ವೈರಲ್‌ ಆಯ್ತು ಬಿಹಾರ ಜೈಲಿನಲ್ಲಿದ್ದ ಕುಡುಕನ ಭೋಜ್‌ಪುರಿ ಹಾಡು: ಸಂಗೀತ ಕ್ಷೇತ್ರದಿಂದ ಬಾರಿ ರೆಸ್ಪಾನ್ಸ್‌

(Drunk man’s Bhojpuri song) ನಮ್ಮ ನೆಲದ ಮೂಲೆ ಮೂಲೆಗಳಲ್ಲೂ ಪ್ರತಿಭೆಗಳು ತುಂಬಿದ್ದಾರೆ. ಪ್ರತಿಯೊಬ್ಬ ಜೀವಿಯಲ್ಲೂ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ. ಆದರೆ ಕೆಲವರಲ್ಲಿ ಹೊರ ಪ್ರಪಂಚಕ್ಕೆ ಅದನ್ನು ತೋರ್ಪಡಿಸಲು ಸಾಧ್ಯವಾಗುವುದಿಲ್ಲ. ಇದೀಗ ಕುಡುಕನೊಬ್ಬ ಬಿಹಾರ ಜೈಲಿನಲ್ಲಿ ಭೋಜ್‌ ಪುರಿ ಹಾಡನ್ನು ಹಾಡಿರುವ ವಿಡಿಯೋ ವೈರಲ್‌ ಆಗಿದ್ದು, ಒಂದೇ ರಾತ್ರಿಯಲ್ಲಿ ಜನಪ್ರಿಯನಾಗಿದ್ದಾನೆ. ಅಲ್ಲದೇ ಸಂಗೀತ ಕ್ಷೇತ್ರಗಳಲ್ಲಿ ಅನೇಕ ಕೊಡುಗೆಗಳು ಈತನಿಗಾಗಿ ಕಾಯುತ್ತಿವೆ.

ಹೌದು..! ಕಂಗಯ್ಯ ಕುಮಾರ್‌ ಎನ್ನುವಾತನನ್ನುಇತ್ತೀಚೆಗೆ ಮದ್ಯ ಸಂಬಂಧಿತ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಬಂಧಿಸಲಾಯಿತು. ಹೀಗೆ ಬಂಧಿತನಾದ ಕಂಗಯ್ಯ ಕುಮಾರ್‌ ಲಾಕ್‌ ಅಪ್‌ ನಲ್ಲೇ ಭೋಜ್‌ ಪುರಿ ಹಾಡನ್ನು ಯಾವುದೇ ತಪ್ಪಿಲ್ಲದೇ ಹಾಡುವುದು ಪೊಲೀಸರ ಗಮನಕ್ಕೆ ಬಂದಿದೆ. ಲಾಕಪ್‌ ನಲ್ಲಿ “ದರೋಗಾಜಿ ಹೋ… ಸೋಚಿ-ಸೋಚಿ ಜಿಯಾ ಹಮ್ರೋ ಕಹೆ ಘಬ್ರತಾ…” ಎಂಬ ಜನಪ್ರಿಯ ಭೋಜ್‌ಪುರಿ ಹಾಡನ್ನು ಕುಮಾರ್ ಹಾಡಿದ್ದು, ಇದು ಅನೇಕ ಸಂಗೀತ ಪ್ರೇಮಿಗಳ ಗಮನವನ್ನು ಸೆಳೆದಿದೆ.

ಈತನ ಹಾಡಿಗೆ ಬರೀ ಸಂಗೀತ ಪ್ರೇಮಿಗಳಷ್ಟೇ ಅಲ್ಲ ಪೊಲೀಸರು ಕೂಡ ಶ್ಲಾಘಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ವೈರಲ್‌ ಆಗಿರುವ ಈ ವಿಡಿಯೋದಲ್ಲಿನ ಅವರ ಮಧುರ ಧ್ವನಿ ಮತ್ತು ಅವರೆ ಪ್ರತಿಭೆಯನ್ನು ಕಂಡು ಸಂಗೀತ ಕ್ಷೇತ್ರಗಳು ಅನೇಕ ಕೊಡುಗೆಗಳು ಕೂಡ ನೀಡಿವೆ. ಅವರ ವೀಡಿಯೊ ವೈರಲ್ ಆದ ನಂತರ, ನೆಟಿಜನ್‌ಗಳು ಮಾತ್ರವಲ್ಲದೆ ಸಂಗೀತ ಉದ್ಯಮದ ಅನೇಕ ಸೆಲೆಬ್ರಿಟಿಗಳು ಇವರ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ.

ಬಾಲಿವುಡ್ ಗಾಯಕ ಅಂಕಿತ್ ತಿವಾರಿ ಕೂಡ ವೀಡಿಯೊವನ್ನು ಹಂಚಿಕೊಂಡಿದ್ದಲ್ಲದೇ ಈ ವೈರಲ್‌ ಕುಡುಕನಿಗೆ ತಮ್ಮ ಕಂಪನಿಯಲ್ಲೇ ಹಾಡನ್ನು ಹಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಇದಲ್ಲದೇ ರಾತ್ರೋರಾತ್ರಿ ಜನಪ್ರಿಯನಾದ ವ್ಯಕ್ತಿಗೆ ಕಾನೂನು ಸಹಾಯ ಹಾಗೂ ಪುನರ್ವಸತಿ ನೀಡುವುದಾಗಿ ಯುಪಿ ಶಾಸಕರು ಭರವಸೆಯನ್ನು ನೀಡಿದ್ದಾರೆ.

ವರದಿಯ ಪ್ರಕಾರ, ಕುಮಾರ್ ಬಿಹಾರದ ಕೈಮೂರ್ ಜಿಲ್ಲೆಯ ನಿವಾಸಿಯಾಗಿದ್ದು, ಕೆಲಸದ ನಿಮಿತ್ತ ಯುಪಿಗೆ ಹೋಗಿದ್ದನು ಮತ್ತು ಅಲ್ಲಿ ಕುಡಿದಿದ್ದನು. ಬಿಹಾರ ಶುಷ್ಕ ರಾಜ್ಯವಾಗಿರುವುದರಿಂದ ಮದ್ಯ ಸೇವಿಸಿದ ನಂತರ ಜನರನ್ನು ಪ್ರವೇಶಿಸಲು ಅನುಮತಿಸಲಾಗುವುದಿಲ್ಲ ಮತ್ತು ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು. ಈತ ಕುಡಿದು ಬಿಹಾರ ಪ್ರವೇಶಿಸಿದ್ದರಿಂದ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ : Little Sea Otter Video viral: ಕೊಳವನ್ನು ಸ್ವಚ್ಚಗೊಳಿಸಲು ಸಹಾಯ ಮಾಡುತ್ತಿರುವ ಲಿಟಲ್‌ ಸೀ ಓಟರ್‌ ನ ವಿಡಿಯೋ ವೈರಲ್‌

Bihar Jail’s Bhojpuri Song Goes Viral: Response from Music Industry

Comments are closed.