Kidney for sale : ಅಪ್ಘಾನಿಸ್ತಾನದಲ್ಲಿ ಮಿತಿಮೀರಿದ ಹಸಿವಿನ ಬಿಕ್ಕಟ್ಟು; ಜೀವನೋಪಾಯಕ್ಕಾಗಿ ಕಿಡ್ನಿ ಮಾರಾಟಕ್ಕೆ ಮುಂದಾದ ಜನತೆ..!

ಅಪ್ಘಾನಿಸ್ತಾನದಲ್ಲಿ ಅಮೆರಿಕ ಬೆಂಬಲಿತ ಸರ್ಕಾರ ಪತನಗೊಂಡು ತಾಲಿಬಾನ್​ ಆಡಳಿತ ಶುರುವಾದಾಗಿನಿಂದ ಅಲ್ಲಿನ ಜನರ ಪಾಡು ಹೇಳತೀರದಾಗಿದೆ. ತಾಲಿಬಾನ್​​ ಪಾರುಪತ್ಯದ ಅಡಿಯಲ್ಲಿ ಅಲ್ಲಿನ ಜನತೆ ಎಷ್ಟರ ಮಟ್ಟಿಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಅಂದರೆ ಒಂದೊತ್ತಿನ ಊಟಕ್ಕಾಗಿ ಇನ್ನಿಲ್ಲದ ಕಷ್ಟ ಅನುಭವಿಸುತ್ತಿದ್ದಾರೆ. ಹಿಂದಿ ಅಪ್ಘಾನ್​ ಸರ್ಕಾರದ ಪತನದ ಬಳಿಕ ದೇಶದಲ್ಲಿ ಹೆಚ್ಚುತ್ತಿರುವ ಬಡತನದಿಂದ ಪಾರಾಗಲು ಇಸ್ಲಾಮಿಕ್​ ಎಮಿರೇಟ್​ನ ಜನರು ವಸ್ತುಗಳನ್ನು ಮಾರಾಟ ಮಾಡೋದು ಹಾಗಿರಲಿ ಅಂಗಾಗಳನ್ನೇ ದಾನ ಮಾಡಲು ಮುಂದಾಗಿದ್ದಾರೆ. ಕಾಬೂಲ್​​ನ ಮರವೊಂದಕ್ಕೆ ನೇತು ಹಾಕಲಾದ ‘ಕಿಡ್ನಿ ಮಾರಾಟಕ್ಕಿದೆ’ (Kidney for sale) ಎಂಬ ಬೋರ್ಡ್​ ಇಲ್ಲಿನ ಜನರ ಪರಿಸ್ಥಿತಿ ಯಾವ ಹಂತ ತಲುಪಿದೆ ಎಂಬುದನ್ನು ವಿವರಿಸುವಂತಿದೆ.

ಮಾಡಲು ಕೆಲಸವಿಲ್ಲ, ಕೈಯಲ್ಲಿ ಉದ್ಯೋಗವಿಲ್ಲ, ಉದ್ಯಮಕ್ಕೆ ಬಂಡವಾಳ ಹೂಡಲು ಹಣವಿಲ್ಲ. ಆದರೆ ದೇಶದಲ್ಲಿ ಆಹಾರ ಪದಾರ್ಥ , ಇಂಧನಗಳ ಬೆಲೆ ಗಗನಕ್ಕೇರುತ್ತಲೇ ಇದೆ. ಹೀಗಾಗಿ ಹಣ ಸಂಪಾದನಾಗಿ , ಕುಟುಂಬಸ್ಥರ ಹಸಿವು ನೀಗಿಸಲಿಕ್ಕಾಗಿ ಅಪ್ಘನ್​ ಜನರು ಪರಬಾಡದ ಕಷ್ಟ ಅನುಭವಿಸುತ್ತಿದ್ದಾರೆ.

