Keenya Drought : ಕೀನ್ಯಾದಲ್ಲಿ ತೀವ್ರ ಬರ : 200 ಆನೆ, ಸಾವಿರಾರು ಪ್ರಾಣಿಗಳ ಸಾವು

ನೈರೋಬಿ : ಕಳೆದ 40 ವರ್ಷಗಳಲ್ಲಿ ಕಾಣದಂತಹ ಭೀಕರ ಬರ ಕೀನ್ಯಾ (Keenya Drought)ಎದುರಿಸುತ್ತಿದೆ. ಅಕಾಲದಲ್ಲಿ ಉಂಟಾದ ಬರದಿಂದಾಗಿ ಕೀನ್ಯಾದ ಕಾಡಿನಲ್ಲಿ ವಾಸಿಸುವ 200ಕ್ಕೂ ಹೆಚ್ಚು ಆನೆಗಳು ಸಾವನ್ನಪ್ಪಿವೆ. ಅಲ್ಲದೇ ಸಾವಿರಾರು ಪ್ರಾಣಿಗಳು ಬರದಿಂದಾಗಿ ಮರಣವನ್ನಪ್ಪಿವೆ ಎಂದು ಕಿನ್ಯಾ ಮಾಧ್ಯಮಗಳು ವರದಿ ಮಾಡಿವೆ.

ಕೀನ್ಯಾದಲ್ಲಿ (Keenya Drought)ಉಂಟಾದ ಬರದಿಂದಾಗಿ ಫೆಬ್ರವರಿಯಿಂದ ಅಕ್ಟೋಬರ್ ವರೆಗೆ 205 ಆನೆಗಳು ಸಾವನ್ನಪ್ಪಿರುತ್ತವೆ. ಇದರ ಜೊತೆಯಲಿ ಇತರ ಪ್ರಾಣಿಗಳಾದ 51 ಎಮ್ಮೆಗಳು, 49 ಗ್ರೇವಿ ಜೀಬ್ರಾಗಳು, 512 ಕಾಡಾನೆಗಳು, 381 ಸಾಮಾನ್ಯ ಜೀಬ್ರಾಗಳು ಮತ್ತು 12 ಜಿರಾಫೆಗಳು ಕೂಡ ಸಾವನ್ನಪ್ಪಿರುತ್ತವೆ. ಕೀನ್ಯಾದ ವಿವಿಧ ಭಾಗಗಳಲ್ಲಿ ಕಳೆದ ಎರಡು ವರ್ಷಗಳಿಂದ ಸತತ ನಾಲ್ಕು ಋತುಗಳಲ್ಲಿ ಸರಿಯಾಗಿ ಮಳೆಯಾಗದೇ ಇರುವುದರಿಂದ, ಜಾನುವಾರುಗಳು ಸೇರಿದಂತೆ ಜನರು ಸಹ ನೀರು ಅಥವಾ ಆಹಾರವಿಲ್ಲದೆ ತತ್ತರಿಸುತ್ತಿದ್ದಾರೆ.

ತ್ಸಾವೊ ವೆಸ್ಟ್ ರಾಷ್ಟ್ರೀಯ ಉದ್ಯಾನವನದ ನ್ಗುಲಿಯಾ ರೈನೋ ಅಭಯಾರಣ್ಯದಲ್ಲಿ ಕೇವಲ ಒಂದು ಘೇಂಡಾಮೃಗ ಸಾವನ್ನಪ್ಪಿರುತ್ತದೆ. ಬರವು ಘೇಂಡಾಮೃಗಗಳ ಮೇಲೆ ಹೆಚ್ಚು ಪರಿಣಾಮ ಬೀರಿಲ್ಲ ಎಂದು ಸರ್ಕಾರ ವರದಿ ಮಾಡಿರುತ್ತದೆ. ಕೀನ್ಯಾದ ಅತಿ ಹೆಚ್ಚು ಭೇಟಿ ನೀಡುವ ಪ್ರದೇಶಗಳಾದ ಅಂಬೋಸೆಲಿ, ತ್ಸಾವೊ ಮತ್ತು ಲೈಕಿಪಿಯಾ ಸಂಬೂರು, ರಾಷ್ಟ್ರೀಯ ಉದ್ಯಾನವನಗಳು ಮತ್ತು ಉದ್ಯಾನವನಗಳಂತಹ ಅನೇಕ ಪರಿಸರ ವ್ಯವಸ್ಥೆಗಳು ಕಳಪೆ ಸ್ಥಿತಿಯಲ್ಲಿದೆ ಎಂದು ವರದಿಯಾಗಿರುತ್ತದೆ.

