Auto Rate Revision :ಉಡುಪಿ ಜಿಲ್ಲೆಯಲ್ಲಿ ಆಟೋ ದರ ಪರಿಷ್ಕರಣೆ : ಅ.1ರಿಂದ ಪರಿಷ್ಕೃತ ದರ ಜಾರಿ

ಉಡುಪಿ : Auto Rate Revision:ಉಡುಪಿ ಜಿಲ್ಲಾ ಸಾರಿಗೆ ಪ್ರಾಧಿಕಾರವು ಅಕ್ಟೋಬರ್​ 1ರಿಂದ ಜಾರಿಗೆ ಬರುವಂತೆ ಉಡುಪಿ ಜಿಲ್ಲೆಯಾದ್ಯಂತ ಸಂಚರಿಸುವ ಆಟೋರಿಕ್ಷಾಗಳ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಿದೆ. ಅಕ್ಟೋಬರ್​ 1ರಿಂದ ಪರಿಷ್ಕರಣೆಯಾಗುವ ಆಟೋ ದರದ ಪ್ರಕಾರ 1.5 ಕಿಲೊ ಮೀಟರ್​ವರೆಗಿನ ಕನಿಷ್ಟ ದರ ನಲವತ್ತು ರೂಪಾಯಿ ಆಗಿದೆ. ಹಾಗೂ ಇದಾದ ಬಳಿಕ ಪ್ರತಿ ಕಿಲೋಮೀಟರ್​ಗೆ 20 ರೂಪಾಯಿ ಆಟೋ ದರ ಇರಲಿದೆ.


ಉಡುಪಿ ಜಿಲ್ಲೆಯ ಎಲ್ಲಾ ಆಟೋ ರಿಕ್ಷಾ ಚಾಲಕರು ತಮ್ಮ ಆಟೋಗಳಿಗೆ ಕಾನೂನಿನ ಪ್ರಕಾರ ಫ್ಲಾಗ್​ ಮೀಟರ್​ನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿರಲಿದೆ. ಇದರ ಜೊತೆಯಲ್ಲಿ ಸೆಪ್ಟೆಂಬರ್​ 31ರ ಒಳಗಾಗಿ ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ರಿಕ್ಯಾಲೀಬರೇಷನ್ ಹಾಗೂ ಸೀಲ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿರಲಿದೆ. ಕಾನೂನಿನ ಈ ನಿಯಮಗಳನ್ನು ಪಾಲನೆ ಮಾಡದವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನು ಆರ್​ಟಿಒ ಅಧಿಕಾರಿಗಳು ನೀಡಿದ್ದಾರೆ.

ಕರ್ನಾಟಕದಲ್ಲಿ ನಡೆಯುತ್ತಿದೆ ಸುನಾಮಿ ತಡೆಯುವ ತಂತ್ರಜ್ಞಾನದ ಸಂಶೋಧನೆ


ಮಂಗಳೂರು : ರಾಜ್ಯದಲ್ಲಿ ವರ್ಷಗಳಿಂದಿಚೇಗೆ ಭೂಕಂಪನದ ಘಟನೆಗಳು ಹೆಚ್ಚಾಗಿದೆ. ಆದ್ರೆ ಸದ್ಯ ಕೆಲ ಸೆಕೆಂಡುಗಳ ಕಾಲ ಕಂಪಿಸಿದ ಅನುಭವವಷ್ಟೇ ಅಲ್ಲಲ್ಲಿ ಆಗುತ್ತಿದೆ. ಈ ನಡುವೆ ಸರ್ಕಾರ ಭೂಕಂಪನ ನಡೆದ ಸ್ಥಳಗಳಲ್ಲಿ ಅಧ್ಯಯನಕ್ಕೂ ಕ್ರಮ ಕೈಗೊಂಡಿದೆ. ಆದ್ರೆ ಇದೆಲ್ಲದರ ನಡುವೆ ಸುನಾಮಿ ಭೀತಿಯು ಕಾಡುತ್ತಿದೆ. ಯಾಕಂದ್ರೆ ಹೆಚ್ಚಿನ ಕಡೆಗಳಲ್ಲಿ ಭೂಕಂಪನ ಆದ ಬಳಿಕವೇ ಸುನಾಮಿ ಬಂದಿದೆ. ಆದ್ರೆ ಸರ್ಕಾರಗಳು ಭೂಕಂಪನದ ಬಗ್ಗೆ ಅಧ್ಯಯನ ಮಾಡುತ್ತಿದೆ ಹೊರತು ಸುನಾಮಿ ತಡೆಯುವ ಕುರಿತು ಯಾವುದೇ ಮನಸ್ಸು ಮಾಡುತ್ತಿಲ್ಲ.

