India Vs England Semifinal: ಟಿ20 ವಿಶ್ವಕಪ್ ಸೆಮಿಫೈನಲ್: ಭಾರತ ವಿರುದ್ಧ ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ

ಅಡಿಲೇಡ್: ಟಿ20 ವಿಶ್ವಕಪ್ (T20 World Cup 2022) ಟೂರ್ನಿಯ 2ನೇ ಸೆಮಿಫೈನಲ್ (India Vs England Semifinal)ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಸೆಮಿಫೈನಲ್-2ಗೆ ಅಡಿಲೇಡ್ ಓವಲ್ ಮೈದಾನ ಆತಿಥ್ಯ ವಹಿಸಿದ್ದು, ಜಿಂಬಾಬ್ವೆ ವಿರುದ್ಧ ಅಂತಿಮ ಲೀಗ್ ಪಂದ್ಯದಲ್ಲಿ ಆಡಿದ ತಂಡವನ್ನೇ ಟೀಮ್ ಇಂಡಿಯಾ ಕಣಕ್ಕಿಳಿಸಿದೆ. ಹೀಗಾಗಿ ವಿಕೆಟ್ ಕೀಪರ್ ರಿಷಭ್ ಪಂತ್ ಅವರೇ ಸೆಮಫೈನಲ್ ಪಂದ್ಯದಲ್ಲಿ ಆಡುತ್ತಿದ್ದಾರೆ.

ಮತ್ತೊಂದೆಡೆ ಇಂಗ್ಲೆಂಡ್ ತಂಡ ಆಡುವ ಬಳಗದಲ್ಲಿ ಎರಡು ಬದಲಾವಣೆ ಮಾಡಿದ್ದು, ಗಾಯದ ಕಾರಣ ಟಾಪ್ ಆರ್ಡರ್ ಬ್ಯಾಟ್ಸ್’ಮನ್ ಡೇವಿಡ್ ಮಲಾನ್ ಮತ್ತು ವೇಗಿ ಮಾರ್ಕ್ ವುಡ್ ಸೆಮಿಫೈನಲ್’ನಿಂದ ಹೊರಗುಳಿದಿದ್ದಾರೆ. ಇವರ ಬದಲು ಫಿಲ್ ಸಾಲ್ಟ್ ಮತ್ತು ಕ್ರಿಸ್ ಜೋರ್ಡನ್ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಸಮರದಲ್ಲಿ ಗೆದ್ದ ತಂಡ ಭಾನುವಾರ ಮೆಲ್ಬೋರ್ನ್’ನಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

India Vs England Semifinal: ಎರಡೂ ತಂಡಗಳು

ಭಾರತದ ಪ್ಲೇಯಿಂಗ್ XI (India Playing XI)

  1. ರೋಹಿತ್ ಶರ್ಮಾ (ನಾಯಕ), 2. ಕೆ.ಎಲ್ ರಾಹುಲ್, 3. ವಿರಾಟ್ ಕೊಹ್ಲಿ, 4. ಸೂರ್ಯಕುಮಾರ್ ಯಾದವ್, 5. ಹಾರ್ದಿಕ್ ಪಾಂಡ್ಯ, 6. ರಿಷಭ್ ಪಂತ್ (ವಿಕೆಟ್ ಕೀಪರ್), 7. ರವಿಚಂದ್ರನ್ ಅಶ್ವಿನ್, 8. ಅಕ್ಷರ್ ಪಟೇಲ್, 9. ಭುವನೇಶ್ವರ್ ಕುಮಾರ್, 10. ಮೊಹಮ್ಮದ್ ಶಮಿ, 11. ಅರ್ಷದೀಪ್ ಸಿಂಗ್.

ಇಂಗ್ಲೆಂಡ್ ಪ್ಲೇಯಿಂಗ್ XI (England Playing XI)

  1. ಜೋಸ್ ಬಟ್ಲರ್ (ನಾಯಕ), 2. ಅಲೆಕ್ಸ್ ಹೇಲ್ಸ್, 3. ಮೊಯೀನ್ ಅಲಿ, 4. ಬೆನ್ ಸ್ಟೋಕ್ಸ್, 5. ಲಿಯಾಮ್ ಲಿವಿಂಗ್’ಸ್ಟನ್, 6. ಹ್ಯಾರಿ ಬ್ರೂಕ್, 7. ಸ್ಯಾಮ್ ಕರನ್, 8. ಕ್ರಿಸ್ ಜೋರ್ಡನ್, 9. ಕ್ರಿಸ್ ವೋಕ್ಸ್, 10. ಆದಿಲ್ ರಶೀದ್, 8. ಫಿಲ್ ಸಾಲ್ಟ್

ಇದನ್ನೂ ಓದಿ : PAK vs NZ T20 Semi-Final: ಟಿ20 ವಿಶ್ವಕಪ್ ಫೈನಲ್’ಗೆ ಪಾಕಿಸ್ತಾನ ಲಗ್ಗೆ, ಭಾನುವಾರ ನಡೆಯುತ್ತಾ ಭಾರತ Vs ಪಾಕ್ ಫೈನಲ್ ?

ಇದನ್ನೂ ಓದಿ : Dinesh Karthik or Rishabh Pant : ಟಿ20 ವಿಶ್ವಕಪ್ ಸೆಮಿಫೈನಲ್‌ಗೆ ದಿನೇಶ್ ಕಾರ್ತಿಕ್ ಅಥವಾ ರಿಷಬ್ ಪಂತ್: ಎಬಿ ಡಿವಿಲಿಯರ್ಸ್ ಹೇಳಿದ್ದೇನು ?

India Vs England Semifinal : T20 World Cup Semi-Final England win the toss and opt for fielding against India

Comments are closed.