Tulsi Chaura:  ಮನೆಯಲ್ಲಿ ತುಳಸಿ ಗಿಡವನ್ನು ನೆಡುವುದರ ಹಿಂದೆ ಇದೆ ಈ ಪ್ರಯೋಜನ

Tulsi Chaura:  ತುಳಸಿ ಗಿಡವು ಪ್ರತಿಯೊಬ್ಬ ಹಿಂದೂ ಮನೆಯ ಅಂಗಳದಲ್ಲಿ ಇರುತ್ತದೆ. ತುಳಸಿಯನ್ನು ಗಿಡಮೂಲಿಕೆಗಳ ರಾಣಿ ಎಂದು ಕರೆಯಲಾಗುತ್ತದೆ. ಈ ಗಿಡವು ದೈವಿಕವಾಗಿ ಪ್ರಾಮುಖ್ಯತೆಯನ್ನು ಪಡೆದಿರುವ ಜೊತೆಯಲ್ಲಿಯೇ ಹಲವಾರು ವೈದ್ಯಕೀಯ ಪ್ರಯೋಜನಗಳನ್ನು ಹೊಂದಿದೆ. ಹಿಂದೂಗಳು ತುಳಸಿ ಗಿಡವನ್ನು ಪವಿತ್ರವೆಂದು ಪರಿಗಣಿಸಿರುವುದರಿಂದ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯ ಅಂಗಳದಲ್ಲಿ ಕಂಡು ಬರುತ್ತದೆ.ತುಳಸಿಯನ್ನು ಶೀತ, ಜ್ವರ ಹಾಗೂ ಕೆಮ್ಮು ಸೇರಿದಂತೆ ವಿವಿಧ ಕಾಯಿಲೆಗಳಿಗೆ ಔಷಧಿಯಾಗಿ ಬಳಕೆ ಮಾಡಲಾಗುತ್ತದೆ. ವಾಸ್ತುವಿನ ಪ್ರಕಾರ, ಮನೆಯಲ್ಲಿ ತುಳಸಿ ಗಿಡವನ್ನು ಮನೆಯ ಅಂಗಳದಲ್ಲಿ ಇಡುವುದರಿಂದ ಕುಟುಂಬ ಸದಸ್ಯರಲ್ಲಿ ಸಾಮರಸ್ಯ ಹೆಚ್ಚುವುದರ ಜೊತೆಯಲ್ಲಿ ಸಂತೋಷ ಕೂಡ ನೆಲೆಸುತ್ತದೆ ಎಂಬ ನಂಬಿಕೆಯಿದೆ. ಇದರ ಜೊತೆಯಲ್ಲಿ ಆರ್ಥಿಕ ಸಮಸ್ಯೆಗಳು ಸಹ ದೂರಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳಿದೆ.
ಮನೆಯಲ್ಲಿ ತುಳಸಿ ಗಿಡವನ್ನು ನೆಡುವುದರ ಹಿಂದಿರುವ ಲಾಭಗಳು :


ಆರೋಗ್ಯಕರ ಮನೆ : ತುಳಸಿಗಿಡಗಳಿಗೆ ಗಾಳಿಯನ್ನು ಶುದ್ಧೀಕರಿಸುವ ಸಾಮರ್ಥ್ಯವಿದೆ . ತುಳಸಿ ಗಿಡಗಳು ಗಾಳಿಯಿಂದ ವಿಷಕಾರಿ ಅಂಶಗಳು ರಾಸಾಯನಿಕಗಳನ್ನು ಹೀರಿಕೊಳ್ಳುತ್ತದೆ ಎಂದು ನಂಬಲಾಗಿದೆ. ಇದು ಪರಿಸರವನ್ನು ಶುದ್ಧವಾಗಿರುಸುತ್ತದೆ.


ನಕರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ : ತುಳಸಿಯಲ್ಲಿರುವ ಔಷಧೀಯ ಗುಣಗಳ ಹೊರತಾಗಿ ಇದು ಒತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ತುಳಸಿ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಮನೆಯಲ್ಲಿ ಋಣಾತ್ಮಕ ಶಕ್ತಿಯು ಸಂಪೂರ್ಣವಾಗಿ ನಾಶವಾಗಿ ಧನಾತ್ಮಕ ಶಕ್ತಿ ನೆಲೆಸುತ್ತದೆ. ಮನೆಯೊಳಗೆ ನಡೆಯವ ದುರ್ಘಟನೆಗಳನ್ನು ತಡೆಯುತ್ತದೆ.

ಸಮೃದ್ಧಿ: ತುಳಸಿ ಗಿಡವು ಮನೆಗೆ ಅದೃಷ್ಟವನ್ನು ತರುತ್ತದೆ ಮತ್ತು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡುತ್ತದೆ. ತುಳಸಿ ಗಿಡವನ್ನು ಹೊಂದಿರುವುದು ಕುಟುಂಬದ ಆರ್ಥಿಕ ಪರಿಸ್ಥಿತಿಗೆ ಪ್ರಯೋಜನಕಾರಿಯಾಗಿದೆ.
ಕುಟುಂಬವನ್ನು ರಕ್ಷಿಸುತ್ತದೆ: ಮನೆಯಲ್ಲಿ ತುಳಸಿ ಸಸ್ಯವನ್ನು ನೆಡುವುದರಿಂದ ಕುಟುಂಬದ ರಕ್ಷಣೆಗೆ ಪ್ರಯೋಜನಕಾರಿಯಾಗಿದೆ ಏಕೆಂದರೆ ಅದು ದುಷ್ಟ ಕಣ್ಣುಗಳು ಮತ್ತು ಇತರ ರೀತಿಯ ಮಾಟಮಂತ್ರಗಳಿಂದ ಅವರನ್ನು ರಕ್ಷಿಸುತ್ತದೆ.

ಇದನ್ನು ಓದಿ : Vastu Tips: ಮನೆಯಲ್ಲಿ ಈ ವಸ್ತುಗಳನ್ನು ಇರಿಸಿದರೆ ಇರಲಿದೆ ಲಕ್ಷ್ಮೀ ದೇವಿಯ ಕೃಪೆ

ಇದನ್ನೂ ಓದಿ : wife life is tragic :ಕಪ್ಪಗಿದ್ದೀಯಾ ಎಂದು ಪತ್ನಿಯನ್ನು ದೂರಿದ ಪತಿ : ಸ್ಯಾನಿಟೈಸರ್​​ ಸುರಿದುಕೊಂಡು ಪತ್ನಿ ಸೂಸೈಡ್​

Tulsi Chaura: Where to Keep At Home As Per Vastu and Maximum Benefits

Comments are closed.