ಇದೀಗ ಮಂಗಳೂರುನ ನಗರ ಹೊರವಲಯದಲ್ಲಿರುವ ಎನ್.ಐ.ಟಿ.ಕೆಯಿಂದ ಸುನಾಮಿಯನ್ನು ತಡೆಯುವ ತಂತ್ರಜ್ಞಾನದ ಸಂಶೋಧನೆಯನ್ನು ನಡೆಸುತ್ತಿದೆ. ಸುನಾಮಿಯಿಂದ ಕರಾವಳಿಯ ರಕ್ಷಣೆ ಮಾಡಲು ಬೇಕಾದ ತಂತ್ರಜ್ಞಾನವನ್ನು ಅನ್ವೇಷಣೆ ಮಾಡಲಾಗುತ್ತಿದ್ದು, ಕರಾವಳಿ ತೀರ ಹಾಗೂ ಬಂದರುಗಳ ರಕ್ಷಣೆಗೆ ಬೇಕಾದ ಅತ್ಯ್ಯಾಧುನಿಕ ತಂತ್ರಜ್ಞಾನದ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ. ಎನ್.ಐ.ಟಿ.ಕೆ ತಂಡದ ಈ ಸಂಶೋಧನೆಗೆ ಕೇಂದ್ರದ ಬಂದರು, ಜಲಮಾರ್ಗ, ನೌಕಾಯಾನ ಸಚಿವಾಲಯ ಒತ್ತು ನೀಡಿದ್ದು, ತಂಡಕ್ಕೆ 45 ಲಕ್ಷ ನಿಧಿಯ ನೆರವು ಒದಗಿಸಿದೆ.

ಸುನಾಮಿ ನಿರೋಧಕ ಬ್ರೇಕ್ ವಾಟರ್ ನಿರ್ಮಾಣದ ಸಂಶೋಧನೆ ಮಾಡಲಾಗುತಿದ್ದು, ಸುನಾಮಿಗೂ ಜಗ್ಗದ,ಸಮುದ್ರ ತೀರದಲ್ಲಿ ಅಸ್ತಪಾಸ್ತಿಗಳ ರಕ್ಷಣೆ ಮಾಡುವ ತಂತ್ರಜ್ಞಾನದ ಅಭಿವೃದ್ದಿಗೆ ಆದ್ಯತೆ ನೀಡಲಾಗಿದೆ. ಪೂರ್ವ ಕರಾವಳಿಗಿಂತಲೂ ಹೆಚ್ಚಿನ ಸುನಾಮಿ ಭೀತಿಯನ್ನು ಪಶ್ಚಿಮ ಕರಾವಳಿ ಹೊಂದಿದ್ದು, ಹೀಗಾಗಿ ಸಂಯೋಜಿತ ಬ್ರೇಕ್ ವಾಟರ್‌ಗಳಿಂದ ಸುನಾಮಿ ತಡೆಯುವ ಪ್ರಯತ್ನ ಮಾಡಲಾಗುತ್ತಿದೆ.

1945ರಲ್ಲಿ ಬಂದಂತಹ ಸುನಾಮಿಯಿಂದ ಸುಮಾರು 40 ಅಡಿಗಿಂತಲೂ ಎತ್ತರದ ಅಲೆ ಅಪ್ಪಳಿಸಿತ್ತು. 2004ರಲ್ಲಿ ಹಿಂದೂ ಮಹಾಸಾಗರದಲ್ಲೂ ಎದ್ದು ಬಂದ ಸುನಾಮಿಯಿಂದಲೂ ಸಾಕಷ್ಟು ಹಾನಿಯಾಗಿತ್ತು. ಹೀಗಾಗಿ ಸುನಾಮಿ ಬರುವ ಮೊದಲು ಎಚ್ಚೆತ್ತುಕೊಂಡು ಸುನಾಮಿ ತಡೆಯಲು ಬೇಕಾದ ವ್ಯವಸ್ಥೆ ಮಾಡಬೇಕಾಗಿದೆ. ಬಂದರು ಪ್ರದೇಶ, ಸೂಕ್ಷ್ಮ ಪ್ರದೇಶ ಇರುವಲ್ಲಿ ಹೆಚ್ಚು ಅಲರ್ಟ್ ಇರಬೇಕಾಗಿದೆ. ಸದ್ಯ ಎನ್.ಐ.ಟಿ.ಕೆ ನವಮಂಗಳೂರು ಬಂದರು ಪ್ರದೇಶದಲ್ಲಿ ಪರೀಕ್ಷೆಗೆ ಸಿದ್ದತೆ ಮಾಡಿಕೊಂಡಿದೆ. ಒಟ್ಟಿನಲ್ಲಿ ಸರ್ಕಾರ ಭೂಕಂಪನದ ಅಧ್ಯಯನದ ಜೊತೆ ಸುನಾಮಿ ತಡೆಯುವಲ್ಲಿ ಆಗಬೇಕಾದ ವ್ಯವಸ್ಥಗಳ ಬಗ್ಗೆಯು ಎಚ್ಚೆತ್ತುಕೊಳ್ಳಬೇಕಾಗಿದೆ.

ಇದನ್ನು ಓದಿ : Hassan : ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳ ಮಾರಾಮಾರಿ

ಇದನ್ನೂ ಓದಿ : Virat Kohli India vs Australia : 11 ಸಾವಿರ ಟಿ20 ರನ್ ಶಿಖರಕ್ಕೆ 98 ರನ್ ಬಾಕಿ.. ಕಾಂಗರೂಗಳ ವಿರುದ್ಧ “ವಿರಾಟ” ದಾಖಲೆಗೆ ಕಿಂಗ್ ಕೊಹ್ಲಿ ಸಜ್ಜು

Comments are closed.