Spain village for sale: ಯಾರಿಗುಂಟು ಯಾರಿಗಿಲ್ಲ ; 2 ಕೋಟಿ ಕೊಟ್ಟರೆ ಈ ಇಡೀ ಗ್ರಾಮವೇ ನಿಮ್ಮದು

ಸ್ಪೇನ್: Spain village for sale: ನಮ್ಮಲ್ಲಿ ಅದೆಷ್ಟೋ ಜನರಿಗೆ ಸ್ವಂತ ಮನೆ ಖರೀದಿಸಬೇಕು, ಸಿಟಿಗಳಲ್ಲಿ ಫ್ಲ್ಯಾಟ್ ಖರೀದಿ ಮಾಡಬೇಕು ಎಂಬ ಆಸೆಗಳು ಇರುತ್ತವೆ. ಆದರೆ ಇಡೀ ಊರನ್ನೇ ಖರೀದಿ ಮಾಡಬೇಕು ಅಂತ ಯಾರಾದ್ರೂ ಕನಸು ಕಂಡಿದ್ದೀರಾ..? ಅಂಥವರಿಗೆ ಇಲ್ಲಿದೆ ಒಂದು ಸುವರ್ಣಾವಕಾಶ. ಸ್ಪೇನ್ ನಲ್ಲಿ ಇಂದು ಪುಟ್ಟ ಗ್ರಾಮವೇ ಮಾರಾಟಕ್ಕೆ ಇದೆಯಂತೆ. ಅದೂ ಜಸ್ಟ್ 2 ಕೋಟಿ ರೂ.ಗೆ.

ಸ್ಪೇನ್ ನ ಸಾಲ್ಟೊ ಡಿ ಕ್ಯಾಸ್ಟ್ರೊ ಎಂಬ ಗ್ರಾಮವನ್ನು ಮಾರಾಟಕ್ಕಿಡಲಾಗಿದೆಯಂತೆ. 30 ವರ್ಷಗಳಿಂದ ಜನವಸತಿಯಿಲ್ಲದ ಈ ಗ್ರಾಮವನ್ನು ಪ್ರಸ್ತುತ 2,27,000 ಯೂರೋ ಅಂದರೆ ಭಾರತೀಯ ಮೌಲ್ಯದ ಪ್ರಕಾರ 2,16,87,831 ರೂ.ಗಳಿಗೆ ಮಾರಾಟಕ್ಕಿಡಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ. ಅಂದಹಾಗೆ ಈ ಗ್ರಾಮವು ಪೋರ್ಚುಗಲ್ ಜೊತೆ ಗಡಿ ಹಂಚಿಕೊಂಡಿದ್ದು, ಝಮೊರಾ ಪ್ರಾಂತ್ಯದಲ್ಲಿದೆ. ಸ್ಪೇನ್ ನ ಮ್ಯಾಡ್ರಿಡ್ ನಿಂದ ಕೇವಲ 3 ಗಂಟೆ ಪ್ರಯಾಣ ಮಾಡಿದರೆ ಈ ಗ್ರಾಮ ಸಿಗುತ್ತದೆ. ಈ ಗ್ರಾಮದಲ್ಲಿ 44 ಮನೆಗಳು ಸೇರಿದಂತೆ ಹೋಟೆಲ್, ಚರ್ಚ್, ಶಾಲೆ, ಪುರಸಭೆ ಈಜುಕೊಳ, ಸಿವಿಲ್ ಗಾರ್ಡ್ ಹೊಂದಿದ ಬ್ಯಾರಕ್ ಕಟ್ಟಡಗಳನ್ನು ಒಳಗೊಂಡಿದೆ.

ಇದನ್ನೂ ಓದಿ: Surathkal toll: ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ; ಸುರತ್ಕಲ್ ಟೋಲ್ ರದ್ದು

2000ನೇ ಇಸವಿಯಲ್ಲಿ ಈ ಹಳ್ಳಿಯನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಉದ್ದೇಶದಿಂದ ವ್ಯಕ್ತಿಯೊಬ್ಬರು ಈ ಗ್ರಾಮವನ್ನು ಖರೀದಿಸಿದ್ದರು. ಆದರೆ ಯೂರೋಜೋನ್ ಆರ್ಥಿಕ ಬಿಕ್ಕಟ್ಟು ಸಮಸ್ಯೆಯಿಂದಾಗಿ ಪ್ರವಾಸಿ ತಾಣದ ಯೋಜನೆ ರದ್ದುಗೊಂಡಿತ್ತು. ಮಾಲೀಕರು ಇಲ್ಲಿ ಹೋಟೆಲ್ ನಿರ್ಮಿಸುವ ಯೋಜನೆ ಕೂಡಾ ಹಾಕಿಕೊಂಡಿದ್ದರು. ಆದರೆ ಎಲ್ಲವನ್ನೂ ತಡೆಹಿಡಿಯಲಾಗಿದೆಯಂತೆ. ಸ್ಪ್ಯಾನಿಶ್ ಆಸ್ತಿ ವ್ಯವಹಾರ ವೈಬ್ ಸೈಟ್ ಐಡಿಯಲಿಸ್ಟಾದಲ್ಲಿ ಈ ಆಸ್ತಿಯನ್ನು ಪಟ್ಟಿ ಮಾಡಲಾಗಿದೆ. ‘ತಾನು ನಗರ ವಾಸಿಯಾಗಿದ್ದು ಹಾಗೂ ಪಿತ್ರಾರ್ಜಿತ ವಾರಸುದಾರರು ಇಲ್ಲದ ಹಿನ್ನೆಲೆ ಈ ಆಸ್ತಿಯನ್ನು ನೋಡಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಈ ಆಸ್ತಿಯನ್ನು ಮಾರಾಟ ಮಾಡಲು ನಿರ್ಧರಿಸಿದ್ದೇನೆ’ ಎಂದು ಆಸ್ತಿ ಮಾಲೀಕ ಹೇಳಿಕೆಯನ್ನು ವೆಬ್ ಸೈಟ್ ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Preity Zinta : ಮಕ್ಕಳ ದಿನಾಚರಣೆ : ಅವಳಿ ಮಕ್ಕಳ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ ನಟಿ ಪ್ರೀತಿ ಜಿಂಟಾ

ಈ ಗ್ರಾಮವನ್ನು ಶೇಕಡಾ 100ರಷ್ಟು ನಗರವನ್ನಾಗಿಸಲು ಹಾಗೂ ಲಾಭದಾಯಕವನ್ನಾಗಿಸಲು ಬೇಕಾಗುವ ಹೂಡಿಕೆಯು 2 ಮಿಲಿಯನ್ ಯುರೋಗಳನ್ನು ಮೀರಲ್ಲ ಎಂದು ವೆಬ್ ಸೈಟ್ ನಲ್ಲಿ ತಿಳಿಸಲಾಗಿದೆ. ಇದಕ್ಕೆ ಬ್ರಿಟನ್, ಫ್ರಾನ್ಸ್, ಬೆಲ್ಜಿಯಂ ಮತ್ತು ರಷ್ಯಾದ ಹಲವರು ಆಸಕ್ತಿಯನ್ನು ತೋರಿದ್ದಾರೆ. ಅಲ್ಲದೇ ಒಬ್ಬ ವ್ಯಕ್ತಿಯು ಆಸ್ತಿಯನ್ನು ತನಗೆ ಕಾಯ್ದಿರಿಸುವಂತೆ ಮುಂಗಡ ಹಣವನ್ನು ಪಾವತಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Spain village for sale: An Entire Spanish Village Is On Sale For ₹ 2.1 Crore

Comments are closed.