Central Railway Recruitment 2022 : ಸೆಂಟ್ರಲ್‌ ರೇಲ್ವೇಯಲ್ಲಿ ಗೂಡ್ಸ್‌ ಗಾರ್ಡ್‌, ಕ್ಲರ್ಕ್‌, ಸ್ಟೆನೋ ಸೇರಿದಂತೆ 596 ಹುದ್ದೆಗಳಿಗೆ ಅರ್ಜಿ ಆಹ್ವಾನ

ರೇಲ್ವೇ ರಿಕ್ರುಟ್‌ಮೆಂಟ್‌ ಸೆಲ್‌(RRC), ಸೆಂಟ್ರಲ್‌ ರೇಲ್ವೇ (Central Railway Recruitment 2022) ವಿವಿಧ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ. ಸ್ಟೆನೋಗ್ರಾಫರ್‌, ಸೀನಿಯರ್‌ ಕಮರ್ಷಿಯಲ್ ಕಮ್‌ ಟಿಕೆಟ್‌ ಕ್ಲರ್ಕ್‌, ಗೂಡ್ಸ್‌ ಗಾರ್ಡ್‌, ಸ್ಟೇಷನ್‌ ಮಾಸ್ಟರ್‌, ಜೂನಿಯರ್‌ ಅಕೌಂಟ್ಸ್‌ ಅಸಿಸ್ಟೆಂಟ್‌, ಜೂನಿಯರ್‌ ಕಮರ್ಷಿಯಲ್ ಕಮ್‌ ಟಿಕೆಟ್‌ ಕ್ಲರ್ಕ್‌ ಮತ್ತು ಅಕೌಂಟ್ಸ್‌ ಕ್ಲರ್ಕ್‌ ಹುದ್ದೆಗಳಿಗೆ ಜನರಲ್‌ ಡಿಪಾರ್ಟ್‌ಮೆಂಟ್‌ ಕಾಂಪಿಟೇಟೀವ್‌ ಎಕ್ಸಾಂ ಮೂಲಕ ಭರ್ತಿ ಮಾಡುತ್ತಿದೆ. ಅಭ್ಯರ್ಥಿಗಳು ಆನ್‌ಲೈನಲ್ಲಿ ನೋಂದಣಿ ಮಾಡಿಕೊಳ್ಳುವುದರ ಮೂಲಕ ಅರ್ಜಿ ಪ್ರಕ್ರಿಯೆ ಪ್ರಾರಂಭಿಸಬಹುದಾಗಿದೆ. ನವೆಂಬರ್‌ 28, 2022 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿದಾರರನ್ನು ಕಂಪ್ಯೂಟರ್‌ ಆಧಾರಿತ ಪರೀಕ್ಷೆ ಅಥವಾ ಲಿಖಿತ ಪರೀಕ್ಷೆಗೆ ಹಾಜಾರಾಗಲು ಕರೆಯಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸೆಂಟ್ರಲ್‌ ರೇಲ್ವೇ ಯ ಅಧಿಕೃತ ವೆಬ್‌ಸೈಟ್‌ https://rrccr.com/Home/Home ಗೆ ಭೇಟಿ ಕೊಡಿ.

ಪ್ರಮುಖ ದಿನಾಂಕಗಳು :
ಆನ್‌ಲೈನ್‌ ಅರ್ಜಿ ಸಲ್ಲಿಕೆಯ ಪ್ರಾರಂಭ ದಿನಾಂಕ – ಅಕ್ಟೋಬರ್‌ 28, 2022
ಆನ್‌ಲೈನ್‌ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ – ನವೆಂಬರ್‌ 28, 2022

ಹುದ್ದೆಗಳ ವಿವರ :

  • ಸ್ಟೆನೋಗ್ರಾಫರ್ – 08
  • ಸೀನಿಯರ್ ಕಮರ್ಷಿಯಲ್ ಕ್ಲರ್ಕ್ ಕಮ್ ಟಿಕೆಟ್ ಕ್ಲರ್ಕ್ – 154
  • ಗೂಡ್ಸ್ ಗಾರ್ಡ್ – 46
  • ಸ್ಟೇಷನ್ ಮಾಸ್ಟರ್ – 75
  • ಜೂನಿಯರ್ ಖಾತೆ ಸಹಾಯಕ – 150
  • ಜೂನಿಯರ್ ಕಮರ್ಷಿಯಲ್ ಕ್ಲರ್ಕ್ ಕಮ್ ಟಿಕೆಟ್ ಕ್ಲರ್ಕ್ – 126
  • ಅಕೌಂಟ್ಸ್ ಕ್ಲರ್ಕ್ – 37