ಅನೇಕರು ಮನೆಗಳನ್ನು ಮಾರಿದ್ದಾರೆ, ಇನ್ನು ಕೆಲವರು ಮನೆಯ ಪೀಠೋಪಕರಣಗಳನ್ನು , ಎಲೆಕ್ಟ್ರಾನಿಕ್​ ಸಾಮಗ್ರಿಗಳನ್ನು ಅಷ್ಟೇ ಏಕೆ ಮನೆಯ ಹೆಣ್ಣು ಮಕ್ಕಳನ್ನೂ ಇಲ್ಲಿ ಹಣಕ್ಕಾಗಿ ಮಾರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದು ಹೋಗಿ ದೇಹದ ಅಂಗಾಗಳ ಮಾರಾಟಕ್ಕೇ ಇಲ್ಲಿನ ಜನತೆ ಮುಂದಾಗಿದ್ದಾರೆ.(Kidney for sale)

ತಾಲಿಬಾನ್​ ಅಪ್ಘಾನಿಸ್ತಾನದಲ್ಲಿ ಅಧಿಕಾರವನ್ನು ಮರುಸ್ಥಾಪಿಸಿ ಸುಮಾರು ನಾಲ್ಕು ತಿಂಗಳುಗಳೇ ಗತಿಸಿದೆ. ಆದರೆ ಅಫ್ಘನ್​​ನಲ್ಲಿ ಇದೀಗ ಹಸಿವಿನ ಕೂಗು ಹೆಚ್ಚಾಗಿದೆ. ಹಸಿವಿನಿಂದ ಈ ಚಳಿಗಾಲದಲ್ಲಿ ಒಂದು ಮಿಲಿಯನ್​ಗೂ ಅಧಿಕ ಮಕ್ಕಳು ಸಾಯಬಯದು ಎಂಬ ಆಘಾತಕಾರಿ ವರದಿ ಹೊರಬಿದ್ದಿದೆ. ದಶಕಗಳಿಂದ ಅಪೌಷ್ಠಿಕತೆ ಸಮಸ್ಯೆಯನ್ನು ಹೊಂದಿದ್ದ ಈ ಇಸ್ಲಾಂ ರಾಷ್ಟ್ರದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಹಸಿವಿನ ಬಿಕ್ಕಟ್ಟು ಸಹ ಆರಂಭವಾಗಿದೆ.

ಆಟ ಆಡಿದ್ರೆ ದೇಹಪ್ರದರ್ಶನ, ಅಪ್ಘಾನಿಸ್ತಾನ್ ದಲ್ಲಿ ಮಹಿಳೆಯರಿಗೆ ಕ್ರೀಡೆ ನಿಷೇಧ

ಕಾಬೂಲ್: ಅಪ್ಘಾನಿಸ್ತಾನ್ ದಲ್ಲಿ ಸಂಪೂರ್ಣ ಷರಿಯಾ ಕಾನೂನು ಜಾರಿಗೊಳಿಸಿ‌ ಆದೇಶ ಹೊರಡಿಸಿರುವ ತಾಲಿಬಾನಿಗಳು ಮಹಿಳೆಯರಿಗೆ ಕ್ರೀಡೆಯನ್ನು ನಿಷೇಧಿಸಿದ್ದಾರೆ. ಮಾತ್ರವಲ್ಲ ಕ್ರೀಡೆಯಿಂದ ದೇಹಪ್ರದರ್ಶನವಾಗುತ್ತದೆ ಎಂದಿದ್ದಾರೆ. ಅಫ್ಘಾನಿಸ್ತಾನದ ಹೆಸರನ್ನು ಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಪ್ಘಾನಿಸ್ತಾನ್ ಎಂದು ಬದಲಾಯಿಸಿ ಮಧ್ಯಂತರ ಸರ್ಕಾರ ರಚಿಸಿರುವ ತಾಲಿಬಾನಿಗಳು ದೇಶದಾದ್ಯಂತ ಸಂಪೂರ್ಣ ಷರಿಯಾ ಕಾನೂನು ಜಾರಿಗೊಳಿಸಿದ್ದಾರೆ. ಮಹಿಳೆಯರು ಆಟವಾಡುವ ವೇಳೆ ದೇಹಪ್ರದರ್ಶನವಾಗುತ್ತದೆ. ಸಂಪೂರ್ಣ ದೇಹ ಮುಚ್ಚಿ ಕೊಳ್ಳುವಂತೆ ಬಟ್ಟೆ ಧರಿಸಲು ಸಾಧ್ಯವಿಲ್ಲ. ಹೀಗಾಗಿ ಮಹಿಳೆಯರು ಕ್ರೀಡೆಯಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ತಾಲಿಬಾನ್ ಸುಪ್ರೀಂ ಲೀಡರ್ ಮೌಲ್ವಿ ಹೈಬತುಲ್ಲಾ ಅಖುಂಡಜಾದಾ ಹೇಳಿದ್ದಾರೆ.

