hundreds of wells :ಉಡುಪಿಯಲ್ಲಿದೆ ನೂರು ಬಾವಿಗಳ ಹಾಡಿ, ಕಾಲಿಟ್ಟಲ್ಲೆಲ್ಲಾ ಕಾಣಸಿಗುತ್ತದೆ ಬರೇ ಬಾವಿಗಳು

ಉಡುಪಿ : hundreds of wells : ಇದೊಂಥರಾ ನಿಗೂಢ ಸ್ಥಳ. ಈ ಪಾಳು ಗುಡ್ಡೆಯಲ್ಲಿ ಕಣ್ಣಾಡಿಸಿದಲ್ಲೆಲ್ಲಾ ಬರೇ ಬಾವಿಗಳು ಕಾಣಸಿಗುತ್ತವೆ. ಉಡುಪಿ ಜಿಲ್ಲೆಯ ಪರ್ಕಳ ಪಟ್ಟಣದಲ್ಲಿರುವ ಸುಮಾರು 20 ಎಕರೆ ಖಾಸಗಿ ಸ್ಥಳದಲ್ಲಿ ಈ ವಿಚಿತ್ರ ಬಾವಿಗಳಿವೆ. ಇದನ್ನು ನೂರು ಬಾವಿಗಳ ಹಾಡಿ ಅಂತಾರೆ; ಆದರೆ ಈ ಬಾವಿಗಳ ಹಿನ್ನೆಲೆ ಐತಿಹಾಸಿಕ ಮಹತ್ವ ಯಾರಿಗೂ ತಿಳಿದಿಲ್ಲ.

ಅಲ್ಲಲ್ಲಿ ಪುಟ್ಟ ಮರಗಳು, ಮುಳ್ಳು ಗಿಡಗಂಟಿಗಳನ್ನು ಹೊರತು ಪಡಿಸಿದರೆ ಇಲ್ಲಿ ಮತ್ತೇನಿದೆ ಅನ್ಸುತ್ತೆ. ಹಾಗಂತ ಈ ಹಾಡಿಯಲ್ಲಿ ಕಣ್ಣುಮುಚ್ಚಿಕೊಂಡು ನಡೆದೀರಾ ಜೋಕೆ! ಯಾಕಂದ್ರೆ ಇಲ್ಲಿ ಕಾಲಿಟ್ಟಲ್ಲೆಲ್ಲಾ ಬರೇ ಬಾವಿಗಳು ಕಾಣಸಿಗುತ್ತವೆ. ಗಿಡಗಂಟಿ ರಾಶಿಯ ನಡುವೆ ಹತ್ತಾರು ಬಾವಿಗಳು ಹುದುಗಿವೆ. ಹುಲ್ಲುರಾಶಿಯಲ್ಲಿ ಮರೆಯಾಗಿರುವ ಈ ಬಾವಿಗಳನ್ನು ಕಂಡರೆ ದಿಗ್ಬ್ರಮೆಯಾಗುತ್ತೆ, ಪ್ರತಿಯೊಂದು ಬಾವಿಯಲ್ಲೂ ನೀರಿದೆ, ಸುಂದರ ಆಯಕಟ್ಟಿನ ರಚನೆಯಿದೆ. ಆದರೆ ಇವುಗಳನ್ನು ನಿರ್ಮಿಸಿದ್ದು ಯಾರು? ನಿರ್ಮಾಣದ ಉದ್ದೇಶವೇನು ಯಾರಿಗೂ ತಿಳಿದಿಲ್ಲ. ಊರವರ ಆಡುಮಾತಿನಲ್ಲಿ ಈ ಪ್ರದೇಶವನ್ನು ನೂರು ಬಾವಿಯ ಹಾಡಿ ಅಂತಾನೇ ಕರಿತಾರೆ. ಇಲ್ಲಿ ನೂರು ಬಾವಿಗಳಿವೆ ಅನ್ನೋದು ಜನರ ನಂಬಿಕೆ. ಆದರೆ ಯಾರೂ ಲೆಕ್ಕವಿಟ್ಟವರಿಲ್ಲ, ಪೊದೆಗಳನ್ನೆಲ್ಲಾ ಸ್ವಚ್ಛಗೊಳಿಸಿ ಸೂಕ್ಷ್ಮವಾಗಿ ಗಮನಿಸಿದರೆ ಈಗಲೂ ಸುಮಾರು ಮೂವತ್ತು ಬಾವಿಗಳು ಕಾಣಸಿಗುತ್ತವೆ.

