Little Sea Otter Video viral: ಕೊಳವನ್ನು ಸ್ವಚ್ಚಗೊಳಿಸಲು ಸಹಾಯ ಮಾಡುತ್ತಿರುವ ಲಿಟಲ್‌ ಸೀ ಓಟರ್‌ ನ ವಿಡಿಯೋ ವೈರಲ್‌

(Little Sea Otter Video viral) ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಒಂದಲ್ಲ ಒಂದು ವಿಡಿಯೋಗಳು ಜನರ ಮನಸ್ಸನ್ನು ತನ್ನತ್ತ ಸೆಳೆಯುತ್ತವೆ. ಪ್ರಾಣಿಗಳಾಗಿರಬಹುದು, ಪಕ್ಷಿಗಳಾಗಿರಬಹುದು ಅಥವಾ ಮನುಷ್ಯರೇ ಆಗಿರಬಹುದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಕೆಲವು ಆಕರ್ಷಕ ದೃಶ್ಯಗಳು ಜನರನ್ನು ಮಂತ್ರಮುಗ್ಧರನ್ನಾಗಿಸಿ ಬಿಡುತ್ತದೆ. ಇಲ್ಲೂ ಅಷ್ಟೇ ಈಗಿನ ಕಾಲದಲ್ಲಿ ಕೆಲಸ ಮಾಡಲು ಉದಾಸೀನತೆ ತೋರುವ ಮಾನವನಿಗೆ ನಾಚಿಕೆಯಾಗುವಂತೆ ಲಿಟಲ್‌ ಸೀ ಓಟರ್‌ ಅಂದರೆ ನೀರು ನಾಯಿ ಕೊಳವನ್ನು ಸ್ವಚ್ಚಗೊಳಿಸಲು ಕ್ಲೀನರ್‌ ಗೆ ಸಹಾಯ ಮಾಡುತ್ತಿರುವ ವಿಡಿಯೋ ಒಂದು ವೈರಲ್‌ ಆಗಿದೆ.

ಮೊಹಕತೆಯಿಂದ ತುಂಬಿರುವ ಈ ವಿಡಿಯೋ (Little Sea Otter Video viral) ನೋಡಿದರೆ ಎಂತವರಿಗೂ ಕೂಡ ಒಂದು ಬಾರಿ ಮಂತ್ರಮುಗ್ದರನ್ನಾಗಿಸಿಬಿಡುತ್ತದೆ. ಈ ವಿಡಿಯೋದಲ್ಲಿ ಇಬ್ಬರು ಕ್ಲೀನರ್‌ ಗಳು ಕೊಳವೆಯ ಸುತ್ತ ಮುತ್ತ ಸ್ವಚ್ಚಗೊಳಿಸುತ್ತಿದ್ದು, ನೀರಿಗೆ ಬಿದ್ದ ಸುರಕ್ಷತಾ ಕೋನ್‌ ಅನ್ನು ನೀರು ನಾಯಿಯೊಂದು ಎತ್ತಿಕೊಂಡು ಹೋಗಿ ಕೊಳದ ದಡದಲ್ಲಿಡುವುದನ್ನು ನೋಡಬಹುದು. ಕೊಳವನ್ನು ಸ್ವಚ್ಚಗೊಳಿಸುವ ವ್ಯಕ್ತಿಗಳಿಗೆ ಈ ನೀರುನಾಯಿಯ ಸಹಾಯ ತೋರುತ್ತಿರುವುದು, ಅದರ ಸಹಾಯಗುಣ ಎಂತಹವರನ್ನು ಕೂಡ ರೋಮಾಂಚನಗೊಳಿಸುವುದರಲ್ಲಿ ಒಂದು ಮಾತಿಲ್ಲ.

