Chief Election Commissioner: ರಾಜಕೀಯ ಪಕ್ಷಗಳಿಗೆ ಬೇಕಾ ಬಿಟ್ಟಿ ಫಂಡ್ ಮಾಡೋ ಹಾಗಿಲ್ಲ

ನವದೆಹಲಿ: Chief Election Commissioner ರಾಜಕೀಯ ಪಕ್ಷಗಳಿಗೆ ನಗದು ರೂಪದ ದೇಣಿಗೆಯನ್ನು ಮಿತಿಗೊಳಿಸುವಂತೆ ಕಾನೂನು ಸಚಿವಾಲಯಕ್ಕೆ ಮುಖ್ಯ ಚುನಾವಣಾ ಆಯುಕ್ತ  ರಾಜೀವ್ ಕುಮಾರ್ ಅವರು ಪತ್ರ ಬರೆದಿದ್ದಾರೆ.

ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರಿಗೆ ಪತ್ರ ಬರೆದಿರುವ ಮುಖ್ಯ ಚುನಾವಣಾ ಆಯುಕ್ತ  ರಾಜೀವ್ ಕುಮಾರ್ ಅವರು, ನಗದು ದೇಣಿಗೆಯನ್ನು ಶೇಕಡಾ 20 ಅಥವಾ 20 ಕೋಟಿ ಇದ್ರಲ್ಲಿ ಯಾವುದು ಕಡಿಮೆಯೋ ಅಷ್ಟಕ್ಕೆ ಮಿತಿಗೊಳಿಸಲು ಪ್ರಸ್ತಾಪಿಸಿದ್ದಾರೆಂದು ಮೂಲಗಳು ತಿಳಿಸಿವೆ. ಅಲ್ಲದೇ, ಚುನಾವಣಾ ದೇಣಿಗೆಯನ್ನ ಕಪ್ಪುಹಣದಿಂದ ಮುಕ್ತಗೊಳಿಸಲು ಅನಾಮಧೇಯರು ನೀಡುವ ದೇಣಿಗೆಯನ್ನು 20,000 ರೂ.ನಿಂದ 2,000 ರೂ.ಗೆ ಇಳಿಸಲು ಚುನಾವಣಾ ಆಯೋಗ ಪ್ರಸ್ತಾಪಿಸಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇನ್ನೊಂದೆಡೆ ಮುಖ್ಯ ಚುನಾವಣಾ ಆಯುಕ್ತರು ತಾವು ಬರೆದ ಪತ್ರದಲ್ಲಿ ಜನಪ್ರತಿನಿಧಿಗಳ ಕಾಯಿದೆಗೆ ಹಲವಾರು ತಿದ್ದುಪಡಿಗಳನ್ನು ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ. ಈ ಪ್ರಸ್ತಾಪದ ಪ್ರಕಾರ, ರಾಜಕೀಯ ಪಕ್ಷಗಳು 2,000 ರೂಪಾಯಿಗಿಂತ ಕಡಿಮೆ ದೇಣಿಗೆಯನ್ನು ಸ್ವೀಕರಿಸಿದರೆ, ಆ ಬಗ್ಗೆ ವರದಿ ಮಾಡುವ ಅಗತ್ಯವಿಲ್ಲ. ಪ್ರಸ್ತುತ ನಿಯಮಗಳ ಪ್ರಕಾರ, ರಾಜಕೀಯ ಪಕ್ಷಗಳು ಸ್ವೀಕರಿಸಿರುವ 20,000 ರೂಪಾಯಿಗಿಂತ ಹೆಚ್ಚಿನ ಎಲ್ಲಾ ದೇಣಿಗೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವ ಕಾಂಟ್ರಿಬ್ಯೂಷನ್‌ ರಿಪೋರ್ಟ್‌ ಮೂಲಕ ಬಹಿರಂಗಪಡಿಸಬೇಕು. ಆದರೆ. ಅದಕ್ಕಿಂತ ಕಡಿಮೆ ಮೊತ್ತದ ದೇಣಿಗೆ ಬಂದಿದ್ದರೆ, ಅದರ ಬಗ್ಗೆ ವರದಿ ಮಾಡಬೇಕೆಂದು ಇರಲಿಲ್ಲ. ಈಗ ಇದಕ್ಕೆ ಮಿತಿ ಹೇರುವ ಸಮಯ ಸನ್ನಿಹಿತವಾಗಿದೆ.

