Karachi blast : ಕರಾಚಿಯಲ್ಲಿ ಭಾರೀ ಸ್ಫೋಟ : 13 ಸಾವು, 12 ಮಂದಿ ಗಂಭೀರ

ನವದೆಹಲಿ : ಕರಾಚಿಯ (Karachi blast) ಶೇರ್ಷಾದ ಪರಚಾ ಚೌಕ್‌ ಪ್ರದೇಶದಲ್ಲಿನ ಗ್ಯಾಸ್‌ ಪೈಪ್‌ಲೈನಲ್ಲಿ ಸ್ಪೋಟ ಸಂಭವಿಸಿದೆ. ಘಟನೆಯಲ್ಲಿ 13 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಕನಿಷ್ಠ 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಜಿಯೋ ನ್ಯೂಸ್‌ ವರದಿ ಮಾಡಿದೆ. ಗ್ಯಾಸ್‌ ಪೈಪ್‌ಲೈನ್‌ ಸ್ಪೋಟದಿಂದಾಗಿಯೇ ಈ ದುರ್ಘಟನೆ ಸಂಭವಿಸಿದೆ.

ಬಾರೀ ಸ್ಪೋಟದಿಂದಾಗಿ ಖಾಸಗಿ ಕಟ್ಟಡ ಹಾಗೂ ಅದರ ಪಕ್ಕದಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಹಾನಿಯಾಗಿದೆ. ದುರ್ಘಟನೆಯಲ್ಲಿ ಇದುವರೆಗೆ ಒಟ್ಟು 13 ಮಂದಿ ಸಾವನ್ನಪ್ಪಿದ್ದು, ಸಾವಿನ ಪ್ರಮಾಣ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ಗಾಯಾಗಳುಗಳನ್ನು ಶಹೀದ್ ಮೊಹ್ತರ್ಮಾ ಬೆನಜೀರ್ ಭುಟ್ಟೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದುವರೆಗೆ ಒಟ್ಟು 12 ಮಂದಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ.ಸಬೀರ್‌ ಮೆಮನ್‌ ಹೇಳಿದ್ದಾರೆ.

ಪಿಟಿಐ ಎಂಎನ್ಎ ಅಲಂಗೀರ್ ಖಾನ್ ಅವರ ತಂದೆ ಸ್ಫೋಟದಲ್ಲಿ ಸಾವನ್ನಪ್ಪಿದವರಲ್ಲಿ ಸೇರಿದ್ದಾರೆ ಎಂದು ಪಿಟಿಐ-ಕರಾಚಿ ಅಧ್ಯಕ್ಷ ಎಂಪಿಎ ಖುರ್ರಂ ಶೇರ್ ಜಮಾನ್ ಹೇಳಿದ್ದಾರೆ. ಅಲ್ಲದೇ ಗಾಯಗೊಂಡವರ ಪೈಕಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಘಟನಾ ಸ್ಥಳಕ್ಕೆ ಯಂತ್ರಗಳನ್ನು ತರಿಸಿಕೊಂಡು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸ್ಥಳದಲ್ಲಿ ಬಾಂಬ್ ನಿಷ್ಕ್ರಿಯ ಘಟಕ (ಬಿಡಿಯು) ಪರಿಶೀಲನೆ ನಡೆಸುತ್ತಿದೆ. ಪೊಲೀಸರು ಮತ್ತು ರೇಂಜರ್ಸ್ ಅಧಿಕಾರಿಗಳು ಪ್ರದೇಶವನ್ನು ಸುತ್ತುವರೆದಿದ್ದಾರೆ.

ಘಟನಾ ಸ್ಥಳದ ಪಕ್ಕದಲ್ಲಿ ಬ್ಯಾಂಕ್‌ ಇದ್ದು, ಶನಿವಾರ ಆಗಿರುವ ಕಾರಣ ಇಂದು ಒಂಬತ್ತು ಉದ್ಯೋಗಿಗಳು ಮಾತ್ರ ಕರ್ತವ್ಯಕ್ಕೆ ವರದಿ ಮಾಡುತ್ತಿದ್ದಾರೆ. ಘಟನೆ ನಡೆಯುತ್ತಲೇ ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ರಕ್ಷಣಾ ಕಾರ್ಯವನ್ನು ನಡೆಸಲಾಗಿದೆ. ಇನ್ನು ಬ್ಯಾಂಕ್‌ ಸದ್ಯದಲ್ಲಿಯೇ ಹೊಸ ಸ್ಥಳಕ್ಕೆ ಶಿಫ್ಟ್‌ ಆಗುತ್ತಿತ್ತು. ಆದರೆ ಅದರ ನಡುವಲ್ಲೇ ಈ ದುರ್ಘಟನೆ ಸಂಭವಿಸಿದೆ. ಇನ್ನು ಅವಶೇಷಗಳ ಅಡಿಯಲ್ಲಿ ಯಾರಾದ್ರೂ ಸಿಲುಕಿದ್ದಾರೆಯೇ ಅನ್ನುವ ಕುರಿತು ಅಧಿಕಾರಿಗಳು ಪರಿಶೀಲನೆಯನ್ನು ನಡೆಸುತ್ತಿದ್ದಾರೆ.

ಸಿಂಧ್ ಮುಖ್ಯಮಂತ್ರಿ ಸೈಯದ್ ಮುರಾದ್ ಅಲಿ ಶಾ ಅವರು ಕರಾಚಿಯ ಕಮಿಷನರ್‌ಗೆ ಘಟನೆಯ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಪೊಲೀಸರು ಈಗಾಗಲೇ ತನಿಖೆಯನ್ನು ಆರಂಭಿಸಿದ್ದಾರೆ. ಗಾಯಾಳುಗಳಿಗೆ ಕೂಡಲೇ ಸಿವಿಲ್ ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಆರೋಗ್ಯ ಕಾರ್ಯದರ್ಶಿಗೆ ಸಿಎಂ ಶಾ ಸೂಚನೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ : ಭಾರತದಲ್ಲಿ ನಿತ್ಯವೂ 14 ಲಕ್ಷ ಓಮಿಕ್ರಾನ್ ಪ್ರಕರಣ : ಎಚ್ಚರಿಕೆ ಕೊಟ್ಟ ಕೇಂದ್ರ ಸರಕಾರ

ಇದನ್ನೂ ಓದಿ : ವಾರದಲ್ಲಿ 4 ದಿನ ಮಾತ್ರವೇ ಕೆಲಸ : ಕೆಲಸದ ಅವಧಿ ಬದಲಾಯಿಸಿದ ಯುಎಇ

( Gas Blast 13 killed, at least 12 injured in Pakistan Karachi blast )

Comments are closed.