ಅರ್ಹತಾ ಮಾನದಂಡಗಳು :

  • ಸ್ಟೆನೋಗ್ರಾಫರ್ – ಈ ಹುದ್ದೆಗಳಿಗೆ ಅಭ್ಯರ್ಥಿಯು 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು 10 ನಿಮಿಷಕ್ಕೆ 80 WPM ಶಾರ್ಟ್‌ಹ್ಯಾಂಡ್‌ ಸ್ಪೀಡ್‌ ಇರಬೇಕು.
  • ಸೀನಿಯರ್ ಕಮರ್ಷಿಯಲ್ ಕ್ಲರ್ಕ್ ಕಮ್ ಟಿಕೆಟ್ ಕ್ಲರ್ಕ್– ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ಶಿಕ್ಷಣ ಹೊಂದಿರಬೇಕು.
  • ಗೂಡ್ಸ್ ಗಾರ್ಡ್ – ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ.
  • ಸ್ಟೇಷನ್ ಮಾಸ್ಟರ್ – ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ.
  • ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ – ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ.
  • ಜೂನಿಯರ್ ಕಮರ್ಷಿಯಲ್‌ ಕ್ಲರ್ಕ್ ಕಮ್ ಟಿಕೆಟ್ ಕ್ಲರ್ಕ್ – ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 12 ನೇ ತರಗತಿಯನ್ನು ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
  • ಅಕೌಂಟ್ಸ್ ಕ್ಲರ್ಕ್ – ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 12 ನೇ ತರಗತಿಯನ್ನು ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ವಯೋಮಿತಿ:
UR – 42 ವರ್ಷಗಳು
OBC – 45 ವರ್ಷಗಳು
SC/ST – 47 ವರ್ಷಗಳು

ಅರ್ಜಿ ಶುಲ್ಕ :
ಈ ಹುದ್ದೆಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಅರ್ಜಿ ಸಲ್ಲಿಕೆ ಹೇಗೆ ?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೆಳಗೆ ಹೇಳಿರುವಂತೆ ಅರ್ಜಿ ಸಲ್ಲಿಸಬಹುದಾಗಿದೆ.

  • ಮೊದಲು ಸೆಂಟ್ರಲ್‌ ರೇಲ್ವೇಯ ಅಧಿಕೃತ ವೆಬ್‌ಸೈಟ್ https://rrccr.com/Home/Home ಗೆ ಭೇಟಿ ಕೊಡಿ.
  • ಹೋಮ್‌ ಪೇಜ್‌ ನಲ್ಲಿರುವ GDCE ONLINE/ E-Application ಮೇಲೆ ಕ್ಲಿಕ್ಕಿಸಿ.
  • ಅಲ್ಲಿ ನ್ಯೂ ರೆಜಿಸ್ಟ್ರೇಶನ್‌ ಮೇಲೆ ಕ್ಲಿಕ್ಕಿಸಿ.
  • ಅಗತ್ಯ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಿ.
  • ಭವಿಷ್ಯದ ಉಲ್ಲೇಖಗಳಿಗಾಗಿ ಪ್ರಿಂಟ್‌ಔಟ್‌ ತೆಗೆದುಕೊಳ್ಳಿ.

ಇದನ್ನೂ ಓದಿ : Bank of Baroda Recruitment 2022 : ಬ್ಯಾಂಕ್ ಆಫ್ ಬರೋಡಾ 2022 : FLC ಕೌನ್ಸಿಲರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ : Drinik Virus : ಬ್ಯಾಂಕ್‌ ಗ್ರಾಹಕರೇ ಎಚ್ಚರ! ಇದು ನಿಮ್ಮ ಬ್ಯಾಂಕಿಂಗ್‌ ಮಾಹಿತಿಯನ್ನು ಕದಿಯಬಹುದು

(Central Railway Recruitment 2022 has invited applications for clerk, goods guard clerk, steno, and other posts)

Comments are closed.