Maldives fire disaster : ಮಾಲ್ಡೀವ್ಸ್‌ನ ಮಾಲಿಯಲ್ಲಿ ಬೆಂಕಿ ಅವಘಡ ; 9 ಭಾರತೀಯರು ಸೇರಿ ಹತ್ತು ಮಂದಿ ಸಾವು

ಮಾಲಿ : (Maldives fire disaster) ಗ್ಯಾರೇಜ್‌ವೊಂದರಲ್ಲಿ ಬೆಂಕಿ ಹೊತ್ತಿಕೊಂಡಿದ್ದು , ಅದೇ ಕಟ್ಟಡದಲ್ಲಿನ ಮೇಲಿನ ವಸತಿ ಗೃಹಕ್ಕೆ ಬೆಂಕಿ ಆವರಿಸಿಕೊಂಡ ಪರಿಣಾಮ 9 ಮಂದಿ ಭಾರತೀಯರು ಸೇರಿ ಹತ್ತು ಮಂದಿ ಸಾವನ್ನಪ್ಪಿರುವ ಘಟನೆ ಮಾಲ್ಡೀವ್ಸ್ ರಾಜಧಾನಿ ಮಾಲೆಯಲ್ಲಿ ಗುರುವಾರ ಮುಂಜಾನೆ ನಡೆದಿದೆ .

ವಾಹನ ರಿಪೇರಿ ಗ್ಯಾರೇಜ್‌ ನಲ್ಲಿ ಬೆಂಕಿ(Maldives fire disaster) ಕಾಣಿಸಿಕೊಂಡಿದ್ದು , ನಂತರ ಅದೇ ಕಟ್ಟಡದ ಮೇಲಿನ ವಿದೇಶಿ ಕಾರ್ಮಿಕರ ವಸತಿಗೃಹಕ್ಕೆ ಕೂಡ ಬೆಂಕಿ ಆವರಿಸಿಕೊಂಡಿದೆ . ಅಗ್ನಿ ಸಂಭವಿಸಿದ ವೇಳೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂಧಿಗಳು ದಾವಿಸಿದ್ದು, ಬೆಂಕಿ ನಂದಿಸುವ ಕಾರ್ಯವನ್ನು ನಡೆಸಿದ್ದಾರೆ . ವಸತಿ ಗೃಹದಲ್ಲಿನ ಜನರನ್ನು ರಕ್ಷಿಸುವ ಕಾರ್ಯಾಚರಣೆ ನಡೆಸಿದ ವೇಳೆಯಲ್ಲಿ ಹತ್ತು ಶವಗಳನ್ನು ಹೊರತೆಗೆದಿರುವುದಾಗಿ ಸಿಬ್ಬಂಧಿಗಳು ತಿಳಿಸಿದ್ದಾರೆ . ಇನ್ನೂ ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದು , ಅವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

“ಮಾಲೆಯ ಬೆಂಕಿ ಅವಘಡದಲ್ಲಿ, ಸ್ಥಳಾಂತರಗೊಂಡ ಮತ್ತು ಹಾನಿಗೊಳಗಾದವರಿಗೆ ಮಾಫನ್ನು ಕ್ರೀಡಾಂಗಣದಲ್ಲಿ ಎನ್.ಡಿ.ಎಂ.ಎ ಸ್ಥಳಾಂತರ ಕೆಂದ್ರವನ್ನು ಸ್ಥಾಪಿಸಿದ್ದು , ಪರಿಹಾರ ನೆರವು ಮತ್ತು ಬೆಂಬಲವನ್ನು ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ.” ಎಂದು ಮಾಲ್ಡೀವ್ಸ್‌ ನ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಗುರುವಾರ ಬೆಳಿಗ್ಗೆ ಟ್ವೀಟ್‌ ನಲ್ಲಿ ಹೇಳಿದೆ . ಆದರೆ , ಟ್ವೀಟ್‌ ನಲ್ಲಿ ಪ್ರಾಣಹಾನಿಗಳ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ

ಇದನ್ನೂ ಓದಿ : Nirav Modi: ನೀರವ್ ಮೋದಿ ಮೇಲ್ಮನವಿ ಅರ್ಜಿ ವಜಾ; ಭಾರತಕ್ಕೆ ಹಸ್ತಾಂತರಿಸುವಂತೆ ಬ್ರಿಟನ್ ಕೋರ್ಟ್ ಆದೇಶ

ಇದನ್ನೂ ಓದಿ : Aruna Miller : ಮೇರಿಲ್ಯಾಂಡ್‌ನ ಲೆಫ್ಟಿನೆಂಟ್‌ ಗವರ್ನರ್‌ ಹುದ್ದೆ ಅಲಂಕರಿಸಿದ ಅರುಣಾ ಮಿಲ್ಲರ್‌ ಯಾರು?

ವಾಹನ ರಿಪೇರಿ ಗ್ಯಾರೇಜ್‌ನಿಂದ ಉಂಟಾದ ಬೆಂಕಿ ಅವಘಡದಲ್ಲಿ ಹಾನಿಯಾದ ಕಟ್ಟಡದ ಮೇಲಿನ ಮಹಡಿಯಿಂದ 10 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಬೆಂಕಿಯನ್ನು ನಂದಿಸಲು ಸತತ ನಾಲ್ಕು ಗಂಟೆಗಳ ಕಾಲ ತೆಗೆದುಕೊಂಡಿದ್ದೇವೆ ಎಂದು ಅಗ್ನಿಶಾಮಕ ಸೇವೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ .

ಇದನ್ನೂ ಓದಿ : Deadly virus: ಅಂದು ಕೊರೋನಾ.. ಈ ಬಾರಿ ಮತ್ತಷ್ಟು ಡೇಂಜರಸ್ ವೈರಸ್; ರಾವಲ್ಪಿಂಡಿಯಲ್ಲಿ ಕತ್ತಿ ಮಸೆಯುತ್ತಿವೆಯಂತೆ ಪಾಕ್, ಚೀನಾ ರಾಷ್ಟ್ರಗಳು

ಬೆಂಕಿ ಅನಾಹುತದಲ್ಲಿ ಮೃತಪಟ್ಟವರಲ್ಲಿ ಒಂಬತ್ತು ಮಂದಿ ಭಾರತೀಯರು ಮತ್ತು ಬಾಂಗ್ಲಾದೇಶದ ಒಬ್ಬ ಪ್ರಜೆಯೂ ಸೇರಿದ್ದಾರೆ ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಬೆಂಕಿ ಅವಘಡ ಪ್ರಕರಣದ ಕುರಿತು ತನಿಖೆಯನ್ನು ನಡೆಸಲಾಗುತ್ತಿದ್ದು, ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

(Maldives fire disaster) Ten people including 9 Indians died as a result of a fire that broke out in a garage and the upper residential house in the same building took place early on Thursday morning in Male, the capital of Maldives.

Comments are closed.