ಇತ್ತೀಚಿನ ದಿನಗಳಲ್ಲಿ ಯುವಕರು ಕೆಲಸಗಳನ್ನು ಮಾಡಲು ಹಿಂಜರಿಯುತ್ತಾರೆ. ಕಾಲಡಿಗೆ ಎಲ್ಲವೂ ಇರುವಂತೆ ಅಗತ್ಯತೆಗನ್ನು ಪೂರೈಸಿಕೊಂಡಿದ್ದಾರೆ. ಅಂತವರಿಗೆ ಈ ವಿಡಿಯೋ ಒಂದು ಮಾದರಿಯಂತಲೇ ಹೇಳಬಹುದು. ಎಲ್ಲಾ ಅರಿತಿರುವ ಮಾನವನೇ ಒಂದೊಂದು ಬಾರಿ ಏನು ಅರಿಯದಂತೆ ನಡೆದುಕೊಳ್ಳುತ್ತಾನೆ. ಆದರೆ ಏನು ತಿಳಿಯದ ಪ್ರಾಣಿಗಳು ಒಂದೊಂದು ಬಾರಿ ಮನುಷ್ಯರಿಗಿಂತ ಮೇಲು ಎಂದು ಸಾಬೀತು ಪಡಿಸುತ್ತವೆ.

https://twitter.com/buitengebieden/status/1613224796917202944?ref_src=twsrc%5Etfw

ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಚಿರಪರಿಚಿತರಾಗಿರುವ ಬ್ಯುಟೆಂಗೆಬೀಡೆನ್‌ ಅವರು ಪ್ರತಿಬಾರಿ ಇಂತಹ ಒಂದೊಂದು ಮೋಹಕತೆಯನ್ನು ತೋರ್ಪಡಿಸುವ ವಿಡಿಯೋಗಳನ್ನು ಶೇರ್‌ ಮಾಡುತ್ತಿದ್ದು,”ಲಿಟಲ್‌ ಹೆಲ್ಪರ್‌” ಎಂಬ ಶೀರ್ಷಿಕೆಯಡಿಯಲ್ಲಿ ಈ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ. ಟ್ವಿಟರ್‌ ನಲ್ಲಿ ವಿಡಿಯೋವನ್ನು ಹಂಚಿಕೊಂಡ ಒಂದು ದಿನದ ಒಳಗಾಗಿ ವಿಡಿಯೋ ಸುಮಾರು 5.7 ಮಿಲಿಯನ್‌ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಉತ್ತಮ ಪ್ರತಿಕ್ರಿಯೆಗಳು ಬರುತ್ತಿವೆ. ಇನ್ನೂ ಕೆಲವು ಬಳಕೆದಾರರು, “ಇದು ಮೋಹಕತೆಯಲ್ಲದೇ ಬೇರೇನೂ ಅಲ್ಲ”, “OMG ಬ್ಲೆಸ್ ಇಟ್ಸ್ ಲಿಟಲ್ ಹಾರ್ಟ್”, ಮತ್ತು” ಈ ದಿನಗಳಲ್ಲಿ ಯುವಕರು ಕೆಲಸ ಮಾಡಲು ಬಯಸುವುದಿಲ್ಲ” ಹೀಗೆ ಹಲವಾರು ರೀತಿಯಲ್ಲಿ ಕಾಮೆಂಟ್‌ ಗಳ ಸುರಿಮಳೆ ಸುರಿಯುತ್ತಿದೆ.

ಇದನ್ನೂ ಓದಿ : Humpback whale video viral: ತಾಯಿಯ ಪ್ರವೃತ್ತಿಯನ್ನು ಪ್ರತಿಬಿಂಬಿಸುವ ಸುಂದರ ಚಿತ್ರಣ: ಹಂಪ್‌ಬ್ಯಾಕ್‌ ತಿಮಿಂಗಿಲದ ವಿಡಿಯೋ ವೈರಲ್‌

Little Sea Otter Video viral: The video of Little Sea Otter helping to clean the pond is viral

Comments are closed.