Queen’s death : ಬ್ರಿಟನ್​ ರಾಣಿಯ ಸಾವನ್ನು ವಿಕೃತವಾಗಿ ಸಂಭ್ರಮಿಸಿದ ಟಿವಿ ನಿರೂಪಕ : ನೆಟ್ಟಿಗರಿಂದ ವಿರೋಧ

ಅರ್ಜೆಂಟೀನಾ : Queen’s death : ಬ್ರಿಟನ್​​ನ ರಾಣಿ ಎಲೆಜಬೆತ್​ IIರ ಸಾವಿನ ವರದಿ ಪ್ರಸಾರ ಮಾಡುವ ಸಂದರ್ಭದಲ್ಲಿ ಟಿವಿ ನಿರೂಪಕನೊಬ್ಬ ಶ್ಯಾಂಪನ್​ ಬಾಟಲಿ ತೆರೆದು ಸಂಭ್ರಮಿಸಿದ್ದು ಮಾತ್ರವಲ್ಲದೇ ಅತ್ಯಂತ ಅವಾಚ್ಯ ಶಬ್ದಗಳಿಂದ ರಾಣಿಯ ಸಾವನ್ನು ನಿಂದಿಸಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು ಒಬ್ಬರ ಸಾವನ್ನು ಸಂಭ್ರಮಿಸಿದ್ದು ಎಷ್ಟು ಸರಿ ಎಂಬ ಪ್ರಶ್ನೆ ನೆಟ್ಟಿಗರಲ್ಲಿ ಮೂಡಿದೆ.

ಅರ್ಜೆಂಟಿನಾದ ಬ್ಯೂನಸ್​ ಐರಿಸ್​ನಲ್ಲಿ ರಾಜಕಾರಣಿ ಹಾಗೂ ಪತ್ರಕರ್ತ ಸ್ಯಾಂಟಿಯಾಗೊ ಕುನಿಯೊ ಟಿವಿ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದ ಸಂದರ್ಭದಲ್ಲಿ ಬ್ರಿಟನ್​​ ರಾಣಿಯ ಸಾವಿನ ಸುದ್ದಿಯನ್ನು ಬ್ರೇಕ್​ ಮಾಡಿದ್ದರು. ಕುನಿಯೋ ಗ್ಲಾಸ್​ನಲ್ಲಿ ಶ್ಯಾಂಪೇನ್​ ಸುರಿದುಕೊಳ್ಳುತ್ತಾರೆ ಮತ್ತು ಫಿಂಗರ್​ ಸ್ಯಾಂಡ್​ವಿಚ್​​ನ್ನು ಸೇವಿಸುತ್ತಿರುವ ವೇಳೆಯಲ್ಲಿ ರಾಣಿ ಎಲೆಜಬೆತ್​ ಮರಣದ ಸುದ್ದಿಯನ್ನು ಪ್ರಸಾರ ಮಾಡುಲಾಗುತ್ತೆ. ನಿರೂಪಕ ಕುನಿಯೋ ಹೊಲಸನ್ನು ತುಂಬಿದ್ದ ಹಳೆಯ ಚೀಲವೊಂದು ಮರಣ ಹೊಂದಿದೆ ಎಂದು ಅತ್ಯಂತ ಕ್ರೂರವಾಗಿ ಬ್ರಿಟನ್​ ರಾಣಿಯ ಸಾವನ್ನು ವರ್ಣಿಸಿದ್ದಾರೆ.


ಅರ್ಜೆಂಟೀನಾದಲ್ಲಿ ರಾಜ ಮನೆತನದ ವಿರೋಧಿ ಭಾವನೆಯು 1982ರ ಫಾಕ್​ಲ್ಯಾಂಡ್ಸ್​ ಯುದ್ಧದಿಂದ ಬಂದಿದೆ. ಇದು ಅರ್ಜೆಂಟೀನಾದವರು ಆಕ್ರಮಣ ಮಾಡಿದ ಬಳಿಕ ದಕ್ಷಿಣ ಅಮೆರಿಕ ರಾಷ್ಟ್ರದ ಕರಾವಳಿಯಲ್ಲಿರುವ ಫಾಕ್​ಲ್ಯಾಂಡ್​ ದ್ವೀಪಗಳ ನಿಯಂತ್ರಣವನ್ನು ಹಿಂಪಡೆಯಲು ಬ್ರಿಟನ್​​ ನೌಕಾ ಕಾರ್ಯಪಡೆಯನ್ನು ಕಳುಹಿಸಿತ್ತು.

ಆದರೂ ಅರ್ಜೆಂಟೀನಾದಲ್ಲಿರುವ ಪ್ರತಿಯೊಬ್ಬರೂ ಬ್ರಿಟನ್​ ರಾಣಿಯ ಸಾವನ್ನು ಸಂಭ್ರಮಿಸಿಲ್ಲ. ಅರ್ಜೆಂಟಿನಾ ಸರ್ಕಾರವು ರಾಣಿಯ ಮರಣದ ಬಗ್ಗೆ ಅಧಿಕೃತ ಶೋಕವನ್ನು ವ್ಯಕ್ತಪಡಿಸಿದೆ. ಈ ದುಃಖದ ಕ್ಷಣದಲ್ಲಿ ಬ್ರಿಟೀಷ್​ ಜನರು ಹಾಗೂ ಅವರ ಕುಟುಂಬದ ಜೊತೆಯಲ್ಲಿ ನಾವಿದ್ದೇವೆ ಎಂದು ಅರ್ಜೆಂಟೀನಾ ಸರ್ಕಾರ ಹೇಳಿದೆ.

Comments are closed.