ಲಾಭಕ್ಕಾಗಿ ಅಭಿಮಾನಿಗಳನ್ನು ತಪ್ಪು ದಾರಿಗೆ ಎಳೆಯಲಾರೆ ಎಂದು ಹೇಳಿದ ನಟ ಯಶ್​​ ಇಂತಹ ಜಾಹೀರಾತಿನಲ್ಲಿ ನಾನು ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಬಹುಕೋಟಿ ಮೌಲ್ಯದ ಡೀಲ್​ನ್ನು ನಿರಾಕರಿಸಿದ್ದಾರೆ. ನಟ ಯಶ್​ರ ಈ ನಡೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.


ಪಾನ್​ ಮಸಾಲಾದ ಉತ್ಪನ್ನಗಳು ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ. ಪಾನ್​ ಮಸಾಲಾಗಳ ಸೇವನೆಯು ಜನರ ಜೀವವನ್ನೇ ತೆಗೆಯಬಹುದು. ಹೀಗಾಗಿ ಜನರ ಆರೋಗ್ಯದ ಹಿತದೃಷ್ಠಿಯಿಂದ ಬಹುಕೋಟಿ ಮೌಲ್ಯದ ಡೀಲ್​ ಆಗಿದ್ದರೂ ಸಹ ನಟ ಯಶ್​ ವೈಯಕ್ತಿಕ ಲಾಭವನ್ನು ಬದಿಗಿಟ್ಟು ಈ ನಿರ್ಧಾರ ಕೈಗೊಳ್ಳುವ ಮೂಲಕ ಮಾದರಿ ಎನಿಸಿದ್ದಾರೆ ಎಂದು ಟ್ಯಾಲೆಂಟ್​ & ನ್ಯೂ ವೆಂಚರ್​ @ಎಕ್ಸೀಡ್​ ಏಜೆನ್ಸಿ ಮುಖ್ಯಸ್ಥ ಅರ್ಜುನ್​ ಬ್ಯಾನರ್ಜಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಇದನ್ನು ಓದಿ : yash starrer kgf 2 : 3ನೇ ವಾರವೂ ಥಿಯೇಟರ್​​ನಲ್ಲಿ ಕೆಜಿಎಫ್​ 2 ಹವಾ: ಮಕಾಡೆ ಮಲಗಿದ ಸ್ಟಾರ್​ ನಟರ ಸಿನಿಮಾ

ಇದನ್ನೂ ಓದಿ : Sanjana Galrani Baby Bump : ಸಖತ್‌ ವೈರಲ್ ಆದ ಸಂಜನಾ ಬೇಬಿ ಬಂಪ್ ಫೋಟೋ!!

Yash aka Rocky Bhai turns down lucrative deal with paan masala brand after Akshay Kumar’s apology for Vimal ad

Comments are closed.