ಷರಿಯತ್ ಕಾನೂನಿನ ಪ್ರಕಾರ ಅಪ್ಘಾನಿಸ್ತಾನ ಜನರ ಜೀವನವನ್ನು ರೂಪಿಸುತ್ತೇವೆ. ಇದಕ್ಕಾಗಿ ಅಪ್ಘಾನಿಸ್ತಾನ ಜನರು ತಾಲಿಬಾನ್ ಸರ್ಕಾರವನ್ನು ಬೆಂಬಲಿಸಬೇಕೆಂದು ಹೈಬತುಲ್ಲಾ ಹೇಳಿದ್ದಾರೆ. ಇನ್ನು ತಾಲಿಬಾನಿಗಳ ಆಡಳಿತದಲ್ಲಿ ಪಿಎಚ್ಡಿ ಪದವಿಗಳಿಗೆ ಬೆಲೆ ಇಲ್ಲ ಎಂದು ತಾಲಿಬಾನ್ ಶಿಕ್ಷಣ ಸಚಿವರು ಘೋಷಿಸಿದ್ದು, ನೀವೆ ನೋಡಿ ಅಧಿಕಾರ ನಡೆಸುತ್ತಿರುವ ಮುಲ್ಲಾಗಳಿಗೆ, ತಾಲಿಬಾನಿಗಳಿಗೆ ಪಿಎಚ್ಡಿ ಕೋಡು ಇದ್ಯಾ? ಅವರಿಗೆ ಕನಿಷ್ಠ ಹೈಸ್ಕೂಲ್ ಶಿಕ್ಷಣವೂ ಇಲ್ಲ. ಆದರೂ ಉತ್ತಮ ಆಡಳಿತ ನೀಡುತ್ತಿದ್ದಾರೆ. ಹೀಗಾಗಿ ತಾಲಿಬಾನಿಗಳಿಗಿಂತ ಪಿಎಚ್ ಡಿ ಪದವಿ ಶ್ರೇಷ್ಠವಲ್ಲ ಎಂದು ನೂತನ ಶಿಕ್ಷಣ ಮಂತ್ರಿ ಶೇಖ್ ಮೌಲ್ವಿ ನೂರುಲ್ಲಾ ಹೇಳಿದ್ದಾರೆ.

ಇದನ್ನು ಓದಿ : Suicide Machine : ಉಸಿರು ನಿಂತಿದ್ದೇ ಗೊತ್ತಾಗಲ್ಲ, ಬಂತು ಸುಸೈಡ್ ಮೆಶಿನ್: ಭಾರತದಲ್ಲಿ ಬಳಕೆ ಶಿಕ್ಷಾರ್ಹ ಅಪರಾಧ !

ಇದನ್ನೂ ಓದಿ : UAE working hours Change : ವಾರದಲ್ಲಿ 4 ದಿನ ಮಾತ್ರವೇ ಕೆಲಸ : ಕೆಲಸದ ಅವಧಿ ಬದಲಾಯಿಸಿದ ಯುಎಇ


‘Kidney for sale’, reads placard stuck on tree in Kabul

Comments are closed.