ಕೇಂದ್ರ ಚುನಾವಣಾ ಸಮಿತಿಯು ಇತ್ತೀಚೆಗೆ ಚಾಲ್ತಿಯಲ್ಲಿ ಇಲ್ಲದಿರುವ 284 ನೋಂದಾಯಿತ ಗುರುತಿಸದ ರಾಜಕೀಯ ಪಕ್ಷಗಳನ್ನು ಪಟ್ಟಿಯಿಂದ ತೆಗೆದುಹಾಕಿತು. ಇವುಗಳಲ್ಲಿ 253ಕ್ಕೂ ಹೆಚ್ಚು ಪಕ್ಷಗಳು ನಿಷ್ಕ್ರಿಯವಾಗಿವೆ ಎಂದು ಘೋಷಿಸಲಾಗಿದ್ದು, ಶಿಸ್ತು ಕ್ರಮವನ್ನು ಜಾರಿಗೊಳಿಸಲಾಗಿತ್ತು. ಇದೇ ತಿಂಗಳ ಆರಂಭದಲ್ಲಿ ಆದಾಯ ತೆರಿಗೆ ಇಲಾಖೆಯು ಕೆಲವು ನೋಂದಾಯಿತ ಗುರುತಿಸದ ರಾಜಕೀಯ ಪಕ್ಷಗಳು ಮತ್ತು ಅವರ ಸಂಶಯಾಸ್ಪದ ಹಣಕಾಸು ವಹಿವಾಟುಗಳ ವಿರುದ್ಧ ತೆರಿಗೆ ವಂಚನೆ ತನಿಖೆಯ ಭಾಗವಾಗಿ ಅನೇಕ ರಾಜ್ಯಗಳಲ್ಲಿ ದಾಳಿಗಳನ್ನು ನಡೆಸಿತ್ತು.

ಇನ್ನೊಂದೆಡೆ, ಚುನಾವಣಾ ಉದ್ದೇಶಕ್ಕಾಗಿ ಪ್ರತಿ ಅಭ್ಯರ್ಥಿಯು ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ತೆರೆಯುವಂತೆ ಚುನಾವಣಾ ಸಂಸ್ಥೆ ಶಿಫಾರಸು ಮಾಡಿದೆ ಎಂದು ಈ ಬಗ್ಗೆ ಬಲ್ಲ ಮೂಲಗಳು ತಿಳಿಸಿವೆ. “ಒಬ್ಬ ಅಭ್ಯರ್ಥಿಯು ಮೊದಲು ಶಾಸಕರಾಗಿ ಸ್ಪರ್ಧಿಸಿ ನಂತರ ಸಂಸದರಾಗಿ ಸ್ಪರ್ಧಿಸಲು ನಿರ್ಧರಿಸಿದರೆ, ಪ್ರತಿ ಚುನಾವಣೆಗೆ ಎರಡು ಪ್ರತ್ಯೇಕ ಖಾತೆಗಳನ್ನು ತೆರೆಯಬೇಕಾಗುತ್ತದೆ. ಅಂದರೆ, ಸ್ಪರ್ಧಿಸಿದ ಪ್ರತಿ ಚುನಾವಣೆಗೂ ಅಭ್ಯರ್ಥಿಯು ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ತೆರೆಯಬೇಕು. ಈ ರೀತಿಯಾಗಿ ಚುನಾವಣಾ ಆಯೋಗವು ಅಭ್ಯರ್ಥಿಗಳ ವೆಚ್ಚದ ಮಿತಿಗಳ ಮೇಲೆ ಒಂದು ಕಣ್ಣಿಡಬಹುದು ಮತ್ತು ವ್ಯವಸ್ಥೆಗೆ ಪಾರದರ್ಶಕತೆಯನ್ನು ತರಬಹುದು” ಎಂದು ಆಯೋಗ ತಿಳಿಸಿದೆ ಅಂತಾ ಹೇಳಲಾಗ್ತಿದೆ.

ಇದನ್ನೂ ಓದಿ : tsunami prevention technology : ಕರ್ನಾಟಕದಲ್ಲಿ ನಡೆಯುತ್ತಿದೆ ಸುನಾಮಿ ತಡೆಯುವ ತಂತ್ರಜ್ಞಾನದ ಸಂಶೋಧನೆ

ಇದನ್ನೂ ಓದಿ : Shashi Tharoor: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಶಶಿ ತರೂರ್ ಗೆ ಸೋನಿಯಾ ಒಪ್ಪಿಗೆ

Chief Election Commissioner-The Election Commission has proposed bringing down anonymous political donations

Comments are closed.