A terrible accident : ಮಂಗಳೂರಲ್ಲಿ ಲಾರಿ ಬೈಕ್ ನಡುವೆ ಭೀಕರ ಅಪಘಾತ : 2 ಸಾವು, ಇಬ್ಬರು ಗಂಭೀರ

ಮಂಗಳೂರು : (A terrible accident)ಲಾರಿ ಮತ್ತು ಬೈಕ್‌ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಗಳೂರಿನ ಕಲ್ಲಾಪು ಎಂಬಲ್ಲಿ ನಡೆದಿದೆ . ಲಾರಿ ಮತ್ತು ಬೈಕ್‌ ನಡುವೆ ಡಿಕ್ಕಿ( Mangalore accident)ಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ .

ಮೃತ ವ್ಯಕ್ತಿಗಳನ್ನು ಜೆಪ್ಪು ತಂದೋಳಿಗೆ ನಿವಾಸಿ ಗಂಗಾಧರ ಮತ್ತು ಕೊಣಾಜೆ ಪಜೀರು ನಿವಾಸಿ ನೇತ್ರಾವತಿ ಎಂದು ಗುರುತಿಸಲಾಗಿದೆ . ಇನ್ನಿಬ್ಬರು ಮಕ್ಕಳನ್ನು ಮೃತ ವ್ಯಕ್ತಿ ನೇತ್ರಾವತಿ ಅವರ ಪುತ್ರಿ ಮೋಕ್ಷಾ ಹಾಗೂ ನೇತ್ರಾವತಿ ಅವರ ಸೋದರಳಿಯ ಜ್ಞಾನೇಶ್ ಎಂದು ಗುರುತಿಸಲಾಗಿದ್ದು , ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಇಬ್ಬರು ಮಕ್ಕಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು , ಇಬ್ಬರು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ .

ಇದನ್ನೂ ಓದಿ : Permission for 9 beef shops : ಮಂಗಳೂರಲ್ಲಿ 9 ಗೋಮಾಂಸ ಮಾರಾಟ ಮಳಿಗೆಗೆ ಅನುಮತಿ : ಮನಪಾ ವಿರುದ್ದ ವಿಶ್ವ ಹಿಂದೂ ಪರಿಷತ್ ಆಕ್ರೋಶ

ಇದನ್ನೂ ಓದಿ : Separate Milk Union : ಉಡುಪಿ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ : ಬೇಡಿಕೆಯಿಟ್ಟ ಬಿಜೆಪಿ

ಇದನ್ನೂ ಓದಿ : ಕುಂದಾಪುರ : 24 ಗಂಟೆಯಲ್ಲಿ ಕಾಲೇಜು ವಿದ್ಯಾರ್ಥಿಯ ಅಪಹರಣ ಪ್ರಕರಣ ಬೇಧಿಸಿದ ಪೊಲೀಸರು

ಲಾರಿಯೊಂದು ಕಲ್ಲಾಪು ಗ್ಲೋಬಲ್ ಮಾರ್ಕೆಟ್‌ನಿಂದ ತರಕಾರಿ ಇಳಿಸಿ ಹೊರ ಬರುತ್ತಿತ್ತು. ಮೃತ ಗಂಗಾಧರ್‌ ಪರಿಚಿತರಾದ ನೇತ್ರಾವತಿ ಹಾಗೂ ಅವರ ಪುತ್ರಿ ಮತ್ತು ಸೋದರಳಿಯನ ಜೊತೆಗೆ ಕೊಣಾಜೆ ಕಡೆ ಹೋಗುತ್ತಿದ್ದರು . ಈ ವೇಳೆಯಲ್ಲಿ ಅಪಘಾತ ಸಂಭವಿಸಿದ್ದು , ಇದಕ್ಕೆ ಲಾರಿ ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ . ಈ ಕುರಿತು ಮಂಗಳೂರು ದಕ್ಷಿಣ ಸಂಚಾರ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ತನಿಖೆ ನಡೆಯುತ್ತಿದೆ.

(Mangalore accident : A terrible accident) As a result of a head-on collision between a lorry and a bike, two people died on the spot in Kallapu, Mangalore. As a result of a collision between a lorry and a bike (A terrible accident), two people died on the spot and two children were seriously injured.

Comments are closed.