Queen Elizabeth funeral : ಬ್ರಿಟನ್ ರಾಣಿ ಯುಗಾಂತ್ಯ

ಲಂಡನ್: Queen Elizabeth funeral ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅವರ ಯುಗಾಂತ್ಯವಾಗಿದೆ. ಏಳು ದಶಕಗಳಿಗೂ ಹೆಚ್ಚು ಕಾಲ ಬ್ರಿಟನ್​ ರಾಣಿಯಾಗಿದ್ದ 2ನೇ ಎಲಿಜಬೆತ್​​ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳು ಸೋಮವಾರ ಪೂರ್ಣಗೊಂಡಿವೆ. ರಾಜಮನೆತನದ ಸಂಪ್ರದಾಯ ಹಾಗೂ ಸರ್ಕಾರಿ ಗೌರವಗಳೊಂದಿಗೆ ವೆಸ್ಟ್​​​​ಮಿನಿಸ್ಟರ್​ ಅಬೆಯಲ್ಲಿ ಅಂತ್ಯಕ್ರಿಯೆ ನೆರವೇರಿದೆ.

ಲಂಡನ್‌ನಲ್ಲಿರುವ 700 ವರ್ಷಗಳಿಗೂ ಪುರಾತನವಾದ ವೆಸ್ಟ್‌ ಮಿನಿಸ್ಟರ್ ಅಬ್ಬೆ ಚರ್ಚ್‌ನ ಅವರಣದಲ್ಲಿ ನಡೆದ ಅಂತಿಮ ಕಾರ್ಯಕ್ಕೆ ಇಂಗ್ಲೆಂಡ್ ಜನತೆ, ಜಗತ್ತಿನೆಲ್ಲೆಡೆಯ ಗಣ್ಯರು ಸಾಕ್ಷಿಯಾದರು. ಸೇಂಟ್​ ಜಾರ್ಜ್​ ಚಾಪಲ್​​ನಲ್ಲಿ ರಾಣಿಯ ಪತಿ ರಾಜ ಫಿಲಿಪ್​ ಅವ​​ರ ಅಂತ್ಯಕ್ರಿಯೆ ನಡೆಸಿದ ಸ್ಥಳದ ಪಕ್ಕದಲ್ಲೇ ಎಲಿಜಬೆತ್​​ ಅವರ ಪಾರ್ಥಿವ ಶರೀರವನ್ನು ಸಮಾಧಿ ಮಾಡಲಾಯಿತು. ಈ ಸಂದರ್ಭದಲ್ಲಿ ಇಂಗ್ಲೆಂಡ್​ ರಾಷ್ಟ್ರಗೀತೆ ನುಡಿಸಲಾಯಿತು. ಗೌರವಾರ್ಥವಾಗಿ ದೇಶಾದ್ಯಂತ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಗಿದೆ.

ಸುಮಾರು 70 ವರ್ಷಗಳ ಕಾಲ ಬ್ರಿಟನ್​ ರಾಣಿಯಾಗಿದ್ದ 96 ವರ್ಷದ 2ನೇ ಎಲಿಜಬೆತ್​​ ಅವರಿಗೆ ಬ್ರಿಟನ್​ ಪ್ರಜೆಗಳು ಗೌರವ ನಮನ ಸಲ್ಲಿಸಿದರು. ಅಮೆರಿಕ ಅಧ್ಯಕ್ಷ ಜೋ ಬೈಡನ್, ಫ್ರೆಂಚ್ ಅಧ್ಯಕ್ಷ ಇಮ್ಯಾನುವೆಲ್ ಮೆಕ್ರಾನ್, ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಸೇರಿದಂತೆ ವಿವಿಧ ದೇಶದ 500ಕ್ಕೂ ಅಧಿಕ ಪ್ರಮುಖ ನಾಯಕರು ಮೌನಾಚರಣೆಯಲ್ಲಿ ಪಾಲ್ಗೊಂಡರು. ಬಳಿಕ ರಾಷ್ಟ್ರಗೀತೆ ಯೊಂದಿಗೆ ರಾಣಿಗೆ ಅಂತಿಮ ವಿದಾಯ ಹೇಳಲಾಯಿತು. ವಿಸ್ಟನ್ ಚರ್ಚಿಲ್ 1965 ರಲ್ಲಿ ನಿಧನರಾದ ನಂತರ ಬ್ರಿಟನ್ ನಲ್ಲಿ ನಡೆದ ರಾಜಮನೆತದವರ ಮೊದಲ ಅಂತ್ಯಕ್ರಿಯೆ ಇದಾಗಿದೆ.