ಬರಗಾಲದ ಪ್ರಭಾವದಿಂದ ವನ್ಯಜೀವಿಗಳ ಸಂಪೂರ್ಣ ಮಾಹಿತಿಯನ್ನು ಪಡೆಯಲು ಅಂಬೋಸೆಲಿಯಲ್ಲಿ ತುರ್ತು ವೈಮಾನಿಕ ಗಣತಿಯನ್ನು ನಡೆಸಲು ಸೂಚಿಸಲಾಗಿದೆ.ಬರಪೀಡಿತ ಪ್ರದೇಶಗಳಿಗೆ ನೀರು ಮತ್ತುಆಹಾರವನ್ನು ತಕ್ಷಣವೇ ಒದಗಿಸುವಂತೆ ತಜ್ಞರು ಶಿಫಾರಸು ಮಾಡಿರುತ್ತಾರೆ. “ನಾವು ಜಾನುವಾರುಗಳನ್ನು ಕಳೆದುಕೊಳ್ಳುತ್ತಿದ್ದೇವೆ ಮತ್ತು ಲಕ್ಷಾಂತರ ನಾಗರಿಕರು ಈ ಸಮಸ್ಯೆಯಿಂದ ನಿಜವಾಗಿಯೂ ಪ್ರಭಾವಿತರಾಗಿದ್ದಾರೆ” ಎಂದು ಆಫ್ರಿಕಾ ವನ್ಯಜೀವಿ ಫೌಂಡೇಶನ್‌ನ ಸಂರಕ್ಷಣಾವಾದಿ ನ್ಯಾನ್ಸಿ ಗಿಥೈಗಾ ತಿಳಿಸಿದ್ದಾರೆ. ನಾವು ಪ್ರಾಣಿಗಳನ್ನು ಕಳೆದುಕೊಳ್ಳುತ್ತಿದ್ದೇವೆ, ನಾವು ವನ್ಯಜೀವಿಗಳನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಅವರು ನೋವಿನಿಂದ ಹೇಳಿರುತ್ತಾರೆ.

ಇದನ್ನೂ ಓದಿ : Imran Khan: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ; ಇಮ್ರಾನ್ ಕಾಲಿಗೆ ಗಾಯ

ಇದನ್ನೂ ಓದಿ : Somalia Bomb Attack: ಸೊಮಾಲಿಯಾದ ಶಿಕ್ಷಣ ಇಲಾಖೆ ಕಚೇರಿ ಬಳಿ 2 ಕಾರು ಬಾಂಬ್ ಬ್ಲಾಸ್ಟ್: 100ಕ್ಕೂ ಅಧಿಕ ಮಂದಿ ಬಲಿ

ಇದನ್ನೂ ಓದಿ : South Korea : ದಕ್ಷಿಣ ಕೊರಿಯಾದಲ್ಲಿ ಕಾಲ್ತುಳಿತ : 150 ಮಂದಿ ಸಾವು

ಗ್ರೇವಿಯ ಜೀಬ್ರಾಗಳಿಗೆ, ತಜ್ಞರು ತಕ್ಷಣವೇ ಹುಲ್ಲಿನ ಆಹಾರವನ್ನು ನೀಡುವಂತೆ ಒತ್ತಾಯಿಸಿದ್ದಾರೆ. ಆನೆ ನೆರೆ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ಜಿಮ್ ಜಸ್ಟಸ್ ನ್ಯಾಮು ಮಾತನಾಡಿ, ಆನೆಗಳು ದಿನಕ್ಕೆ 240 ಲೀಟರ್ ನೀರು ಕುಡಿಯುತ್ತವೆ ಎಂದು ತಿಳಿಸಿದ್ದಾರೆ. ಉತ್ತರ ಕೀನ್ಯಾದ ತುರ್ಕಾನಾ ಪ್ರದೇಶದಲ್ಲಿ 500,000 ಕ್ಕೂ ಹೆಚ್ಚು ಜನರು ಹಸಿವಿನಿಂದ ಸಾಯುವ ಅಪಾಯದಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿರುತ್ತಾರೆ. ಆಹಾರ ಸಂಪನ್ಮೂಲಗಳ ಸವಕಳಿ ಮತ್ತು ನೀರಿನ ಕೊರತೆ ಯಿಂದಾಗಿ ಸಾವುಗಳು ಸಂಭವಿಸುತ್ತಿವೆ. ಪ್ರವಾಸೋದ್ಯಮ ಸಚಿವಾಲಯದ ಪ್ರಕಾರ, ಕೀನ್ಯಾ ಕಳೆದ ವರ್ಷ 36,000 ಆನೆಗಳನ್ನು ಹೊಂದಿದ್ದು, ಈಗ ಬರದಿಂದಾಗಿ ಅನೇಕ ಆನೆಗಳು ಸಾವನ್ನಪ್ಪಿವೆ.

Severe drought in Kenya; 200 elephants and thousands of animals died

Comments are closed.