South Korea : ದಕ್ಷಿಣ ಕೊರಿಯಾದಲ್ಲಿ ಕಾಲ್ತುಳಿತ : 150 ಮಂದಿ ಸಾವು

ಸಿಯೋಲ್ : ದಕ್ಷಿಣ ಕೊರಿಯಾದಲ್ಲಿ (South Korea) ನಡೆದ ಹ್ಯಾಲೋವೀನ್ ಹಬ್ಬದಲ್ಲಿ ಕಾಲ್ತುಳಿತ ಉಂಟಾಗಿ 150ಕ್ಕೂ ಅಧಿಕ ಮಂದಿ ಸಾವನ್ನಪ್ಪಿ, ನೂರಾರು ಮಂದಿ ಗಾಯ ಗೊಂಡಿದ್ದಾರೆ. ಸಿಯೋಲ್ ನಲ್ಲಿ ನಡೆಯುತ್ತಿದ್ದ ಹಬ್ಬದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಂಡಿದ್ದರು. ಕಿರಿದಾದ ಜಾಗದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಜನರು ಸೇರಿದ್ದರಿಂದಾಗಿ ಹಲವರಿಗೆ ಉಸಿರಾಟದ ಸಮಸ್ಯೆ ಉಂಟಾಗಿತ್ತು. ನಂತರದಲ್ಲಿ ನಡೆದ ಕಾಲ್ತುಳಿತದಿಂದಾಗಿ ಭೀಕರ ದುರಂತ ಸಂಭವಿಸಿದೆ. ಸದ್ಯ ಹಬ್ಬದಲ್ಲಿ ಪಾಲ್ಗೊಂಡಿದ್ದ ಸುಮಾರು 270ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.

ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನ ಇಟಾವಾನ್ ಜಿಲ್ಲೆಯಲ್ಲಿ ಹ್ಯಾಲೋವೀನ್ ಹಬ್ಬ ನಡೆಯುವುದು ಸರ್ವೆ ಸಾಮಾನ್ಯ. ಈ ಹಬ್ಬದಲ್ಲಿ ಪಾಲ್ಗೊಳ್ಳಲು ಲಕ್ಷಾಂತರ ಮಂದಿ ಪಾಲ್ಗೊಳ್ಳುತ್ತಿದ್ದಾರೆ. ಈ ಬಾರಿ ಸೆಲೆಬ್ರಿಟಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಕುರಿತು ಮಾಹಿತಿ ಲಭ್ಯವಾದ ನಂತರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ನೂರಾರು ಅಂಗಡಿಗಳು ಮತ್ತು ಪಾರ್ಟಿ ಸ್ಥಳಗಳನ್ನು ಹೊಂದಿರುವ ಸಿಯೋಲ್‌ನ ಕೇಂದ್ರ ಜಿಲ್ಲೆಯಾದ ಇಟಾವಾನ್‌ನಲ್ಲಿ ಶನಿವಾರ ರಾತ್ರಿ 90 ಸಾವಿರದಿಂದ 1 ಲಕ್ಷದವರೆಗೆ ಜನಸಮೂಹ ಜಮಾಯಿಸಿತ್ತು ಎಂದು ಸ್ಥಳೀಯ ಸುದ್ದಿವಾಹಿನಿಗಳು ಹೇಳಿವೆ. ಕಿರಿದಾದ ಸ್ಥಳದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಜನರು ಸೇರಿದ್ದೇ ಈ ದುರಂತ ಸಂಭವಿಸಿದೆ. ಸಿಯೋಲ್‌ನ ಯೋಂಗ್ಸಾನ್ ಅಗ್ನಿಶಾಮಕ ವಿಭಾಗದ ಮುಖ್ಯಸ್ಥ ಚೋಯ್ ಸಿಯೋಂಗ್-ಬೀಮ್, ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದಿದ್ದಾರೆ.

ಇನ್ನು ಈ ದುರಂತದಲ್ಲಿ ಒಟ್ಟು 270 ಮಂದಿ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಕಾಣೆಯಾದವರ ಬಗ್ಗೆ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಸಿಯೋಲ್‌ನ ಯೋಂಗ್ಸಾನ್ ಅಗ್ನಿಶಾಮಕ ವಿಭಾಗದ ಮುಖ್ಯಸ್ಥ ಚೋಯ್ ಸಿಯೋಂಗ್-ಬೀಮ್ ಪ್ರಕಾರ, ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಂದಾಜಿಸಿದ್ದಾರೆ. ಇನ್ನೊಂದೆಡೆಯಲ್ಲಿ ದುರಂತದ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳು ಹರಿದಾಡುತ್ತಿವೆ.

ಸದ್ಯ ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂಧಿಗಳು ಹಾಗೂ ತುರ್ತು ರಕ್ಷಣಾ ಕಾರ್ಯಪಡೆ ರಕ್ಷಣಾ ಕಾರ್ಯವನ್ನು ಕೈಗೊಂಡಿವೆ. ಉಸಿರಾಟದ ಸಮಸ್ಯೆ ಉಂಟಾದವರನ್ನು ಹಾಗೂ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸುವ ಕಾರ್ಯವನ್ನು ಮಾಡಿದ್ದಾರೆ. ರಾಷ್ಟ್ರದಾದ್ಯಂತದ 800 ಕ್ಕೂ ಹೆಚ್ಚು ತುರ್ತು ಕಾರ್ಯಕರ್ತರು ಮತ್ತು ಪೊಲೀಸ್ ಅಧಿಕಾರಿಗಳನ್ನು ಬೀದಿಗಳಲ್ಲಿ ನಿಯೋಜಿಸಲಾಗಿದೆ. ಸತ್ತವರಲ್ಲಿ 74 ಮಂದಿಯನ್ನು ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ ಮತ್ತು ಆರಂಭದಲ್ಲಿ ಬೀದಿಗಳಲ್ಲಿ ಇರಿಸಲಾಗಿದ್ದ ಉಳಿದ 46 ಶವಗಳನ್ನು ಹತ್ತಿರದ ಜಿಮ್‌ಗೆ ಸಾಗಿಸಲಾಗುತ್ತಿದ್ದು, ಇದರಿಂದಾಗಿ ಕೆಲಸಗಾರರು ಅವರನ್ನು ಗುರುತಿಸಬಹುದು ಎಂದು ಚೋಯ್ ಹೇಳಿದರು.

ಇದನ್ನೂ ಓದಿ : 3 girls suicide: ಕ್ಲಾಸ್ ಬಂಕ್ ಮಾಡಿ ವಿಷ ಕುಡಿದ ಮೂವರು ಬಾಲಕಿಯರು: ಕಾರಣ ಕೇಳಿದ್ರೆ ಶಾಕ್ ಆಗ್ತೀರಾ

ಇದನ್ನೂ ಓದಿ : Netflix: ನೆಟ್ ಫ್ಲಿಕ್ಸ್ ಪಾಸ್ ವರ್ಡ್ ಶೇರ್ ಮಾಡುವ ಮುನ್ನ ಎಚ್ಚರ: ಯಾಮಾರಿದ್ರೆ ಜೇಬಿಗೆ ಬೀಳುತ್ತೆ ಕತ್ತರಿ

South Korea Halloween festival Stampede death 150

Comments are closed.