ಸೋಮವಾರ ಬೆಳಗ್ಗೆ ಅಂತ್ಯಕ್ರಿಯೆಯ ವಿಧಿವಿಧಾನಗಳು ಆರಂಭಗೊಂಡಿದ್ದವು. ಸರ್ಕಾರಿ ಗೌರವದೊಂದಿಗೆ ಭಾರತೀಯ ಕಾಲಮಾನ ರಾತ್ರಿ 12 ಸುಮಾರಿಗೆ ಅಂತ್ಯಕ್ರಿಯೆ ನಡೆಯಿತು. ಈ ವಿಧಿವಿಧಾನಗಳನ್ನ ಸುಮಾರು 125 ಸಿನಿಮಾ ಮಂದಿರ, ಹಲವು ಚರ್ಚ್​​ಗಳಲ್ಲಿ ನೇರ ಮಾಡಲಾಗಿತ್ತು. ಗೌರವ ಸಲ್ಲಿಸುವ ಕಾರ್ಯಕ್ರಮದಲ್ಲಿ 4 ಸಾವಿರ ಸೇನಾ ಯೋಧರು ಭಾಗಿಯಾಗಿದ್ದರು.

ನಾಲ್ಕನೇಯ ಕಿಂಗ್ ಜಾರ್ಜ್ ಸ್ಮಾರಕ, ತಾಯಿ ರಾಣಿ ಎಲಿಜಬೆತ್  ಮತ್ತು ಆಕೆಯ ಹಿರಿಯ ಸಹೋದರಿ ಸಮಾಧಿ ಬಳಿ 2ನೇ ಎಲಿಜಬೆತ್ ರಾಣಿಯ ಪಾರ್ಥಿವ ಶರೀರವನ್ನು ಸಮಾಧಿ ಮಾಡಲಾಯಿತು. ಸ್ಕಾಟ್ ಲ್ಯಾಂಡ್ ನ ಬಾಲ್ಮೋರಲ್ ಕಾಸ್ಟಲ್ ನಲ್ಲಿ ಸೆಪ್ಟೆಂಬರ್ 8 ರಂದು ರಾಣಿ ಎಲಿಜಬೆತ್ 11 ನಿಧನರಾಗಿದ್ದರು.

ಇದನ್ನೂ ಓದಿ : Queen Elizabeth : ರಹಸ್ಯ ಪತ್ರವನ್ನು ಬರೆದಿಟ್ಟಿದ್ದರು ಎಲೆಜಬೆತ್​ : ಪತ್ರದಲ್ಲೇನಿದೆ ಎಂದು ತಿಳಿಯಲು ಕಾಯಬೇಕು ಇನ್ನೂ 63 ವರ್ಷ

ಇದನ್ನೂ ಓದಿ : Joe Biden:ಜೋ ಬೈಡನ್‌ ಸರಕಾರದಲ್ಲಿ130ಕ್ಕೂ ಅಧಿಕ ಪ್ರಮುಖ ಹುದ್ದೆಗಳಲ್ಲಿ ಭಾರತೀಯರು

Queen Elizabeth funeral Queen put to rest with Philip, her parents in Windsor chapel

Comments are closed.