ಇದೊಂದು ಖಾಸಗಿ ಸ್ಥಳ. ಸ್ಥಳೀಯ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡ ಪ್ರದೇಶದಲ್ಲಿ ಈ ಗುಡ್ಡೆಯಿದೆ. ಹಿಂದೊಮ್ಮೆ ಜೈನ ಸಮುದಾಯದ ಸಂಪರ್ಕವಿದ್ದ ಈ ಭಾಗದಲ್ಲಿ ನಾಗರಿಕತೆಯ ಸಂಕೇತಗಳಾಗಿ ಈ ಬಾವಿಗಳು ಉಳಿದಿರಬಹುದು. ಇಲ್ಲಿ ಜನಜೀವನ ನಡೆದಿರಬಹುದೇ ಎಂದು ಯೋಚಿಸಿದರೆ, ಬಾವಿಯ ಪಕ್ಕದಲ್ಲಿ ಕಟ್ಟಡಗಳಿದ್ದ ಯಾವುದೇ ಕುರುಹುಗಳಿಲ್ಲ. ಸದ್ಯ ಗೌಡ ಸಾರಸ್ವತ ಸಮುದಾಯದ ಒಂದು ಕುಟುಂಬದ ಸ್ವಾಮ್ಯದಲ್ಲಿ ಈ ಭೂಮಿ ಇದೆ. ಅವರಿಗೂ ಈ ನಿಗೂಢ ಬಾವಿಗಳ ಇತಿಹಾಸ ತಿಳಿದಿಲ್ಲ. ಇಲ್ಲಿ 99 ಬಾವಿಗಳನ್ನು ಕಣ್ಣಾರೆ ಕಂಡವರಿದ್ದಾರೆ. ಆದರೆ ಕಣ್ಣಿಗೆ ಕಾಣಿಸದ ನೂರನೇ ಬಾವಿಯಲ್ಲಿ ಅಪಾರ ಸಂಪತ್ತು ಅಡಗಿದೆ ಅನ್ನೋದು ವಾಡಿಕೆಯ ಮಾತು. ಎಷ್ಟೇ ವಿಮರ್ಶೆ ನಡೆಸಿದರೂ ಈ ಬಾವಿಗಳ ನೀಗೂಢತೆಯ ಕುರಿತಾದ ಕುತೂಹಲ ಹಾಗೇ ಉಳಿಯುತ್ತೆ.

ಇದು ಖಾಸಗಿ ಸ್ಥಳವಾದ ಕಾರಣ ಜನರು ಓಡಾಡೋದು ಕಡಿಮೆ. ಹಾಗಾಗಿ ಪ್ರತಿಯೊಂದು ಬಾವಿಯ ಸುತ್ತಲೂ ಮರಗಿಡಗಳು ಬೆಳೆದಿವೆ. ಅದೇನೇ ಇರಲಿ ಸಾವಿರಾರು ಜನರಿಗೆ ನೀರಿನ ಆಶ್ರಯವಾಗಿದ್ದ ಈ ಪ್ರದೇಶದ ಇತಿಹಾಸ ರಹಸ್ಯವಾಗಿಯೇ ಉಳಿದಿದೆ.

ಇದನ್ನು ಓದಿ : MB Patil Question :ಬಿಜೆಪಿ ಯಾವ ಸಾಧನೆ ಮಾಡಿದೆ ಅಂತಾ ಜನಸ್ಪಂದನೆ ಕಾರ್ಯಕ್ರಮ ಮಾಡಿದೆ : ಎಂ.ಬಿ ಪಾಟೀಲ್​ ಪ್ರಶ್ನೆ

ಇದನ್ನೂ ಓದಿ : Road Safety Series 2022 : ಇಂದಿನಿಂದ ದಿಗ್ಗಜರ ಕ್ರಿಕೆಟ್; ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕ್ರಿಕೆಟ್ ದೇವರು

There are hundreds of wells in this area of ​​Udupi

Comments are closed.